PF Interest Rate - ಒಂದು ವೇಳೆ ನೀವೂ ಕೂಡ ನೌಕರರ ಭವಿಷ್ಯ ನಿಧಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಸರ್ಕಾರ ನಿಮ್ಮ PF ಖಾತೆಗೆ ವಾರ್ಷಿಕ ಬಡ್ಡಿಯ ಹಣವನ್ನು ಪಾವತಿಸಲಿದೆ. ಜುಲೈ 31ರಂದು ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ನಿಮಗೆ ಬಡ್ಡಿ ಸಿಗುವ ಸಾಧ್ಯತೆ ಇದೆ. PF ಖಾತೆದಾರರಿಗೆ ಸರ್ಕಾರ ವಾರ್ಷಿಕವಾಗಿ ಶೇ.8.5ರಷ್ಟು ಬಡ್ಡಿಯನ್ನು ಪಾವತಿಸುತ್ತದೆ. ಈ ಬಡ್ಡಿ ಆರ್ಥಿಕ ವರ್ಷ 2020-21 ಬಡ್ಡಿಯಾಗಿದೆ.
ಬಡ್ಡಿ ಕಡಿತ ನಿರೀಕ್ಷಿಸಲಾಗಿತ್ತು
ಕಳೆದ ಆರ್ಥಿಕ ವರ್ಷ ಅಂದರೆ 2020-21ರಲ್ಲಿ ಕೊರೊನಾ ಕಾರಣ ಸರ್ಕಾರ EPF ಬಡ್ಡಿ ದರವನ್ನು ಕಡಿತಗೊಳಿಸಲಿದೆ ಎನ್ನಲಾಗಿತ್ತು. ಆದರೆ, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಸತತ ಎರಡನೇ ವರ್ಷದಲ್ಲಿಯೂ ಕೂಡ EPFO ಶೇ.8.50 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದಕ್ಕೂ ಮೊದಲು 2019-20ರಲ್ಲಿ EPF ಖಾತೆದಾರರಿಗೆ ಶೇ.8.65ರಷ್ಟು ಬಡ್ಡಿಯನ್ನು ನೀಡಲಾಗಿತ್ತು.
ಇದನ್ನೂ ಓದಿ-PF ಖಾತೆ ಹಣ ಹಿಂಪಡೆಯಲು ಬಯಸುವಿರಾ? ಹಾಗಿದ್ರೆ ಈ ತಪ್ಪುಗಳನ್ನ ಮಾಡಬೇಡಿ!
ಈ ನಾಲ್ಕು ವಿಧಾನದಿಂದ ನಿಮ್ಮ ಬ್ಯಾಲೆನ್ಸ್ (PF Balance) ಪರಿಶೀಲಿಸಿ
ನಿಮ್ಮ EPF ಖಾತೆಯ ಬ್ಯಾಲೆನ್ಸ್ ಪರಿಶೀಲನೆಗಾಗಿ ಒಟ್ಟು ನಾಲ್ಕು ಆಯ್ಕೆಗಳಿವೆ. ನಿಮ್ಮ ಅಧಿಕೃತ ಮೊಬೈಲ್ ನಂಬರ್ ನಿಂದ 7738299899 ಗೆ SMS ಕಳುಹಿಸುವ ಮೂಲಕ ನೀವು ಬ್ಯಾಲೆನ್ಸ್ ಪರಿಶೀಲಿಸಬಹುದು. ಈ ಸಂದೇಶದಲ್ಲಿ ನೀವು EPFOHO UAN LAN ಟೈಪ್ ಮಾಡಬೇಕು. ಇದರಲ್ಲಿ LAN ಅಂದರೆ ಭಾಷೆ ಎಂದರ್ಥ.
ಇದನ್ನೂ ಓದಿ- PF Withdrawal Rule Change: PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ
ಇದಲ್ಲದೆ ನೀವು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ 01122901406ಗೆ ಮಿಸ್ ಕಾಲ್ ನೀಡುವ ಮೂಲಕ ಕೂಡ EPF ಬ್ಯಾಲೆನ್ಸ್ ಪರಿಶೀಲಿಸಬಹುದು. ಇದಲ್ಲದೆ UMANG ಆಪ್ ಮೂಲಕವೂ ಕೂಡ ನೀವು ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು. ನಾಲ್ಕನೇ ಆಯ್ಕೆಯ ರೂಪದಲ್ಲಿ ನೀವು EPFO ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ಇದನ್ನೂ ಓದಿ-PF ಗ್ರಾಹಕರಿಗೆ ಗುಡ್ ನ್ಯೂಸ್ : ಈ ತಿಂಗಳು ನಿಮ್ಮಗೆ ಸಿಗಲಿದೆ ಶೇ.8.5 ಬಡ್ಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ