ನವದೆಹಲಿ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: ಹಣ ಹೂಡಿಕೆ ಮಾಡುವಾಗ ಹೂಡಿಕೆದಾರರ ಮನಸ್ಸಿನಲ್ಲಿ ಕೇವಲ ಎರಡು ವಿಷಯಗಳಿರುತ್ತವೆ. ಒಂದು ಭದ್ರತೆ ಮತ್ತೊಂದು ಉತ್ತಮ ಲಾಭ. ಈ ಎರಡಕ್ಕೂ ಖಾತರಿ ನೀಡುವ ಅಂಚೆ ಇಲಾಖೆ(Post Office Investments)ಯ ಅನೇಕ ಉಳಿತಾಯ ಯೋಜನೆಗಳಿವೆ. ಇಲ್ಲಿ ನೀವು ಹೂಡಿಕೆ ಮಾಡುವ ಸಣ್ಣ ಮೊತ್ತಕ್ಕೆ ಹೆಚ್ಚಿನ ಬಡ್ಡಿಯನ್ನು ಪಡೆದುಕೊಳ್ಳಬಹುದು.


COMMERCIAL BREAK
SCROLL TO CONTINUE READING

ಇಂಡಿಯಾ ಪೋಸ್ಟ್(India Post) ಒದಗಿಸುವ ಇಂತಹ ಒಂದು ಯೋಜನೆ ಎಂದರೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(National Savings Certificate). ಅನೇಕ ಬ್ಯಾಂಕುಗಳು ನೀಡುವ ನಿಶ್ಚಿತ ಠೇವಣಿ (FD) ದರಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಇಲ್ಲಿ ನೀವು ಪಡೆಯಬಹುದು. ಅಂಚೆ ಕಚೇರಿಯ NSC ಯೋಜನೆ ಪ್ರಸ್ತುತ ಶೇ.6.8ರಷ್ಟು ಬಡ್ಡಿ ನೀಡುತ್ತಿದೆ. ನೀವು NSC ಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ವಾರ್ಷಿಕವಾಗಿ ಬಡ್ಡಿ ಸೇರಿಕೊಳ್ಳುತ್ತಾ  ಹೋಗುತ್ತದೆ. ಆದರೆ ಅದೇ ಸಮಯದಲ್ಲಿ ನಿಮಗೆ ಮೆಚ್ಯೂರಿಟಿಯ ಮೇಲೆ ಹಣ ಪಾವತಿಸಲಾಗುತ್ತದೆ.


ಇದನ್ನೂ ಓದಿ: LPG Gas Connection: ಅಡ್ರೆಸ್ ಪ್ರೂಫ್ ಇಲ್ಲದೆಯೇ ಸಿಗುತ್ತದೆ ಗ್ಯಾಸ್ ಕನೆಕ್ಷನ್ ಹೇಗೆ ತಿಳಿಯಿರಿ


NSC ಯೋಜನೆ(Post Office Scheme)ಯ ಮುಕ್ತಾಯ ಅವಧಿ 5 ವರ್ಷಗಳು. ನೀವು ಬಯಸಿದಲ್ಲಿ ಮುಕ್ತಾಯದ ಬಳಿಕ ಮತ್ತೊಂದು 5 ವರ್ಷಗಳವರೆಗೆ ನಿಮ್ಮ ಹೂಡಿಕೆಯನ್ನು ಹೆಚ್ಚಿಸಬಹುದು. ನೀವು NSC ಯಲ್ಲಿ ಕನಿಷ್ಠ 100 ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಹೀಗಾಗಿ ಇದು ಅಗ್ಗದ NSC ಯೋಜನೆಯಾಗಿದೆ. ಆದಾಗ್ಯೂ ಇಲ್ಲಿ ಗರಿಷ್ಠ ಹೂಡಿಕೆಯ ಮಿತಿ ಇಲ್ಲ. ನೀವು ಎಷ್ಟು ಹಣ ಬೇಕಾದರೂ ಹೂಡಿಕೆ ಮಾಡಬಹುದು.


NSC ಯೋಜನೆಯು ತೆರಿಗೆ ಉಳಿಸುವ ಆಯ್ಕೆಯಾಗಿದೆ. ಆದಾಯ ತೆರಿಗೆ(Tax) ಕಾಯ್ದೆ1961ರ ಸೆಕ್ಷನ್ 80 ಸಿ ಅಡಿಯಲ್ಲಿ, ಎನ್ಎಸ್ಸಿ ಹೂಡಿಕೆದಾರರು ವಾರ್ಷಿಕ 1.5 ಲಕ್ಷ ರೂ.ವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಈ ಸಮಯದಲ್ಲಿ, ನೀವು 100, 500, 1,000, 5,000 ಮತ್ತು 10,000 ರೂ. ಮೌಲ್ಯದ NSC ಪಡೆಯಬಹುದು. ನಿಮಗೆ ಬೇಕಾದಷ್ಟು ಪ್ರಮಾಣಪತ್ರಗಳನ್ನು ವಿವಿಧ ಬೆಲೆಯಲ್ಲಿ ಖರೀದಿಸುವ ಮೂಲಕ ನೀವು NSC ನಲ್ಲಿ ಹೂಡಿಕೆ ಮಾಡಬಹುದು.


ಇದನ್ನೂ ಓದಿ: PF News Today: ಶೀಘ್ರದಲ್ಲಿಯೇ ಸರ್ಕಾರ ನಿಮ್ಮ PF ಖಾತೆಗೆ ಹಣ ವರ್ಗಾಯಿಸಲಿದೆ, ಬ್ಯಾಲೆನ್ಸ್ ಪರಿಶೀಲಿಸುವ 4 ವಿಧಾನಗಳು ಇಲ್ಲಿವೆ


5 ವರ್ಷಗಳಲ್ಲಿ 6 ಲಕ್ಷ ರೂ. ಬಡ್ಡಿ


ಹೂಡಿಕೆದಾರರು ಎನ್ಎಸ್ ಸಿಯಲ್ಲಿ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ ಶೇ.6.8ರಷ್ಟು ಬಡ್ಡಿಯೊಂದಿಗೆ 20.85 ಲಕ್ಷ ರೂ. ಪಡೆದುಕೊಳ್ಳಬಹುದು. ಅಂದರೆ ಹೂಡಿಕೆದಾರರಿಗೆ 5 ವರ್ಷಗಳಲ್ಲಿ ಸುಮಾರು 6 ಲಕ್ಷ ರೂ. ನಷ್ಟು ಲಾಭ(ಬಡ್ಡಿ) ಪಡೆದುಕೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ