ನವದೆಹಲಿ : PNB Property Auction 2022 : ಹೊಸ ವರ್ಷದಲ್ಲಿ ಪ್ರೈಮ್ ಲೊಕೇಶನ್ ಪ್ರಾಪರ್ಟಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಲ್ಲಿದೆ ಸುವರ್ಣಾವಕಾಶ. ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತೊಮ್ಮೆ ಕೈಗೆಟುಕುವ ದರದಲ್ಲಿ ಮನೆಗಳನ್ನು ಖರೀದಿಸಲು ಅವಕಾಶವನ್ನು ನೀಡುತ್ತಿದೆ. ಬ್ಯಾಂಕ್ ಮೆಗಾ ಇ-ಹರಾಜು  (PNB E-Auction) ಪ್ರಕ್ರೀಯೆಯನ್ನು ದೇಶದಾದ್ಯಂತ ಆಯೋಜಿಸುತ್ತಿದೆ.


COMMERCIAL BREAK
SCROLL TO CONTINUE READING

ಟ್ವಿಟರ್ ಮೂಲಕ ಮಾಹಿತಿ ನೀಡಿದ ಬ್ಯಾಂಕ್ : 
PNB ಆಯೋಜಿಸಿರುವ ಇ-ಹರಾಜಿನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಇದಕ್ಕಾಗಿ 31 ಜನವರಿ 2022 ರಂದು ಇ-ಹರಾಜಿನಲ್ಲಿ ಬಿಡ್ ಮಾಡಬಹುದು. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಹರಾಜು ಮಾಡಲಿರುವ ಆಸ್ತಿಗಳಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳು  (residential and commercial property) ಸೇರಿವೆ. ಈ ಬಗ್ಗೆ ಬ್ಯಾಂಕ್ ಅಧಿಕೃತ ಟ್ವಿಟರ್ (twitter) ಖಾತೆ ಮೂಲಕ ಮಾಹಿತಿ ನೀಡಿದೆ.


Bumper Savings: ಹಣ ಉಳಿತಾಯ ಇದೀಗ ತುಂಬಾ ಸಿಂಪಲ್, '3 Day Rule' ಬಳಕೆಯಿಂದ ಬಂಪರ್ ಉಳಿತಾಯ


 ಆಗಾಗ ಹರಾಜು ಪ್ರಕ್ರೀಯೆ ನಡೆಸುವ ಬ್ಯಾಂಕ್ : 
PNB ಅಥವಾ ದೇಶದ ಇತರ ಬ್ಯಾಂಕ್‌ಗಳು (Bank Auction) ಕಾಲಕಾಲಕ್ಕೆ ಆಸ್ತಿಯನ್ನು ಹರಾಜು ಮಾಡುತ್ತಲೇ ಇರುತ್ತವೆ. ಬ್ಯಾಂಕ್ (Bank) ಪರವಾಗಿ ಇ-ಹರಾಜಿನಲ್ಲಿ, ಎನ್‌ಪಿಎ ಪಟ್ಟಿಯಲ್ಲಿ ಬಂದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತದೆ. ಅಂದರೆ, ಸಾಲವನ್ನು ತೆಗೆದುಕೊಂಡ ನಂತರ ಅವುಗಳ ಮಾಲೀಕರು ಬ್ಯಾಂಕಿನ ಬಾಕಿಯನ್ನು ಪಾವತಿಸದ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ. 


ಇ-ಹರಾಜಿನಲ್ಲಿ ಭಾಗವಹಿಸುವುದು ಹೇಗೆ?
 PNB ಯ ಮೆಗಾ ಇ-ಹರಾಜಿನಲ್ಲಿ ಬಿಡ್ ಮಾಡಬೇಕಾದರೆ, ಮೊದಲು ಇ-ಸೇಲ್ ಪೋರ್ಟಲ್ https://ibapi.in/ ನಲ್ಲಿ ನೋಂದಾಯಿಸಿಕೊಳ್ಳಬೇಕು . ಇಲ್ಲಿ ನೋಂದಣಿಗಾಗಿ ಪೋರ್ಟಲ್‌ಗೆ ಹೋದರೆ, ಮೊದಲ ಪುಟದಲ್ಲಿ, ಬಿಡ್ಡರ್‌ಗಳ ನೋಂದಣಿಯ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇಲ್ಲಿ ಮೊಬೈಲ್ ಸಂಖ್ಯೆ (Mobile number) ಮತ್ತು ಇಮೇಲ್ (Email) ಮೂಲಕ ನೋಂದಾಯಿಸಿಕೊಳ್ಳಬಹುದು.


ಇದನ್ನೂ ಓದಿ :  PM Kisan ನಿಯಮದಲ್ಲಿ ಬದಲಾವಣೆ , ಈ ದಾಖಲೆ ಇಲ್ಲದಿದ್ದರೆ ಖಾತೆ ಸೇರುವುದಿಲ್ಲ ಹಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.