PM Surya Ghar Scheme: 300 ಯೂನಿಟ್ ಉಚಿತ ವಿದ್ಯುತ್ ಬಳಿಕ, ಮೋದಿ ಸರ್ಕಾರದ ಮುಂದಿನ ಮಹತ್ವದ ಪ್ಲಾನ್ ಏನು ಗೊತ್ತಾ?
PM Surya Ghar Free Electricity Scheme: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶೀಘ್ರದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ನಿಟ್ಟಿನಲ್ಲಿ ಅವುಗಳ ಫೈನಲ್ ಕ್ಷಮತೆಯನ್ನು ಅಂದಾಜಿಸಲು ದೇಶಾದ್ಯಂತ ಒಂದು ಸಮೀಕ್ಷೆಯನ್ನು ಆರಂಭಿಸಲಿದೆ. (Business News In Kannada)
PM Surya Ghar Yojana 2024: ದೇಶದ ನಾಗರಿಕರಿಗೆ ಮಾಸಿಕ 300 ಯೂನಿಟ್ ಉಚಿತ ವಿದ್ಯುತ್ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ (Modi Government) ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ದೇಶಾದ್ಯಂತ 1 ಕೋಟಿ ಜನರಿಗೆ ವಸತಿ ವಲಯದಲ್ಲಿ 30 ಗಿಗಾವ್ಯಾಟ್ ಮೇಲ್ಛಾವಣಿ ಸೌರ ಘಟಕ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ಇದೀಗ ವಾಣಿಜ್ಯ ಸುದ್ದಿ ವಾಯಿನಿಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಟ್ಟಡಗಳಲ್ಲಿ ಸೌರ ಫಲಕ ಅಳವಡಿಸಲು ಕೇಂದ್ರ ಸರ್ಕಾರ ಅವುಗಳ ಅಂತಿಮ ಸಾಮರ್ಥ್ಯವನ್ನು ಅಂದಾಜಿಸಲು ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.(Business News In Kannada)
15 GW ಸ್ಥಾಪನೆಯ ಗುರಿ ಹೊಂದಲಾಗಿದೆ
ವರದಿಯ ಪ್ರಕಾರ, ಹೊಸ ಮತ್ತು ನವೀಕರಿಸಬಹುದಾದ ಇಂಧನದ ಹಿರಿಯ ಅಧಿಕಾರಿಗಳು 2024-25 ರ ವೇಳೆಗೆ ಸರ್ಕಾರಿ ಕಟ್ಟಡಗಳು, ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಹೆಚ್ಚುವರಿ 15 GW ಅನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದ್ದಾರೆ.(Free Electricity Scheme)
8 ಸರಕಾರಿ ಕಂಪನಿಗಳು ಪಾಲ್ಗೊಳ್ಳಲಿವೆ
ವಸತಿ ಮೇಲ್ಛಾವಣಿ ಸೌರ ಯೋಜನೆಯಲ್ಲಿ ಭಾಗವಹಿಸಲು ಈ ಹಿಂದೆ ಕೋರಲಾಗಿದ್ದ ವಿದ್ಯುತ್ ವಲಯದ ಎಂಟು ಸಾರ್ವಜನಿಕ ವಲಯದ ಉದ್ಯಮಗಳು ಈಗ ಸರ್ಕಾರಿ ಕಟ್ಟಡಗಳಿಗೆ ಮೇಲ್ಛಾವಣಿ ಸೌರ ಘಟಕಗಳನ್ನು ಅಳವಡಿಸಲು ಕೋರಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಹಿರಿಯ ಎಂಎನ್‌ಆರ್‌ಇ ಅಧಿಕಾರಿಯೊಬ್ಬರು, "ಕಟ್ಟಡಗಳಲ್ಲಿ ಮೇಲ್ಛಾವಣಿ ಸೌರಶಕ್ತಿ ಘಟಕವನ್ನು ಅಳವಡಿಸಲು ಸಿಪಿಎಸ್‌ಯುಗಳು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳೊಂದಿಗೆ ಕೆಲಸ ಮಾಡಲಿದ್ದಾರೆ. ಅವರು ಸರ್ಕಾರಿ ಕಟ್ಟಡಗಳಿಗೆ RESCO ಮಾಡೆಲ್ ಅನ್ನು ಅನುಸರಿಸಲಿದ್ದಾರೆ" ಎಂದು ಹೇಳಿದ್ದಾರೆ. (Pm surya ghar yojana last date to apply online)
ನವೀಕರಿಸಬಹುದಾದ ಇಂಧನ ಸೇವಾ ಕಂಪನಿ (RESCO) ಒಂದು ಸೌರ ಹಣಕಾಸು ಮಾದರಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಟ್ಟಡಗಳಲ್ಲಿ ಸೌರ ಫಲಕ ಅಳವಡಿಕೆಯ ಅಂತಿಮ ಸಾಮರ್ಥ್ಯವನ್ನು ನಿರ್ಣಯಿಸಲು ಸರ್ಕಾರ ಶೀಘ್ರದಲ್ಲೇ ಸಮೀಕ್ಷೆಯನ್ನು ಆರಂಭಿಸಲಿದೆ.
ಸರಕಾರ ಸಹಾಯಧನ ನೀಡಲಿದೆ
ಇದನ್ನೂ ಓದಿ-March Deadline ಮಿಸ್ ಆಗೋದ್ರೋಳಗೆ ಈ ಕೆಲಸ ಮಾಡಿ, ಇಲ್ದಿದ್ರೆ!
ಹೊಸ ಯೋಜನೆಯಡಿ, 1-ಕಿಲೋವ್ಯಾಟ್ ಮೇಲ್ಛಾವಣಿಯ ಸೌರ ಘಟಕ ಸ್ಥಾಪಿಸುವವರಿಗೆ ಕನಿಷ್ಠ ಸಬ್ಸಿಡಿ 30,000 ರೂ. 2 ಕಿಲೋವ್ಯಾಟ್ ಸಿಸ್ಟಂ ಅಳವಡಿಸುವವರಿಗೆ ಹೊಸ ಸಬ್ಸಿಡಿ 60,000 ರೂ. 3 ಕಿಲೋವ್ಯಾಟ್ ರೂಫ್‌ಟಾಪ್ ಸೋಲಾರ್ ಸಿಸ್ಟಮ್ ಅಳವಡಿಸುವ ಕುಟುಂಬಗಳಿಗೆ 78,000 ರೂ ಸಬ್ಸಿಡಿ ಸಿಗಲಿದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಇದನ್ನೂ ಓದಿ-Chocolate, Swiss Watch ಪ್ರಿಯರಿಯೊಂದು ಸಂತಸದ ಸುದ್ದಿ!
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ, ಬ್ಯಾಂಕ್‌ಗಳು ಸೌರ ಫಲಕಗಳನ್ನು ಅಳವಡಿಸಲು ಜನರನ್ನು ಪ್ರೋತ್ಸಾಹಿಸಲಿವೆ ಮತ್ತು ಅಗ್ಗದ ಸಾಲವನ್ನು ನೀಡಲಿವೆ. ಬಹುತೇಕ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಪ್ರಸ್ತುತ, ಯಾವುದೇ ರೀತಿಯ ಅಡಮಾನ ಇರಿಸದೆ ಶೇಕಡಾ 7 ಕ್ಕಿಂತ ಕಡಿಮೆ ಬಡ್ಡಿದರದಲ್ಲಿ 3 kW ವರೆಗೆ ಮನೆ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಸ್ಥಾಪಿಸಲು ಸಾಲವನ್ನು ನೀಡಲಾಗುತ್ತಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ