Viral Video: ನಿಜವಾದ ಪ್ರೇಮಕ್ಕೆ ಉದಾಹರಣೆ ಈ ವಿಡಿಯೋ! ರೋಮಿಯೋ ಜೂಲಿಯೆಟ್ ಕಥೆ ಮರೆತೇ ಹೋಗುತ್ತೆ!

True Love: ತುಂಬಾ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜನರ ಹೃದಯವನ್ನು ಗೆಲ್ಲುತ್ತಿದೆ. ಈ ವಿಡಿಯೋದಲ್ಲಿ ವಯಸ್ಸಾದ ದಂಪತಿಗಳ ನಡುವಿನ ನಿಜವಾದ ಪ್ರೀತಿಯನ್ನು ಕಂಡು ಅನೇಕರ ಕಣ್ಣುಗಳು ತೇವಗೊಂಡವು.

Written by - Chetana Devarmani | Last Updated : Sep 19, 2022, 03:05 PM IST
  • ನಿಜವಾದ ಪ್ರೇಮಕ್ಕೆ ಉದಾಹರಣೆ ಈ ವಿಡಿಯೋ
  • ರೋಮಿಯೋ ಜೂಲಿಯೆಟ್ ಕಥೆ ಮರೆತೇ ಹೋಗುತ್ತೆ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌
Viral Video: ನಿಜವಾದ ಪ್ರೇಮಕ್ಕೆ ಉದಾಹರಣೆ ಈ ವಿಡಿಯೋ! ರೋಮಿಯೋ ಜೂಲಿಯೆಟ್ ಕಥೆ ಮರೆತೇ ಹೋಗುತ್ತೆ! title=
ವಿಡಿಯೋ ವೈರಲ್‌ 

Emotional Video: ಇಂಟರ್‌ನೆಟ್‌ನಲ್ಲಿ ಹಲವು ರೀತಿಯ ಕಂಟೆಂಟ್‌ಗಳನ್ನು ನೋಡಲಾಗುತ್ತದೆ. ಇವುಗಳಲ್ಲಿ ಕೆಲವು ಜನರನ್ನು ಭಾವುಕರನ್ನಾಗಿಸುತ್ತವೆ. ಕೆಲವು ನಗುವಂತೆ ಮಾಡುತ್ತವೆ. ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋವನ್ನು ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ.

ಇದನ್ನೂ ಓದಿ : video : ಬೈಕ್ ಮುಳುಗುತ್ತಿದ್ದಂತೆಯೇ ಪ್ರೇಮಿಯನ್ನು ಬಿಟ್ಟು ಬೇರೊಂದು ವಾಹನದಲ್ಲಿ ಹೊರಟ ಪ್ರಿಯತಮೆ

ಈ ವಿಡಿಯೋದಲ್ಲಿ, ವಯಸ್ಸಾದ ದಂಪತಿಗಳು ನೆಲದ ಮೇಲೆ ಕುಳಿತು ಆಹಾರ ಸೇವಿಸುತ್ತಿರುವುದನ್ನು ತೋರಿಸಲಾಗಿದೆ. ತನ್ನ ನಡುಗುವ ಕೈಗಳಿಂದ ವೃದ್ಧೆ ತನ್ನ ವಯಸ್ಸಾದ ಗಂಡನಿಗೆ ಊಟ ಮಾಡಿಸುತ್ತಿದ್ದಾರೆ. ಇದರ ಹಿಂದಿರುವ ಹಿನ್ನೆಲೆ ಸಂಗೀತವೂ ಅದ್ಭುತವಾಗಿದೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.

 

 

ಕೇವಲ 15 ಸೆಕೆಂಡ್‌ಗಳ ವಿಡಿಯೋದ ಹಿಂದೆ 'ಏಕ್ ಪ್ಯಾರ್ ಕಾ ನಗ್ಮಾ ಹೈ' ಹಾಡು ಪ್ಲೇ ಆಗುತ್ತಿದೆ. ಈ ವಿಡಿಯೋ ನೋಡಿ ಹಲವರು ಭಾವುಕರಾದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶೇರ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ ಲಕ್ಷಾಂತರ ಬಾರಿ ನೋಡಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿ ರೀಟ್ವೀಟ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲೂ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ : WATCH : ತೈವಾನ್‌ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News