Bank Holidays: ಈ ವಾರ ಸತತ 4 ದಿನಗಳವರೆಗೆ ಬ್ಯಾಂಕ್‌ಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್

Bank Holidays: ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳನ್ನು ಹೊಂದಿದ್ದರೆ, ಅದನ್ನು ತಕ್ಷಣ ನಿಭಾಯಿಸಬೇಕು. ಇಲ್ಲದಿದ್ದರೆ ನೀವು ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಲು ಕಾಯಬೇಕಾಗಬಹುದು.

Written by - Yashaswini V | Last Updated : Aug 24, 2021, 01:16 PM IST
  • ಆರ್‌ಬಿಐ (RBI) ಬ್ಯಾಂಕ್ ರಜೆಯ ಪಟ್ಟಿಯನ್ನು ನೀಡುತ್ತದೆ
  • ಈ ತಿಂಗಳ ಕೊನೆಯ ವಾರದಲ್ಲಿ ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇರಲಿದೆ
  • ಈ ತಿಂಗಳು ಆಗಸ್ಟ್ 30 ರಂದು ಜನ್ಮಾಷ್ಟಮಿ / ಕೃಷ್ಣ ಜಯಂತಿ ಇರುವುದರಿಂದ ಅನೇಕ ನಗರಗಳಲ್ಲಿ ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ
Bank Holidays: ಈ ವಾರ ಸತತ 4 ದಿನಗಳವರೆಗೆ ಬ್ಯಾಂಕ್‌ಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್ title=
Bank Holidays In August

ನವದೆಹಲಿ: ಮುಂದಿನ ದಿನಗಳಲ್ಲಿ, ನೀವು ಯಾವುದೇ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ಅದನ್ನು ತಕ್ಷಣವೇ ನಿಭಾಯಿಸಬೇಕು. ಇಲ್ಲದಿದ್ದರೆ ನೀವು ಬಹಳ ಸಮಯ ಕಾಯಬೇಕಾಗಬಹುದು. ಏಕೆಂದರೆ ಈ ವಾರ ಬ್ಯಾಂಕ್ ಸತತ 4 ದಿನಗಳವರೆಗೆ ಮುಚ್ಚಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಆಗಸ್ಟ್ 2021 ರ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ ಈ ತಿಂಗಳಲ್ಲಿ ಒಟ್ಟು 15 ರಜಾದಿನಗಳು ಇವೆ. ಆದಾಗ್ಯೂ, ಆಗಸ್ಟ್ ತಿಂಗಳು ಮುಗಿಯುತ್ತಾ ಬಂದಿದೆ. ಈ ತಿಂಗಳ ಕೊನೆಯ ವಾರದಲ್ಲಿ ಸತತ ನಾಲ್ಕು ದಿನ ಅಂದರೆ ಆಗಸ್ಟ್ 28 ರಿಂದ ಆಗಸ್ಟ್ 31 ರವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಆದಾಗ್ಯೂ, ಈ ಅವಧಿಯಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಮತ್ತು ಎಟಿಎಂ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ಆರ್‌ಬಿಐ (RBI) ಬ್ಯಾಂಕ್ ರಜೆಯ ಪಟ್ಟಿಯನ್ನು ನೀಡುತ್ತದೆ. ಈ ತಿಂಗಳು ಸ್ಥಳೀಯ ಹಬ್ಬಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ವಿವಿಧ ವಲಯಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಬ್ಯಾಂಕುಗಳಿಗೆ ರಜೆ ನೀಡಲಾಗಿದೆ. ಈ ವಾರ ಬ್ಯಾಂಕ್‌ಗಳಿಗೆ ಆರ್‌ಬಿಐ 4 ದಿನಗಳ ಕಾಲ ರಜೆ ನೀಡಿದೆ. ಆದಾಗ್ಯೂ, ಈ ರಜಾದಿನವು ಎಲ್ಲಾ ರಾಜ್ಯಗಳಲ್ಲೂ ಒಂದೇ ಆಗಿರುವುದಿಲ್ಲ.

ಇದನ್ನೂ ಓದಿ- RBI New Rule For Online Shopping:ನೀವೂ ಆನ್ಲೈನ್ ಶಾಪಿಂಗ್ ಮಾಡುತ್ತೀರಾ? RBI ಜಾರಿಗೊಳಿಸುತ್ತಿರುವ ಈ ಹೊಸ ನಿಯಮ ನಿಮಗೂ ಗೊತ್ತಿರಲಿ

ಆಗಸ್ಟ್ 30 ರಂದು ಅನೇಕ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ:
ಈ ತಿಂಗಳ ಆಗಸ್ಟ್ 28 ರಂದು ನಾಲ್ಕನೇ ಶನಿವಾರ ರಜೆ ಇರುತ್ತದೆ. ಆಗಸ್ಟ್ 29 ಭಾನುವಾರವಾದ ಕಾರಣ ರಜೆ ಇರುತ್ತದೆ. ಈ ಕಾರಣದಿಂದಾಗಿ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದಲ್ಲದೆ, ಈ ತಿಂಗಳು ಆಗಸ್ಟ್ 30 ರಂದು ಜನ್ಮಾಷ್ಟಮಿ / ಕೃಷ್ಣ ಜಯಂತಿ  ಇರುವುದರಿಂದ ಅನೇಕ ನಗರಗಳಲ್ಲಿ ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ (Bank Holiday List). ಈ ದಿನ ಅಹಮದಾಬಾದ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯ್‌ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ಗ್ಯಾಂಗ್ಟಾಕ್‌ನಲ್ಲಿ ಯಾವುದೇ ಬ್ಯಾಂಕುಗಳಿಗೆ ರಜೆ ಇರಲಿದೆ.  ಅದೇ ಸಮಯದಲ್ಲಿ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರಣದಿಂದಾಗಿ 31 ಆಗಸ್ಟ್ 2021 ರಂದು ಹೈದರಾಬಾದ್ ನಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.

ಇದನ್ನೂ ಓದಿ- National Monetisation Pipeline: ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನಿದು NMP?

ಯಾವ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂಬುದನ್ನು ಇಲ್ಲಿ ನೋಡಿ (ಬ್ಯಾಂಕ್ ಬ್ಯಾಂಡ್ ಪಟ್ಟಿ)
1) 28 ಆಗಸ್ಟ್ 2021 - ನಾಲ್ಕನೇ ಶನಿವಾರ
2) 29 ಆಗಸ್ಟ್ 2021 - ಭಾನುವಾರ
3) 30 ಆಗಸ್ಟ್ 2021 - ಜನ್ಮಾಷ್ಟಮಿ / ಕೃಷ್ಣ ಜಯಂತಿ (ಅಹಮದಾಬಾದ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯಪುರ, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ಗ್ಯಾಂಗ್ಟಕ್)
4) 31 ಆಗಸ್ಟ್ 2021 - ಶ್ರೀ ಕೃಷ್ಣ ಜನ್ಮಾಷ್ಟಮಿ (ಹೈದರಾಬಾದ್) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News