ನವದೆಹಲಿ : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಣದುಬ್ಬರದಿಂದ ಜನ ಸಾಮಾನ್ಯ ತತ್ತರಿಸಿದ್ದಾನೆ.   ಹಲವು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ ಅಡುಗೆ ಮನೆಯ ಖರ್ಚು ಕೂಡಾ ಹೆಚ್ಚಾಗುತ್ತಿದೆ. ಈಗ ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ,  ಸಾಂಬಾರ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ರಷ್ಯಾ -ಉಕ್ರೇನ್ ಯುದ್ಧದೊಂದಿಗೆ ಹೆಚ್ಚಾದ ಹಣದುಬ್ಬರ  :
ರಷ್ಯಾ-ಉಕ್ರೇನ್ ಯುದ್ಧದ ನಂತರ, ಹಣದುಬ್ಬರ ಏರುತ್ತಿದೆ. ಯುದ್ಧದ ಪ್ರಾರಂಭದೊಂದಿಗೆ, ಅಡುಗೆ ಎಣ್ಣೆ, ಸೂರ್ಯಕಾಂತಿ ಎಣ್ಣೆಯ ಬೆಲೆ ಗಗನಕ್ಕೇರಿತು. ಇದರ ನಂತರ, ಹಿಟ್ಟು, ಬಾರ್ಲಿ, ಅಕ್ಕಿ, ಕೊತ್ತಂಬರಿ, ಜೀರಿಗೆ ಮತ್ತು ಅರಿಶಿನದ ಬೆಲೆಯಲ್ಲಿ ಕೂಡಾ ಭಾರೀ ಏರಿಕೆ ಕಂಡು ಬಂದಿದೆ. 


ಇದನ್ನೂ ಓದಿ : CNG ಬಳಕೆದಾರರಿಗೆ ಬಿಗ್ ಶಾಕ್ : ಎರಡೇ ದಿನದಲ್ಲಿ ₹5 ಏರಿಕೆ!


ಗಗನ ಮುಖಿಯಾಗಿವೆ ಈ ಮಸಾಲೆಗಳ ಬೆಲೆಗಳು  : 
ನಿತ್ಯ ಬಳಕೆಯಲ್ಲಿ ಬಳಸುವ ಸಾಂಬಾರು ಪದಾರ್ಥಗಳ ಬೆಲೆ ಗಗನಕ್ಕೇರಿದೆ. . ಮಾರುಕಟ್ಟೆಯಲ್ಲಿ ಅರಿಶಿನ ಬೆಲೆ ಶೇ.10ರಷ್ಟು ಹೆಚ್ಚಾಗಿದೆ. ಇನ್ನೊಂದೆಡೆ ಕೊತ್ತಂಬರಿ ಬೆಲೆ ಶೇ.20ರಷ್ಟು ಏರಿಕೆಯಾಗಿದೆ.  ಜೀರಿಗೆ ಬೆಲೆ ಪೆಟ್ರೋಲ್ ಬೆಲೆಗಿಂತ ವೇಗವಾಗಿ ಏರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಜೀರಿಗೆ ದರ ಕೆಜಿಗೆ 230-235 ರೂ.ಗೆ ತಲುಪಿದೆ.


ತರಕಾರಿ ಬೆಲೆಯಲ್ಲಿಯೂ ಏರಿಕೆ :
ಸಾಂಬಾರ ಪದಾರ್ಥಗಳ ಹೊರತಾಗಿ ತರಕಾರಿಗಳ ಬೆಲೆಯಲ್ಲಿಯೂ ಭಾರೀ ವ್ಯತ್ಯಾಸ ಕಂಡು ಬಂದಿದೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ನಿಂಬೆಗೆ ಬೇಡಿಕೆಯೂ ಗಣನೀಯವಾಗಿ ಹೆಚ್ಚಿದ್ದು, ಕೆಲವೂ ರಾಜ್ಯಗಳಲ್ಲಿ ನಿಂಬೆಹಣ್ಣಿನ ಬೆಲೆಯೂ ಕೆ.ಜಿಗೆ 300-400 ರೂಪಾಯಿ ದಾಟಿದೆ. ಹಲವೆಡೆ 10-15 ರೂಪಾಯಿಗೆ ಒಂದು ನಿಂಬೆಹಣ್ಣು ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಡೀಸೆಲ್-ಪೆಟ್ರೋಲ್ ಬೆಲೆಯಲ್ಲಿನ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.  


ಇದನ್ನೂ ಓದಿ :  Amul Milk: ಹಣದುಬ್ಬರದ ಮತ್ತೊಂದು ಹೊಡೆತ! ಹೆಚ್ಚಾಗಲಿದೆ ಅಮೂಲ್ ಹಾಲಿನ ದರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.