ನವದೆಹಲಿ : ನೀವು ಸುರಕ್ಷಿತವಾಗಿ ಹಣ ಹೂಡಿಕೆ (ಟಾಪ್ ಇನ್ವೆಸ್ಟ್ಮೆಂಟ್ ಪ್ಲಾನ್) ಮಾಡಲು ಬಯಸಿದರೆ, ಅಂಚೆ ಕಚೇರಿ ನಿಮಗೆ ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಸ್ಕೀಮ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭವನ್ನು ಗಳಿಸಬಹುದು. ಅಂಚೆ ಇಲಾಖೆಯಲ್ಲಿ ಇಂತಹ ಅನೇಕ ಯೋಜನೆಗಳಿವೆ ಅವು ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ. ಈ ಯೋಜನೆಗಳಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ, ನೀವು ದೊಡ್ಡ ಮೊತ್ತದ ಹಣ ಗಳಿಸಬಹುದು. ವಾಸ್ತವವಾಗಿ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಕೇಂದ್ರ ಸರ್ಕಾರವು ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಬದಲಿಸಿಲ್ಲ. ಹೀಗಾಗಿ ಪೋಸ್ಟ್ ಆಫೀಸ್ ಯೋಜನೆಗಳು ಲಾಭದಾಯಕ ಹೂಡಿಕೆಯಾಗಿರುತ್ತದೆ. ಈ ಯೋಜನೆಗಳ ಬಗ್ಗೆ ನಿಮಗಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ!


COMMERCIAL BREAK
SCROLL TO CONTINUE READING

ಸುಕನ್ಯಾ ಸಮೃದ್ಧಿ ಯೋಜನೆ


ಸುಕನ್ಯಾ ಸಮೃದ್ಧಿ ಯೋಜನೆ (AAYY) ಕೇಂದ್ರ ಸರ್ಕಾರದ ಹೆಣ್ಣುಮಕ್ಕಳ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದನ್ನು ಬೇಟಿ ಬಚಾವೊ-ಬೇಟಿ ಪಡಾವೊ ಯೋಜನೆಯಡಿ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರಲ್ಲಿ ಹೆಚ್ಚಿನ ಬಡ್ಡಿ ಅಂದರೆ ಶೇ. 7.6 ರಷ್ಟಾಗಿದೆ. ಈ ಯೋಜನೆಯಲ್ಲಿ ನಿಮ್ಮ ಹಣವು 9 ವರ್ಷಗಳಲ್ಲಿ ಡಬಲ್ ಆಗಲಿದೆ.


ಇದನ್ನೂ ಓದಿ : ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ಮತ್ತೆ ರಿನಿವಲ್ ಮಾಡಲು ಎಲ್ಐಸಿ ನೀಡುತ್ತಿದೆ ಸುವರ್ಣಾವಕಾಶ ..!


ರಿಟರ್ನ್ ಠೇವಣಿ ಯೋಜನೆ (RD)


ಈ ಯೋಜನೆಯಡಿ, ಶೇ. 5.8 ರಷ್ಟು ಬಡ್ಡಿ ಆರ್‌ಡಿಯಲ್ಲಿ ಲಭ್ಯವಿದೆ. ಈ ಯೋಜನೆಯಲ್ಲಿ, ನಿಮ್ಮ ಹಣವು 12 ವರ್ಷಗಳಲ್ಲಿ ಡಬಲ್ (Money Double)ಆಗಲಿದೆ. ಆದ್ದರಿಂದ ಇಂದೇ ಠೇವಣಿ ಮಾಡಿ ಮತ್ತು ನಿಮ್ಮ ಭವಿಷ್ಯಕ್ಕೆ ಆರ್ಥಿಕ ಭದ್ರತೆ  ಪಡಿಸಿಕೊಳ್ಳಿ.


ಅಂಚೆ ಇಲಾಖೆಯ ಉಳಿತಾಯ ಖಾತೆ


ಅಂಚೆ ಇಲಾಖೆಯ ಉಳಿತಾಯ ಖಾತೆ(Savings Account)ಯಲ್ಲಿ ನೀವು ವಾರ್ಷಿಕವಾಗಿ ಶೇ.4 ರಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಿಮ್ಮ ಹಣವು 18 ವರ್ಷಗಳಲ್ಲಿ ಡಬಲ್ ಆಗಲಿದೆ. ವೃದ್ಧಾಪ್ಯಕ್ಕಾಗಿ ಇದು ಉತ್ತಮ ಹೂಡಿಕೆಯಾಗಿದೆ.


ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)


SCSS ಯೋಜನೆಯಲ್ಲಿ, ನೀವು ಶೇ. 7.4 ರಷ್ಟು ಬಡ್ಡಿದರವನ್ನು ಪಡೆಯುತ್ತೀರಿ. ಇಲ್ಲಿ ನಿಮ್ಮ ಹಣವು  9.73 ವರ್ಷಗಳಲ್ಲಿ ಡಬಲ್ ಆಗಲಿದೆ.


ಇದನ್ನೂ ಓದಿ : UIDAI Update : ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಎರಡು ಸೇವೆಗಳನ್ನು ನಿಲ್ಲಿಸಿದ UIDAI : ಬಳಕೆದಾರರಿಗೆ ನೇರವಾದ ಪರಿಣಾಮ!


ಪಿಪಿಎಫ್ ಯೋಜನೆ (PPF)


ಪಿಪಿಎಫ್(PPF) ದೀರ್ಘಾವಧಿಯ ಹೂಡಿಕೆ ಆಯ್ಕೆಯಾಗಿದೆ. ಆದ್ದರಿಂದ ಇದರಲ್ಲಿ ನಿಧಿಗಳನ್ನು ನಿರ್ಮಿಸಲು ನಿಮಗೆ ಅವಕಾಶ ಸಿಗುತ್ತದೆ. PPF ನಲ್ಲಿ ಹೂಡಿಕೆಯನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ, ಅದು ನಿಮ್ಮನ್ನು ಮಿಲಿಯನೇರ್ ಮಾಡುತ್ತದೆ. ಅಂಚೆ ಕಚೇರಿಯ ಪಿಪಿಎಫ್ ಯೋಜನೆಯಲ್ಲಿ ಬಡ್ಡಿ ದರ ಶೇ .7.1. ಈ ಯೋಜನೆಯಡಿ, ನಿಮ್ಮ ಹಣವು 10 ವರ್ಷಗಳಲ್ಲಿ ಡಬಲ್ ಆಗಲಿದೆ.


ಮಾಸಿಕ ಆದಾಯ ಯೋಜನೆ (MIS)


ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಹೂಡಿಕೆದಾರರಿಗೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಗಳಿಸಲು ಖಾತರಿ ನೀಡುತ್ತದೆ. ಈ ಯೋಜನೆಯಲ್ಲಿ, ಖಾತೆಯನ್ನು ತೆರೆಯುವ ಮೂಲಕ ಒಟ್ಟು ಮೊತ್ತವನ್ನು ಜಮಾ ಮಾಡಬೇಕು. ಎಂಐಎಸ್ ನಲ್ಲಿ ಹೂಡಿಕೆ ಮಾಡುವುದರಿಂದ ಶೇ .6.6 ರಷ್ಟು ಬಡ್ಡಿ ಸಿಗುತ್ತದೆ. ಈ ಯೋಜನೆಯಡಿ, ಹಣವು 10 ವರ್ಷಗಳಲ್ಲಿ ಡಬಲ್ ಆಗಲಿದೆ.


ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)


ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (Post Office National Saving Certificate Scheme) ಯೋಜನೆ ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆ 6.8 ರಷ್ಟು ಬಡ್ಡಿದರವನ್ನು ಎನ್ ಎಸ್ ಸಿಯಲ್ಲಿ ನೀಡಲಾಗಿದೆ. ಇದು 5 ವರ್ಷದ ಉಳಿತಾಯ ಯೋಜನೆ. ಇದರಲ್ಲಿ, ನಿಮ್ಮ ಹಣವು 10 ವರ್ಷಗಳಲ್ಲಿ ಡಬಲ್ ಆಗಲಿದೆ.


ಇದನ್ನೂ ಓದಿ : Bank Holidays: ಈ ವಾರ ಸತತ 4 ದಿನಗಳವರೆಗೆ ಬ್ಯಾಂಕ್‌ಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್


ಸಮಯ ಠೇವಣಿ ಯೋಜನೆ (TD)


1 ರಿಂದ 3 ವರ್ಷಗಳ ಸಮಯ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಶೇ .5.5 ರಷ್ಟು ಬಡ್ಡಿ(Interest Rate) ಸಿಗುತ್ತದೆ. ಈ ಯೋಜನೆಯಲ್ಲಿ, ನಿಮ್ಮ ಹಣವನ್ನು 13 ವರ್ಷಗಳಲ್ಲಿ ದ್ವಿಗುಣಗೊಳಿಸಲಾಗುತ್ತದೆ. ನೀವು 5 ವರ್ಷಗಳ ಸಮಯ ಠೇವಣಿಯಲ್ಲಿ ಹೂಡಿಕೆ ಮಾಡಿದರೆ 6.7 ಶೇಕಡಾ ಬಡ್ಡಿದರ ಇರುತ್ತದೆ. ಸಮಯ ಠೇವಣಿ ಯೋಜನೆಯಲ್ಲಿ ಹೂಡಿಕೆಯ ಅತಿದೊಡ್ಡ ಪ್ರಯೋಜನವೆಂದರೆ ಇಲ್ಲಿ ನೀವು ಹೂಡಿಕೆಯ ಮೇಲೆ 100% ಸುರಕ್ಷತೆಯ ಖಾತರಿಯನ್ನು ಪಡೆಯುತ್ತೀರಿ, ಆದರೆ ಬ್ಯಾಂಕುಗಳಲ್ಲಿ, 5 ಲಕ್ಷದವರೆಗಿನ ಠೇವಣಿಗಳ ಮೇಲೆ ಮಾತ್ರ ಭದ್ರತೆಯನ್ನು ಖಾತರಿಪಡಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.