Aadhar Card photo update :"ಆಧಾರ್ ಕಾರ್ಡ್" ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಭಾರತದ ಸರ್ಕಾರದ ಕಡೆಯಿಂದ ಸಿಗುವ ಆಧಾರ್ ಕಾರ್ಡ್ ಗುರುತು ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.ಆಧಾರ್ ಕಾರ್ಡ್ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುತ್ತದೆ. ಅದು ಭಾವಚಿತ್ರದೊಂದಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುತ್ತದೆ. 


COMMERCIAL BREAK
SCROLL TO CONTINUE READING

ಮಗುವನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಬ್ಯಾಂಕ್ ವ್ಯವಹಾರದವರೆಗೆ ಎಲ್ಲಾ ಕಡೆಗಳಲ್ಲಿ ಆಧಾರ್ ಬೇಕೇ ಬೇಕು. ಆಧಾರ್ ಕಾರ್ಡ್‌ನಲ್ಲಿರುವ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಇತರ ಮಾಹಿತಿಯು ಸರಿಯಾಗಿರುವುದು ಬಹಳ ಮುಖ್ಯ. UIDAI ಪ್ರಕಾರ, ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕು.ಆಗ ನಿಮ್ಮ ಹೆಸರು, ವಿಳಾಸ ಅಥವಾ ಇತರ ಮಾಹಿತಿಯನ್ನು ಬದಲಾಯಿಸಬಹುದು. ಇದಲ್ಲದೆ, ಆಧಾರ್ ಕಾರ್ಡ್‌ ನಲ್ಲಿರುವ ನಿಮ್ಮ ಫೋಟೋವನ್ನು ಕೂಡಾ ಬದಲಿಸಬಹುದು. 


ಇದನ್ನೂ ಓದಿ : New EV: ಮಾರುಕಟ್ಟೆಗೆ ಲಗ್ಗೆ ಇಟ್ಟ ಮತ್ತೊಂದು ಇಲೆಕ್ಟ್ರಿಕ್ ದ್ವಿಚಕ್ರ ವಾಹನ, ರೆಂಜ್-ಬೆಲೆ ಎಷ್ಟು ಗೊತ್ತಾ?


ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ನಿಮಗೆ ಇಷ್ಟವಾಗದಿದ್ದರೆ, ಅದನ್ನು ಬದಲಾಯಿಸಬಹುದು.ಆಧಾರ್‌ ನಲ್ಲಿರುವ ಫೋಟೋವನ್ನು ಸುಲಭವಾಗಿ  ಡಿಲೀಟ್ ಮಾಡಿ  ಹೊಸ ಫೋಟೋವನ್ನು ಅಪ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್ ನಲ್ಲಿನ ಫೋಟೋ ಬದಲಾಯಿಸುವ ಹಂತ ಹಂತದ ಪ್ರಕ್ರಿಯೆ ಇಲ್ಲಿದೆ. 


ಮನೆಯಲ್ಲಿಯೇ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಸಾಧ್ಯವೇ? : 
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ, ಆಧಾರ್ ಕಾರ್ಡ್‌ನಿಂದ ಫೋಟೋವನ್ನು ಬದಲಾಯಿಸಬಹುದು ಅಥವಾ ನವೀಕರಿಸಬಹುದು.ಆದರೆ ಈ ಪ್ರಕ್ರಿಯೆಯನ್ನು ಮನೆಯಿಂದಲೇ ಮಾಡಲಾಗುವುದಿಲ್ಲ. ಇದಕ್ಕಾಗಿ ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಆದರೆ ಆಧಾರ್‌ನಿಂದ ಫೋಟೋ ಬದಲಾವಣೆಗೆ  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಆಧಾರ್ ಫೋಟೋ ಬದಲಾವಣೆ ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?
* UIDAI uidai.gov.in ನ ಅಧಿಕೃತ ಸೈಟ್‌ಗೆ ಹೋಗಿ.
* ನಿಮ್ಮ ಆಧಾರ್ ಲಿಂಕ್ ಮಾಡಲಾದ ಫೋನ್ ಸಂಖ್ಯೆ ಮತ್ತು ಆ ನಂಬರ್ ಗೆ ಬರುವ OTP ಅನ್ನು ನಮೂದಿಸಿ.
* ಲಾಗಿನ್ ಆದ ನಂತರ, ಆಧಾರ್ ನೋಂದಣಿ ಫಾರ್ಮ್ ಕಾಣಿಸುತ್ತದೆ. 
* ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.


ಇದನ್ನೂ ಓದಿ : SBI ATM PIN: ಹೊಸ ಡೆಬಿಟ್ ಕಾರ್ಡ್‌ನಲ್ಲಿ ಪಿನ್ ಹೊಂದಿಸಲು ಹಂತ-ಹಂತದ ಪ್ರಕ್ರಿಯೆ


ಆಧಾರ್ ಕಾರ್ಡ್‌ನಿಂದ ಫೋಟೋ ಬದಲಾಯಿಸುವುದು ಹೇಗೆ?
ಆಧಾರ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ. ಫಾರ್ಮ್ ಅನ್ನು ಇಲ್ಲಿ ಸಲ್ಲಿಸಿದ ನಂತರ, ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಮರುಪರಿಶೀಲಿಸಿ. ಬಳಿಕ 100 ರೂ. ಶುಲ್ಕ ಪಾವತಿಸುವ ಮೂಲಕ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋಟೋವನ್ನು  ಅಪ್ಡೇಟ್ ಮಾಡಬಹುದು. ಆನ್‌ಲೈನ್ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ  ಫೋಟೋ ಅಪ್ಡೇಟ್ ಮಾಡಿದ ಆಧಾರ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.


SBI ATM PINState bank of IndiaATMATM PIN