PM Kisan ನಿಯಮದಲ್ಲಿ ಬದಲಾವಣೆ , ಈ ದಾಖಲೆ ಇಲ್ಲದಿದ್ದರೆ ಖಾತೆ ಸೇರುವುದಿಲ್ಲ ಹಣ

PM Kisan Samman Nidhi:ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.  ಪಿಎಂ ಕಿಸಾನ್ ಯೋಜನೆಯಲ್ಲಿ  ಹೆಚ್ಚುತ್ತಿರುವ ವಂಚನೆಯನ್ನು ತಡೆಯಲು ನಿಯಮಗಳನ್ನು ಬದಲಾಯಿಸಲಾಗಿದೆ. 

Written by - Ranjitha R K | Last Updated : Jan 18, 2022, 02:26 PM IST
  • ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ
  • ಈಗ ಪಿಎಂ ಕಿಸಾನ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ನೀಡುವುದು ಕಡ್ಡಾಯ
  • ಇಲ್ಲದಿದ್ದರೆ ಮುಂದಿನ ಕಂತು ಖಾತೆ ಸೇರುವುದಿಲ್ಲ
PM Kisan ನಿಯಮದಲ್ಲಿ ಬದಲಾವಣೆ , ಈ ದಾಖಲೆ ಇಲ್ಲದಿದ್ದರೆ ಖಾತೆ ಸೇರುವುದಿಲ್ಲ ಹಣ  title=
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ (file photo)

ನವದೆಹಲಿ : PM Kisan Samman Nidhi : ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.  ಪಿಎಂ ಕಿಸಾನ್ ಯೋಜನೆಯಲ್ಲಿ(PM Kisan Samman Nidhi) ಹೆಚ್ಚುತ್ತಿರುವ ವಂಚನೆಯನ್ನು ತಡೆಯಲು ನಿಯಮಗಳನ್ನು ಬದಲಾಯಿಸಲಾಗಿದೆ. ಇದೀಗ ಪಿಎಂ ಕಿಸಾನ್ ನೋಂದಣಿಗೆ ಪಡಿತರ ಚೀಟಿಯನ್ನು ((Ration Card) ಕಡ್ಡಾಯಗೊಳಿಸಲಾಗಿದೆ. ಪಡಿತರ ಚೀಟಿ ಸಂಖ್ಯೆ ಬಂದ ನಂತರವೇ, ಪತಿ ಅಥವಾ ಪತ್ನಿ ಅಥವಾ ಆ ಕುಟುಂಬದ ಯಾವುದೇ ಒಬ್ಬ ಸದಸ್ಯ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi)ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಈಗ ಈ ದಾಖಲೆಗಳನ್ನು ನೀಡುವುದು ಕಡ್ಡಾಯ :  
ಈ ಯೋಜನೆಯಡಿ, ಹೊಸ ನೋಂದಣಿಗಾಗಿ ಪೋರ್ಟಲ್‌ನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿರುತ್ತದೆ (Ration Card Mandatory). ಇದಲ್ಲದೆ, ಅದರ ಪಿಡಿಎಫ್ ಅನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ. ಈಗ ಖಾತೆ,   ಆಧಾರ್ ಕಾರ್ಡ್ (Aadhaar card), ಬ್ಯಾಂಕ್ ಪಾಸ್‌ಬುಕ್ ಮತ್ತು ಡಿಕ್ಲರೇಶನ್‌ನ ಹಾರ್ಡ್ ಕಾಪಿಗಳನ್ನು ಸಲ್ಲಿಸುವುದು ಕಡ್ಡಾಯವಲ್ಲ. ಈಗ ದಾಖಲೆಗಳ ಪಿಡಿಎಫ್ ಫೈಲ್ ಅನ್ನು ರಚಿಸಬೇಕು ಮತ್ತು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರೊಂದಿಗೆ, ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Samman Nidhi) ವಂಚನೆ ನಿವಾರಣೆಯೊಂದಿಗೆ, ನೋಂದಣಿ ಮೊದಲಿಗಿಂತ ಸುಲಭವಾಗುತ್ತದೆ.

ಇದನ್ನೂ  ಓದಿ : 7th Pay Commission: ತುಟ್ಟಿ ಭತ್ಯೆ ಲೆಕ್ಕಾಚಾರದಲ್ಲಿ ಬದಲಾವಣೆ, ಈಗ ಕೈ ಸೇರಲಿರುವ ವೇತನ ಎಷ್ಟು ?

ಏನಿದು ಪಿಎಂ ಕಿಸಾನ್ ಯೋಜನೆ :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಪ್ರತಿ ವರ್ಷ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸಲಾಗುತ್ತದೆ. ಇದನ್ನು ಮೂರು ಸಮಾನ ಕಂತುಗಳಲ್ಲಿ ಅಂದರೆ ತಲಾ 2,000 ರೂಯಂತೆ ರೈತರ ಖಾತೆಗೆ ನೀಡಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ 10 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ, ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಬಿಡುಗಡೆಯಾಗಿದೆ. ನಿಮ್ಮ ಖಾತೆಗೆ ಹಣವನ್ನು ಇನ್ನೂ ವರ್ಗಾವರ್ಗಾವಣೆಯಾಗದಿದ್ದರೆ  ಮೊದಲು ನಿಮ್ಮ ಸ್ಟೇಟಸ್ ಮತ್ತು ಬ್ಯಾಂಕ್ ಖಾತೆಯನ್ನು (Bank account) ಪರಿಶೀಲಿಸಿಕೊಳ್ಳಿ. 

ಈ ರೀತಿಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ :
1. ಇದಕ್ಕಾಗಿ, ಮೊದಲು ನೀವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ .
2. ಈಗ ಅದರ ಮುಖಪುಟದಲ್ಲಿ Farmers Corner ಆಯ್ಕೆ ಕಾಣಿಸುತ್ತದೆ. 3Farmers Corner ವಿಭಾಗದಲ್ಲಿ, Beneficiaries List  ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
4. ಈಗ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ ನೀವು 'Get Report' ಮೇಲೆ ಕ್ಲಿಕ್ ಮಾಡಿ. 
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಇದನ್ನೂ ಓದಿ :  18-01-2022 Today Gold Price: ಬೆಳ್ಳಿ ದರ ಏರಿಕೆ, ಯಥಾಸ್ಥಿತಿ ಕಾಯ್ದುಕೊಂಡ ಬಂಗಾರದ ಬೆಲೆ

ನಿಮ್ಮ ಕಂತಿನ ಸ್ಥಿತಿಯನ್ನು ಪರಿಶೀಲಿಸಿ :
1. ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು, ನೀವು ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
2. ಈಗ ಬಲಭಾಗದಲ್ಲಿರುವ Farmers Corner ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ ನೀವು Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮೊಂದಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News