ಬೆಂಗಳೂರು : ಕೇಂದ್ರ ಸರ್ಕಾರ ಯುವಕರಿಗಾಗಿ 'ಪಿಎಂ ಯುವ 2.0 ಯೋಜನೆ' ಆರಂಭಿಸಲಾಗುತ್ತಿದೆ. ಇದರ ಅಡಿಯಲ್ಲಿ ಯುವ ಬರಹಗಾರರಿಗೆ ವಿವಿಧ ವಿಷಯಗಳ ಕುರಿತು ಬರೆಯುವ ಅವಕಾಶ ನೀಡಲಾಗುತ್ತಿದೆ. ಈ  ಯೋಜನೆಯಡಿ ಆಯ್ಕೆಯಾಗುವ ಯುವ ಬರಹಗಾರರಿಗೆ ಪ್ರತಿ ತಿಂಗಳು 50,000 ರೂ.ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.


COMMERCIAL BREAK
SCROLL TO CONTINUE READING

30 ವರ್ಷದೊಳಗಿನವರು ಈ ಯೋಜನೆಯಲ್ಲಿ ಭಾಗವಹಿಸಬಹುದು :
ಯೋಜನೆಯಡಿಯಲ್ಲಿ, 30 ವರ್ಷದೊಳಗಿನ ಯುವಕರು ಭಾಗವಹಿಸಬಹುದು. ಇದಕ್ಕಾಗಿ ಜನವರಿ 15 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ಯುವ ಮತ್ತು ಹೊಸ ಬರಹಗಾರರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿ ಯುವ ಯೋಜನೆಯ ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗಿದೆ. ದೇಶದಲ್ಲಿ ಓದುವ ಮತ್ತು ಬರೆಯುವ ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.


ಇದನ್ನೂ ಓದಿ : Gold Price Today : ಚಿನ್ನ ಖರೀದಿಸಬೇಕೆ? ಹಾಗಿದ್ದರೆ ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ ತಿಳಿಯಿರಿ


ಈ ಯೋಜನೆಯಡಿಯಲ್ಲಿ 75 ಬರಹಗಾರರನ್ನು ಆಯ್ಕೆ ಮಾಡಲಾಗುವುದು : 
ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ಒಟ್ಟು 75 ಬರಹಗಾರರನ್ನು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (NBT) ಆಯ್ಕೆ ಮಾಡುತ್ತದೆ.  ತರಬೇತಿ ಮತ್ತು ಮಾರ್ಗದರ್ಶನದ ಕೊನೆಯಲ್ಲಿ ಪ್ರತಿ ತಿಂಗಳಿಗೆ 50,000 ರೂ. ಶಿಷ್ಯವೇತನದಂತೆ ಆರು ತಿಂಗಳಿಗೆ ಪ್ರತಿ ಯುವ ಬರಹಗಾರರಿಗೆ 3 ಲಕ್ಷ ರೂ. ನೀಡಲಾಗುವುದು. 


ಈ ಭಾಷೆಗಳಲ್ಲಿ ಅರ್ಜಿ ಸಲ್ಲಿಸಬಹುದು :
22 ವಿವಿಧ ಭಾಷೆಗಳನ್ನು ಬಲ್ಲವರು ು 'PM ಯುವ 2.0 ಯೋಜನೆ'ಯಲ್ಲಿ ಭಾಗವಹಿಸಬಹುದು. ಇಂಗ್ಲಿಷ್, ಹಿಂದಿ, ಉರ್ದು, ಅಸ್ಸಾಮಿ, ಬಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ  ಭಾಷೆಗಳನ್ನು ಬಲ್ಲವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 


ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!


ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ? :
ಮೊದಲು https://innovateindia.mygov.in/yuva/ ವೆಬ್‌ಸೈಟ್‌ಗೆ ಹೋಗಿ. ಇಲ್ಲಿ ಕೆಳಗಿನ ಎಡಭಾಗದಲ್ಲಿರುವ 'Click here to submit' ಮೇಲೆ ' ಕ್ಲಿಕ್ ಮಾಡಿ. PM ಯುವ 2.0 ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಇಲ್ಲಿ ನೀವು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ,  ಸಲ್ಲಿಸಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.