PAN Card Apply: ಭಾರತದಲ್ಲಿ ದೇಶದ ನಾಗರಿಕರಿಗೆ ಆದಾಯ ತೆರಿಗೆ ಇಲಾಖೆಯ ಮುಖಾಂತರ ಪ್ಯಾನ್ ಕಾರ್ಡ್ ವಿತರಿಸಲಾಗುತ್ತದೆ. ಹಣಕಾಸಿನ ವಹಿವಾಟುಗಳಲ್ಲಿ ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಇದಲ್ಲದೆ, ಗುರುತಿನ ಪರಿಶೀಲನೆಗಾಗಿ ಪ್ಯಾನ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಆದಾಗ್ಯೂ, ಪ್ಯಾನ್ ಕಾರ್ಡ್‌ನಲ್ಲಿನ ಒಂದು ಸಣ್ಣ ತಪ್ಪು ಕೂಡ ನಿಮಗೆ ಭಾರಿ ಸಮಸ್ಯೆಯನ್ನೇ ತಂದೊಡ್ಡಬಹುದು. ಪ್ಯಾನ್ ಕಾರ್ಡ್‌ನಲ್ಲಿರುವ ನಿಮ್ಮ ಹೆಸರಿನ ಕಾಗುಣಿತವು ತಪ್ಪಾಗಿರುವ ಸಾಧ್ಯತೆ ಹಲವು ಬಾರಿ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹೆಸರಿನ ಕಾಗುಣಿತವನ್ನು ಸರಿಪಡಿಸದಿದ್ದರೆ, ಭವಿಷ್ಯದಲ್ಲಿ ನಿಮಗೆ ಭಾರಿ ತೊಂದರೆ ಎದುರಾಗಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Ration Card: ಉಚಿತ ಪಡಿತರ ಪಡೆಯುವ


ಹಣಕಾಸಿನ ವ್ಯವಹಾರದಲ್ಲಿ ಅಡೆತಡೆ ಉಂಟಾಗಬಹುದು
ಪ್ಯಾನ್ ಕಾರ್ಡ್‌ನಲ್ಲಿ ಕೆಲ ತಪ್ಪುಗಳು ಕಂಡುಬಂದರೆ, ಅವುಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು ಉತ್ತಮ. ಪ್ಯಾನ್ ಕಾರ್ಡ್‌ನಲ್ಲಿ  ತಪ್ಪಾದ ಹೆಸರು ಅಥವಾ ಮದುವೆಯ ನಂತರ ಹೆಸರನ್ನು ತಿದ್ದುಪಡಿ ಮಾಡುವ ಮೂಲಕ ಬದಲಾಯಿಸಬೇಕಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ನಿಮಗೆ ಅಡಚಣೆ ಉಂಟಾಗದಂತೆ, ಆದಷ್ಟು ಬೇಗನೆ ತಿದ್ದುಪಡಿ ಕಾರ್ಯವನ್ನು ಪೂರ್ಣಗೊಳಿಸಿ.


ಇದನ್ನೂ ಓದಿ-Rasna founder passes away: "ಐ ಲವ್ ಯು ರಸ್ನಾ" ಬ್ರ್ಯಾಂಡ್‌ ಆಗಿದ್ದು ಹೇಗೆ?


ಪ್ಯಾನ್ ಕಾರ್ಡ್‌ನಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಈ ಹಂತಗಳನ್ನು ಅನುಸರಿಸಿ
>> ಮೊದಲನೆಯದಾಗಿ NSDL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು PAN ಕಾರ್ಡ್ ಹೆಸರು ತಿದ್ದುಪಡಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
>> ಈಗ ನಿಮ್ಮ ಸರಿಯಾದ ಹೆಸರನ್ನು ನಮೂದಿಸಿ, ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅರ್ಜಿದಾರರ ಫೋಟೋವನ್ನು ಅಂಟಿಸಿ ಮತ್ತು ಅದನ್ನು ಸಲ್ಲಿಸಿ.
>> ಈಗ ನೀವು ಪೇಮೆಂಟ್ ಗೇಟ್ ವೇ ಗೆ ತಲುಪುವಿರಿ ಮತ್ತು ಅಲ್ಲಿ ನೀವು ಶುಲ್ಕವನ್ನು ಪಾವತಿಸುವಿರಿ.
>> ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಯ ಸಂದರ್ಭದಲ್ಲಿ, ನೀವು ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಬಹುದು.
>> ಆಫ್‌ಲೈನ್ ಪಾವತಿಗಾಗಿ, ನೀವು ಡಿಮ್ಯಾಂಡ್ ಡ್ರಾಫ್ಟ್ ಮಾಡಿ ಮತ್ತು ಅದನ್ನು ನಿಮ್ಮ ಅರ್ಜಿ ನಮೂನೆಯೊಂದಿಗೆ NSDL ಕಚೇರಿ ವಿಳಾಸಕ್ಕೆ ಕಳುಹಿಸಬೇಕು.
>> ಇದರ ನಂತರ ನೀವು ನಿಮ್ಮ ಹೊಸ ಪ್ಯಾನ್ ಕಾರ್ಡ್ ಅನ್ನು 45 ದಿನಗಳಲ್ಲಿ ಪಡೆಯುವಿರಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.