Bumper Savings: ಹಣ ಉಳಿತಾಯ ಇದೀಗ ತುಂಬಾ ಸಿಂಪಲ್, '3 Day Rule' ಬಳಕೆಯಿಂದ ಬಂಪರ್ ಉಳಿತಾಯ

Tips For Saving Money - 'ಮೂರು ದಿನದ ನಿಯಮ'ವನ್ನು ಅನುಸರಿಸುವ ಮೂಲಕ, ಮಹಿಳೆಯು £300 ವರೆಗೆ ಅಂದರೆ ಸುಮಾರು ₹ 30,420 ಪ್ರತಿ ತಿಂಗಳು ಉಳಿತಾಯ ಮಾಡಿದ್ದಾಳೆ. ಅಷ್ಟೇ ಅಲ್ಲ ಇದರಿಂದ ಆ ಮಹಿಳೆ ತನ್ನ ಮನೆಗಾಗಿ ಠೇವಣಿ ಮೊತ್ತವನ್ನು ಉಳಿಸಿದ್ದಾಳೆ.

Written by - Nitin Tabib | Last Updated : Jan 18, 2022, 09:34 PM IST
  • ತ್ರೀ ಡೇ ರೂಲ್ ನಿಂದ ಬಂಪರ್ ಉಳಿತಾಯ
  • ಹಣ ಉಳಿತಾಯದ ಸುಲಭ ವಿಧಾನಗಳನ್ನು ಅನುಸರಿಸಿ
  • ಓರ್ವ ಮಹಿಳೆ ಪ್ರತಿ ತಿಂಗಳಿಗೆ 300 (₹30,420) ಹಣ ಉಳಿತಾಯ ಮಾಡಿದ್ದಾಳೆ
Bumper Savings: ಹಣ ಉಳಿತಾಯ ಇದೀಗ ತುಂಬಾ ಸಿಂಪಲ್, '3 Day Rule' ಬಳಕೆಯಿಂದ ಬಂಪರ್ ಉಳಿತಾಯ title=
Three Day Rule

How To Save Money: ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು (Economical Easy Tricks) ಮಾಡಿಕೊಳ್ಳುವ ಮೂಲಕ, ನೀವು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಉಳಿಸುವಲ್ಲಿ (Save Money) ಯಶಸ್ವಿಯಾಗಬಹುದು. ಉಳಿತಾಯ ಪ್ರಿಯ ಮಹಿಳೆಯೊಬ್ಬರು ಇತ್ತೀಚೆಗೆ ಮೂರು ದಿನಗಳ ನಿಯಮವನ್ನು ಬಳಸಿಕೊಂಡು ತಿಂಗಳಿಗೆ £ 300 ವರೆಗೆ ಉಳಿಸಬಹುದು (Savings)  ಎಂದು ಹೇಳಿದ್ದಾರೆ. ಈ ಮಹಿಳೆಯ ಹೆಸರು ಅನ್ನಿ ಲೇ ಮತ್ತು ಅವಳು ವೇಲ್ಸ್‌ನ(Wales) ಸ್ವಾನ್ಸೀ (Swansea)  ಮೂಲದವಳು.

ಉಳಿತಾಯ ಮಾಡಲು ನಿರ್ಧರಿಸಿದೆ
ನಾವೆಲ್ಲರೂ ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಏನಾದರೂ ಅಥವಾ ಇನ್ನೊಂದನ್ನು ಪಡೆಯಲು ಉಳಿತಾಯವನ್ನು ಮಾಡಲು ಪ್ರಯತ್ನಿಸುತ್ತೇವೆ ಮತ್ತು ಕಠಿಣ ಪರಿಶ್ರಮದ ನಂತರ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಆದರೆ ಈ ಕಷ್ಟದ ಕೆಲಸವನ್ನು ಅನ್ನಿ ಲೇ ಸುಲಭಗೊಳಿಸಿದ್ದಾಳೆ. ಮೊದಲು 24 ವರ್ಷದ ಅನ್ನಿ ಲೇ ಈ ವರ್ಷ ಮನೆಗಾಗಿ  ಠೇವಣಿ (House Deposit) ಮಾಡಲು ಕಡಿಮೆ ಹಣವನ್ನು ಖರ್ಚು  (Expense) ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಹೆಚ್ಚು ಹೆಚ್ಚು ಉಳಿತಾಯ ಮಾಡಲು ಯೋಜನೆ (Plan) ರೂಪಿಸಿದ್ದಾರೆ. ಬಳಿಕ ಅನ್ನಿ ಲೇ ಕಾರ್ಯಕ್ಕೆ ಇಳಿದಿದ್ದಾರೆ ಮತ್ತು ಅದಕ್ಕಾಗಿ ಅವಳು ಮೂರು ದಿನಗಳ ನಿಯಮವನ್ನು ಅನುಸರಿಸಲು ಆರಂಭಿಸಿದ್ದಾಳೆ.

ಏನಿದು ಮೂರು ದಿನಗಳ ನಿಯಮ?
ತ್ರೀ ಡೇ ರೂಲ್ (Three Day Rule) ಪ್ರಕಾರ, ಯಾವುದೇ ಒಂದು ವಸ್ತು ಆನಿಗೆ ತುಂಬಾ ಇಷ್ದವಾಗಿದೆ ಎಂದಿಟ್ಟುಕೊಳ್ಳೋಣ ಆದರೆ, ಸದ್ಯಕ್ಕೆ ಅದರ ಅವಶ್ಯಕತೆ ಅವಳಿಗಿಲ್ಲ. ಆಗ ಆನಿ ಲೇ ಆ ವಸ್ತುವಿನ ಒಂದು ಫೋಟೋ ಅಥವಾ ಸ್ಕ್ರೀನ್ ಶಾಟ್ ತೆಗೆದುಕೊಂಡು ಇಟ್ಟುಕೊಳ್ಳುತ್ತಾಳೆ. ಒಂದು ವೇಳೆ ಮೂರು ದಿನಗಳ ಬಳಿಕ ಆ ವಸ್ತು ಖರೀದಿಸುವುದು ಆನಿಗೆ ಅವಶ್ಯಕತೆ ಎನಿಸಿದರೆ ಅವಳು ಅದನ್ನು ಖರೀದಿಸಲು (Purchase) ಪುನಃ ಮಾರುಕಟ್ಟೆಗೆ ಹೋಗುತ್ತಾಳೆ.

ಇದನ್ನೂ ಓದಿ-ಕಡಿಮೆ ಬೆಲೆಯಲ್ಲಿ TATA ಕಾರು ಖರೀದಿಸುವ ಕೊನೆಯ ಅವಕಾಶ, ತಪ್ಪಿದರೆ ಪಡಬೇಕಾಗುತ್ತದೆ ಪಶ್ಚಾತಾಪ

ನೀವು ಖರ್ಚುಗಳನ್ನು ಹೇಗೆ ನಿಯಂತ್ರಿಸಬಹುದು?
ವಾಸ್ತವವಾಗಿ, ಮೂರು ದಿನಗಳ ನಿಯಮವು ಖರೀದಿಯ ಪ್ರಚೋದನೆಯನ್ನು (Impulse) ನಿಲ್ಲಿಸಲು ಸಹಾಯ ಮಾಡುತ್ತದೆ. ಮೂರು ದಿನಗಳವರೆಗೆ, ನೀವು ಖರೀದಿಸಲು ಬಯಸುವ ವಸ್ತುವು ನಿಜವಾಗಿಯೂ ನಿಮ್ಮ ಅವಶ್ಯಕತೆಯಾಗಿದೆಯಾ? ಅಥವಾ ಹಲವು ವರ್ಷಗಳ ಕಾಲ ಹಳೆಯ ಪೆಟ್ಟಿಗೆಯಲ್ಲಿ ಧೂಳು ತಿನ್ನಲು ಬಲಿಯಾಗುತ್ತದೆಯಾ ಎಂಬುದನ್ನು  ಯೋಚಿಸಲು ನಿಮಗೆ ಅವಕಾಶ ನೀಡುತ್ತದೆ.  ಇದಲ್ಲದೆ, Storewards, Shoppix, SnapMyEats ಹಾಗೂ  HuYu ಗಳಂತಹ ಆಪ್ ಗಳು ಹಲವು ಹೊಸ ಐಟಂಗಳು ಉಚಿತವಾಗಿ ನಿಮಗೆ ನೀಡುತ್ತವೆ ಎಂದು ಆನಿ ಹೇಳುತ್ತಾರೆ. 

ಇದನ್ನೂ ಓದಿ-PM Kisan ನಿಯಮದಲ್ಲಿ ಬದಲಾವಣೆ , ಈ ದಾಖಲೆ ಇಲ್ಲದಿದ್ದರೆ ಖಾತೆ ಸೇರುವುದಿಲ್ಲ ಹಣ

ಮಾರ್ಕೆಟಿಂಗ್ ನ ಕಪಿಮುಷ್ಟಿಯಲ್ಲಿ ಸಿಲುಕಿಕೊಳ್ಳಬೇಡಿ
ಮಹಿಳೆಯರು ಮಾರ್ಕೆಟಿಂಗ್‌ಗೆ ಬಲಿಯಾಗದೆ, ಶಾಪಿಂಗ್ ಪಟ್ಟಿಯನ್ನು ತಯಾರಿಸಬೇಕು ಮತ್ತು ಆ ಪಟ್ಟಿಗೆ ಅಂಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಆನಿ ಹೇಳುತ್ತಾರೆ. ಅಲ್ಲದೆ, ಹಣವನ್ನು ಉಳಿಸಲು, ಕೇವಲ ಮೂರು ದಿನಗಳ ನಿಯಮವಲ್ಲ, ಮನಸ್ಸಿನಲ್ಲಿ ಸ್ಥಿರತೆಯನ್ನು ಹೊಂದಿರುವುದು ಬಹಳ ಮುಖ್ಯ. ಆನ್‌ಲೈನ್ ಶಾಪಿಂಗ್‌ಗಾಗಿ (Online Shopping) ಪ್ರೋಮೋ ಕೋಡ್‌ಗಳು (Promo Codes), ರಿಯಾಯಿತಿ ಕೋಡ್‌ಗಳು (Discount Code), ಕ್ಯಾಶ್‌ಬ್ಯಾಕ್ (Cash Back) ಇತ್ಯಾದಿಗಳನ್ನು ಎಚ್ಚರಿಕೆಯಿಂದ ಬಳಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯದಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.

ಇದನ್ನೂ ಓದಿ-LPG Booking Offer: ಅಗ್ಗವಾಗಿ LPG ಸಿಲಿಂಡರ್ ಪಡೆಯಲು ಉತ್ತಮ ಅವಕಾಶ, ಇಲ್ಲಿದೆ 2,700 ರೂ. ಆಫರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News