Good News For Swiss Watch And Chocloate Lovers: ಭಾನುವಾರ ಭಾರತ ಮತ್ತು ನಾಲ್ಕು ಯೂರೋಪಿಯನ್ ರಾಷ್ಟ್ರಗಳನ್ನು ಒಳಗೊಂಡ EFTA ಬ್ಲಾಕ್ ವ್ಯಾಪಾರ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ. ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತವು ಉತ್ತಮ ಗುಣಮಟ್ಟದ ಸ್ವಿಸ್ ಉತ್ಪನ್ನಗಳಾದ ಮಣಿಕಟ್ಟಿನ ಕೈಗಡಿಯಾರಗಳು (Swiss Watches), ಚಾಕೊಲೇಟ್‌ಗಳು (Swiss Chocol), ಬಿಸ್ಕತ್ತುಗಳು ಮತ್ತು ಗೋಡೆ ಗಡಿಯಾರಗಳ ಮೇಲಿನ ಕಸ್ಟಮ್ಸ್ ಸುಂಕಗಳನ್ನು ಕ್ರಮೇಣ ತೆಗೆದುಹಾಕಲಿದೆ. ಇದು ದೇಶೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಈ ಉತ್ಪನ್ನಗಳಿಗೆ ಪ್ರವೇಶ ನೀಡಲಿದೆ. (Business News In Kannada)
ಯಾವಾಗ ಕಾರ್ಯರೂಪಕ್ಕೆ ಬರಲಿದೆ (Good News For Swilss Watches Chocloate Lovers)
ಭಾರತ ಮತ್ತು 4 ಯುರೋಪಿಯನ್ ರಾಷ್ಟ್ರಗಳ ಇಎಫ್‌ಟಿಎ ಸಮೂಹ ಭಾನುವಾರ ಪರಸ್ಪರ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸಲು ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (TEPA) ಸಹಿ ಹಾಕಿವೆ. ಯುರೋಪಿಯನ್ ಮುಕ್ತ ವ್ಯಾಪಾರ ಒಪ್ಪಂದದ (EFTA) ರಾಷ್ಟ್ರಗಳಲ್ಲಿ ಐಸ್ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ದೇಶಗಳು ಶಾಮೀಳಾಗಿವೆ. ವಿವಿಧ ದೇಶಗಳಲ್ಲಿ ಈ ಒಪ್ಪಂದವನ್ನು ಅನುಮೋದಿಸುವ ವಿವರವಾದ ಪ್ರಕ್ರಿಯೆಯಿಂದಾಗಿ, ಇದು ಕಾರ್ಯರೂಪಕ್ಕೆ ಬರಲು ಒಂದು ವರ್ಷದವರೆಗೆ ಕಾಲಾವಕಾಶ ಬೇಕಾಗಲಿದೆ.
ಇದನ್ನೂ ಓದಿ-New PPF Interest Rates: ಸರ್ಕಾರದ ವತಿಯಿಂದ ಹೊಸ ಪಿಪಿಎಫ್ ಬಡ್ಡಿ ದರ ಘೋಷಣೆ, ಏಪ್ರಿಲ್ ನಿಂದ ಅನ್ವಯ!
ಈ ಕುರಿತು ಮಾಹಿತಿಯನ್ನು ನೀಡಿರುವ ಅಧಿಕಾರಿಯೊಬ್ಬರು ನಾವು ಸ್ವಿಸ್ ವಾಚ್ ಮತ್ತು ಚಾಕೊಲೇಟ್‌ಗಳ (Swiss Watches And Chocolates) ಮೇಲೆ ಸುಂಕ ರಿಯಾಯ್ತಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಸ್ವಿಟ್ಜರ್ಲೆಂಡ್‌ನ ಕೆಲವು ಪ್ರಸಿದ್ಧ ವಾಚ್ ಬ್ರ್ಯಾಂಡ್‌ಗಳಾದ ರೋಲೆಕ್ಸ್, ಒಮೆಗಾ ಮತ್ತು ಕಾರ್ಟಿಯರ್. ಸ್ವಿಸ್ ಬ್ರ್ಯಾಂಡ್ ನೆಸ್ಲೆ ಭಾರತೀಯ FMCG ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿ ಮತ್ತು ಚಾಕೊಲೇಟ್ ತಯಾರಕ. ಇದು ಭಾರತೀಯ ಎಫ್‌ಎಂಸಿಜಿ ವಿಭಾಗದಲ್ಲಿ ಮೂರನೇ ಅತಿ ದೊಡ್ಡ ಲಿಸ್ಟೆಡ್ ಕಂಪನಿಗಳಾಗಿವೆ.
ಇದನ್ನೂ ಓದಿ-Basic Salary Hike: ತುಟ್ಟಿಭತ್ಯೆ ಹೆಚ್ಚಳ ಆಯ್ತು, ಇದೀಗ ಮೂಲ ವೇತನ ಹೆಚ್ಚಳದ ಸರದಿ, ಯಾವಾಗ ಸಿಗಲಿದೆ ಗುಡ್ ನ್ಯೂಸ್?
ಕಡಿಮೆ ಬೆಲೆಯಲ್ಲಿ ಸ್ವಿಸ್ ಉತ್ಪನ್ನಗಳು ಸಿಗಲಿವೆ
ಆರ್ಥಿಕ ಸಂಶೋಧನಾ ಸಂಸ್ಥೆಯಾದ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್‌ಇ) ನಡೆಸಿದ TEPA ದಾಖಲೆಗಳ ವಿಶ್ಲೇಷಣೆಯ ಪ್ರಕಾರ, ಒಪ್ಪಂದದ ಅಡಿಯಲ್ಲಿ ಭಾರತವು ಸ್ವಿಟ್ಜರ್ಲೆಂಡ್‌ನಿಂದ ಆಮದು ಮಾಡಿಕೊಳ್ಳುವ ಅನೇಕ ಉತ್ಪನ್ನಗಳಿಗೆ ಸುಂಕದ ರಿಯಾಯಿತಿಗಳನ್ನು ನೀಡಲಿದೆ. ಈ ಕುರಿತು ಮಾತನಾಡಿರುವ GTRI ಸಂಸ್ಥಾಪಕ ಅಜಯ್ ಶ್ರೀವಾಸ್ತವ, 7 ರಿಂದ 10 ವರ್ಷಗಳಲ್ಲಿ ಅನೇಕ ಸ್ವಿಸ್ ಸರಕುಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಭಾರತ ನಿರ್ಧರಿಸಿದೆ. ಇದರೊಂದಿಗೆ, ಭಾರತೀಯ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ವಿಸ್ ಉತ್ಪನ್ನಗಳನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ