Priyanka Gandhi: ಐಷಾರಾಮಿ ಬಂಗಲೆ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ ಸೋನಿಯಾ ಗಾಂಧಿ ಪುತ್ರಿ!
Priyanka Gandhi Net Worth: ಸಹೋದರ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಿನ್ನೆ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಿದರು.
Priyanka Gandhi Net Worth: ವಯನಾಡ್ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್ 23 ರಂದು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಅವರ ತಾಯಿ ಸೋನಿಯಾ ಗಾಂಧಿ, ಸಹೋದರ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಉಪಸ್ಥಿತರಿದ್ದರು.
ನವೆಂಬರ್ 13 ರಂದು ವಯನಾಡ್ ಲೋಕಸಭಾ ಉಪಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಇದಕ್ಕಾಗಿ ನಿನ್ನೆ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಗಾಂಧಿ ಚುನಾವಣಾ ಅಫಿಡವಿಟ್‌ನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಸೋನಿಯಾ ಗಾಂಧಿ ಪುತ್ರಿ, ರಾಹುಲ್ ಗಾಂಧಿ ಸಹೋದರಿ, ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಅಫಿಡವಿಟ್‌ನಲ್ಲಿ ಒಟ್ಟು 12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ 4.24 ಕೋಟಿ ಮೌಲ್ಯದ ಚರಾಸ್ತಿ ಹಾಗೂ 7.74 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿವೆ.
ಇದನ್ನೂ ಓದಿ- ಎಸ್‌ಬಿಐನ ಇಂತಹ ಸೇವಿಂಗ್ಸ್ ಖಾತೆಯಲ್ಲಿ Zero Balanceಗೂ ಬೀಳಲ್ಲ ದಂಡ, ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
5 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ:
ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಪ್ರಿಯಾಂಕಾ ಗಾಂಧಿ ಪಿತ್ರಾರ್ಜಿತವಾಗಿ 2.10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪ್ರಿಯಾಂಕಾ ದೆಹಲಿಯ ಸುಲ್ತಾನ್‌ಪುರ ಮೆಹ್ರಾಲಿ ಗ್ರಾಮದಲ್ಲಿ 2.10 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದು, ಇದರಲ್ಲಿ ಅವರ ಸಹೋದರ ರಾಹುಲ್ ಗಾಂಧಿ ಕೂಡ ಪಾಲು ಹೊಂದಿದ್ದಾರೆ. ಪ್ರಿಯಾಂಕಾ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 5.63 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಇದಲ್ಲದೆ, 1.09 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದು, ಇಲ್ಲಿ ಮನೆ ನಿರ್ಮಾಣಕ್ಕಾಗಿ ಸುಮಾರು 5.05 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ 15.75 ಲಕ್ಷ ರೂ. ಸಾಲವನ್ನು ಕೂಡ ಹೊಂದಿದ್ದಾರೆ.
ಕಾರು, ಚಿನ್ನ, ಬೆಳ್ಳಿ:
ಪ್ರಿಯಾಂಕಾ ಗಾಂಧಿ ಬಳಿ 8 ಲಕ್ಷ ರೂಪಾಯಿ ಮೌಲ್ಯದ ಹೋಂಡಾ ಸಿಆರ್‌ವಿ ಕಾರು ಇದೆ. ಇದನ್ನು ಪ್ರಿಯಾಂಕಾ ಅವರಿಗೆ ಅವರ ಪತಿ ಉಡುಗೊರೆಯಾಗಿ ನೀಡಿದ್ದಾರೆ. ಇದಲ್ಲದೆ ಪ್ರಿಯಾಂಕಾ ಗಾಂಧಿ 1.15 ಕೋಟಿ ಮೌಲ್ಯದ ಚಿನ್ನ, 29 ಲಕ್ಷ ಮೌಲ್ಯದ ಬೆಳ್ಳಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ- Home Loan EMI ಬೌನ್ಸ್ ಆಗಿದ್ಯಾ? ಭಯಬೇಡ... ಕೂಡಲೇ ಈ ಕೆಲಸ ಮಾಡಿ...
ಆದಾಯ:
ಪ್ರಿಯಾಂಕಾ ಗಾಂಧಿ ಅವರ ವಾರ್ಷಿಕ ಆದಾಯ 2023-24ರ ಹಣಕಾಸು ವರ್ಷದಲ್ಲಿ 46.39 ಲಕ್ಷ ರೂ. ಕಳೆದ ಆರ್ಥಿಕ ವರ್ಷದಲ್ಲಿ ಅವರು 47.21 ಲಕ್ಷ ರೂ. ವಾರ್ಷಿಕ ಆದಾಯವನ್ನು ಹೊಂದಿದ್ದರು. ಸೆಪ್ಟೆಂಬರ್ 30, 2024 ರಂದು ಅವರ ಬಳಿ 52,000 ರೂಪಾಯಿ ನಗದು ಹಣವಿತ್ತು ಎಂದು ಉಲ್ಲೇಖಿಸಿದ್ದಾರೆ.
ಹೂಡಿಕೆಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್:
ಪ್ರಿಯಾಂಕಾ ಗಾಂಧಿ ಅವರು ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್-ಗ್ರೋತ್‌ನ 13,200 ಯುನಿಟ್‌ಗಳನ್ನು ಒಳಗೊಂಡಿರುವ 2.24 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್‌ಗಳನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ ಎಸ್‌ಬಿಐನಲ್ಲಿ ಪಿಪಿಎಫ್ ಖಾತೆ ಹೊಂದಿರುವ ಪ್ರಿಯಾನಕ ಇದರಲ್ಲಿ 17.38 ಲಕ್ಷ ರೂ. ಠೇವಣಿ ಇರಿಸಿದ್ದಾರೆ. ಪ್ರಿಯಾಂಕಾ ಅವರ ಬ್ಯಾಂಕ್ ಖಾತೆಯಲ್ಲಿ ಸುಮಾರು 3.60 ಲಕ್ಷ ರೂ. ಬ್ಯಾಲೆನ್ಸ್ ಇದೆ.
ಪ್ರಿಯಾಂಕಾ ಗಾಂಧಿ ಯಾವುದೇ ಷೇರುಗಳನ್ನು ಹೊಂದಿಲ್ಲ, ಆದರೆ ಅವರ ಪತಿ ರಾಬರ್ಟ್ ವಾದ್ರಾ ಅವರು ಉಷಾ ಮಾರ್ಟಿನ್, ಇನ್ಫೋಸಿಸ್, ಟಾಟಾ ಪವರ್, NIIT ಮತ್ತು ರೈಲ್ ವಿಕಾಸ್ ನಿಗಮ್‌ನಂತಹ ಷೇರುಗಳನ್ನು ಹೊಂದಿದ್ದಾರೆ.
ರಾಬರ್ಟ್ ವಾದ್ರಾ ಬಳಿ ಎಷ್ಟು ಆಸ್ತಿಯಿದೆ?
ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಒಟ್ಟು ಆಸ್ತಿ 65.5 ಕೋಟಿ ರೂ.ಗಳಾಗಿದ್ದು, ಇದರಲ್ಲಿ 37.9 ಕೋಟಿ ಮೌಲ್ಯದ ಚರಾಸ್ತಿ ಮತ್ತು 27.64 ಕೋಟಿ ಮೌಲ್ಯದ ಸ್ಥಿರಾಸ್ತಿಗಳು ಸೇರಿವೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.