Post Office MIS: ಪ್ರತಿತಿಂಗಳು ನಿರ್ದಿಷ್ಟ ಆದಾಯ ನೀಡುವ ಅಂಚೆ ಕಚೇರಿಯ ಮಾಸಿಕ ಯೋಜನೆ
ನಿಮ್ಮ ಮಕ್ಕಳ ಹೆಸರಿನಲ್ಲಿ ನೀವು ಈ ವಿಶೇಷ ಖಾತೆಯನ್ನು ತೆರೆದರೆ, ನೀವು ಅವರ ಶಾಲಾ ಶುಲ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ನವದೆಹಲಿ: ನೀವು ಸುರಕ್ಷಿತ ಮತ್ತು ಸ್ಥಿರ ಲಾಭ ಗಳಿಸಲು ಬಯಸಿದರೆ ಪೋಸ್ಟ್ ಆಫೀಸ್ ಯೋಜನೆ ನಿಮಗೆ ಉತ್ತಮವಾಗಿದೆ. ಪೋಸ್ಟ್ ಆಫೀಸ್ ಎಂಐಎಸ್ ಅಂತಹ ಉತ್ತಮ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ನೀವು ಒಮ್ಮೆ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಲಾಭ ಪಡೆಯಲು ಸಾಧ್ಯವಾಗುತ್ತದೆ. ಈ ಖಾತೆಯಿಂದ ನಿಮಗೆ ಹಲವಾರು ಪ್ರಯೋಜನಗಳಿವೆ.
ಈ ಯೋಜನೆಯಡಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿಯೂ ಖಾತೆಯನ್ನು ತೆರೆಯಬಹುದು. ನಿಮ್ಮ ಮಕ್ಕಳ ಹೆಸರಿನಲ್ಲಿ ನೀವು ಈ ವಿಶೇಷ ಖಾತೆಯನ್ನು ತೆರೆದರೆ, ನೀವು ಅವರ ಶಾಲಾ ಶುಲ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಇದನ್ನೂ ಓದಿ: Hunter 350: ಇವೇ ನೋಡಿ ಬೆಸ್ಟ್ ಸೆಲ್ಲಿಂಗ್ ರಾಯಲ್ ಎನ್‌ಫೀಲ್ಡ್ 350CC ಬೈಕ್‌ಗಳು
ಖಾತೆಯನ್ನು ಎಲ್ಲಿ ಮತ್ತು ಹೇಗೆ ತೆರೆಯುವುದು?
ನೀವು ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು
ಇದರಡಿ ಕನಿಷ್ಠ 1000 ಮತ್ತು ಗರಿಷ್ಠ 4.5 ಲಕ್ಷ ರೂ. ಹೂಡಿಕೆ ಮಾಡಬಹುದು
ಪ್ರಸ್ತುತ ಈ ಯೋಜನೆಯಡಿ ಶೇ.6.6 ರಷ್ಟು ಬಡ್ಡಿ ದರ ನೀಡಲಾಗುತ್ತದೆ
ನಿಮ್ಮ ಮಗುವಿನ ವಯಸ್ಸು 10 ವರ್ಷಕ್ಕಿಂತ ಹೆಚ್ಚಿದ್ದರೆ ನೀವು ಅವರ ಹೆಸರಿನಲ್ಲಿ ಈ ಖಾತೆ ತೆರೆಯಬಹುದು
ಈ ಯೋಜನೆಯ ಮುಕ್ತಾಯದ ಅವಧಿ 5 ವರ್ಷಗಳು, ನಂತರ ಇದನ್ನು ನೀವು ಕ್ಲೋಸ್ ಮಾಡಬಹುದು
ಇದನ್ನೂ ಓದಿ: Driving License: ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮಾರ್ಗ ಇಲ್ಲಿದೆ ನೋಡಿ
ಹೀಗಿದೆ ನೋಡಿ ಲೆಕ್ಕಾಚಾರ
ನಿಮ್ಮ ಮಗುವಿಗೆ 10 ವರ್ಷ ವಯಸ್ಸಾಗಿದ್ದರೆ ಮತ್ತು ನೀವು 2 ಲಕ್ಷ ರೂ.ವನ್ನು ಅವರ ಹೆಸರಿನಲ್ಲಿ ಠೇವಣಿ ಮಾಡಿದರೆ ಪ್ರತಿ ತಿಂಗಳು ನಿಮ್ಮ ಶೇ.6.6ರ ಬಡ್ಡಿ ದರದಲ್ಲಿ 1,100 ರೂ. ಲಾಭ ಸಿಗುತ್ತದೆ.
5 ವರ್ಷಗಳಲ್ಲಿ ಈ ಬಡ್ಡಿಯು ಒಟ್ಟು 66 ಸಾವಿರ ರೂ. ಆಗುತ್ತದೆ. ಯೋಜನೆ ಮುಕ್ತಾಯದ ಕೊನೆಗೆ ನಿಮ್ಮ 2 ಲಕ್ಷ ರೂ.ವನ್ನು ವಾಪಸ್ ತೆಗೆದುಕೊಳ್ಳಬಹುದು.
ಈ ರೀತಿ ನೀವು ನಿಮ್ಮ ಮಗುವಿಗೆ 1,100 ರೂ. ಪಡೆಯುತ್ತೀರಿ, ಈ ಹಣವನ್ನು ನೀವು ಮಗುವಿನ ಶಿಕ್ಷಣಕ್ಕೆ ಬಳಸಬಹುದು.
ಈ ಮೊತ್ತವು ಪೋಷಕರಿಗೆ ಕಷ್ಟಕಾಲದಲ್ಲಿ ಉತ್ತಮ ಸಹಾಯವಾಗಬಹುದು.
ಅದೇ ರೀತಿ 4.5 ಲಕ್ಷ ರೂ. ಠೇವಣಿ ಇಟ್ಟರೆ ಪ್ರತಿ ತಿಂಗಳು ಸುಮಾರು 2,500 ರೂ. ಲಾಭ ದೊರೆಯುತ್ತದೆ
ಪ್ರತಿ ತಿಂಗಳು 1,925 ರೂ. ಲಭ್ಯವಿರುತ್ತವೆ
ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ ಒಂದು ಅಥವಾ ಮೂವರು ವಯಸ್ಕರೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ ನೀವು 3.50 ಲಕ್ಷ ರೂ.ಗಳನ್ನು ಜಮಾ ಮಾಡಿದರೆ, ನೀವು ಪ್ರಸ್ತುತ ಬಡ್ಡಿ ದರದಲ್ಲಿ ಪ್ರತಿ ತಿಂಗಳು 1,925 ರೂ. ಪಡೆಯುತ್ತೀರಿ. ಈ ಬಡ್ಡಿ ಆದಾಯದಲ್ಲಿ ನೀವು ನಿಮ್ಮ ಮಗುವಿನ ಬೋಧನಾ ಶುಲ್ಕವನ್ನು ಸುಲಭವಾಗಿ ಪಾವತಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.