7th Pay Commission : ಕೇಂದ್ರ ಉದ್ಯೋಗಿಗಳ ಡಿಎ ಕುರಿತು ಹೊಸ ಅಪ್ಡೇಟ್ ಇದೆ.ಕೇಂದ್ರ ಸರ್ಕಾರ ಜನವರಿ 2024ಕ್ಕೆ ತುಟ್ಟಿ ಭತ್ಯೆಯನ್ನು ಶೇಕಡಾ 50ಕ್ಕೆ ಹೆಚ್ಚಿಸಿದೆ. ತುಟ್ಟಿಭತ್ಯೆ ಶೇ. ೫೦ಕ್ಕೆ ಏರಿಕೆಯಾಗಿರುವುದರಿಂದ ಅದರ ಲೆಕ್ಕಾಚಾರ ಈಗ ಬದಲಾಗುತ್ತದೆ. ಇದೀಗ ಮುಂದಿನ ತುಟ್ಟಿಭತ್ಯೆ ಲೆಕ್ಕಾಚಾರ ಹೇಗೆ ಮತ್ತು ಯಾವ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.
ವರದಿಯ ಪ್ರಕಾರ,ಜುಲೈ 2024ರಿಂದ ತುಟ್ಟಿಭತ್ಯೆಯನ್ನು ಶೂನ್ಯದಿಂದ ಲೆಕ್ಕಹಾಕಲಾಗುತ್ತದೆ.ಆದರೆ, ಅದರ ಅಂಕಿ ಅಂಶವನ್ನು ಜನವರಿ ಮತ್ತು ಜೂನ್ ನಡುವಿನ ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.ಜನವರಿ ಎಐಸಿಪಿಐ ಅಂಕಿಅಂಶಗಳನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ ತುಟ್ಟಿ ಭತ್ಯೆಯಲ್ಲಿ ಈಗಾಗಲೇ ಶೇಕಡಾ 1 ರಷ್ಟು ಏರಿಕೆಯಾಗಿದೆ.ಆದರೆ ಫೆಬ್ರವರಿ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ಇನ್ನೂ ಹೊರಬಂದಿಲ್ಲ.ಹಾಗಾದರೆ ಅದನ್ನು ಶೂನ್ಯಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆಯೇ ಎಂಬುದು ಈಗಿರುವ ಪ್ರಶ್ನೆ.
ಇದನ್ನೂ ಓದಿ : Gold And Silver Price: ಭಾರತದಲ್ಲಿ ಏಪ್ರಿಲ್ 4 ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಸ್ಥಿರವಾಗಿದೆ!!
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯ ಲೆಕ್ಕಾಚಾರ 2024ರಲ್ಲಿ ಬದಲಾಗಲಿದೆ. ಅಂದರೆ ತುಟ್ಟಿಭತ್ಯೆ ಲೆಕ್ಕಾಚಾರ ಶೂನ್ಯದಿಂದ ಪ್ರಾರಂಭವಾಗುತ್ತದೆ.ವಾಸ್ತವವಾಗಿ, ಜನವರಿ 1 ರಿಂದ, ಉದ್ಯೋಗಿಗಳ ಡಿಎ 50 ಪ್ರತಿಶತಕ್ಕೆ ಏರಿದೆ.ನಿಯಮಗಳ ಪ್ರಕಾರ, 50 ಪ್ರತಿಶತ ತುಟ್ಟಿಭತ್ಯೆ ಮಾಡಿದ ನಂತರ, ಅದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುತ್ತದೆ. ನಂತರ ತುಟ್ಟಿಭತ್ಯೆ ಲೆಕ್ಕಾಚಾರ ಶೂನ್ಯದಿಂದ ಪ್ರಾರಂಭವಾಗುತ್ತದೆ.ಆದರೆ, ಕಾರ್ಮಿಕ ಬ್ಯೂರೋ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಅಂದರೆ ತುಟ್ಟಿಭತ್ಯೆಯ ಲೆಕ್ಕಾಚಾರ ಶೇಕಡಾ 50ಕ್ಕಿಂತ ಹೆಚ್ಚು ಮುಂದುವರಿಯುತ್ತದೆಯೇ ಅಥವಾ ಅದನ್ನು ಶೂನ್ಯವನ್ನಾಗಿಸಲಾಗುತ್ತದೆಯೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
ಮೂಲ ವೇತನದಲ್ಲಿ 50 ರಷ್ಟು ಡಿಎ ವಿಲೀನ :
2016ರಲ್ಲಿ 7ನೇ ವೇತನ ಆಯೋಗವನ್ನು ಜಾರಿಗೊಳಿಸುವಾಗ ಸರ್ಕಾರವು ತುಟ್ಟಿಭತ್ಯೆಯನ್ನು ಶೂನ್ಯಗೊಳಿಸಿತ್ತು.ನಿಯಮಗಳ ಪ್ರಕಾರ,ತುಟ್ಟಿಭತ್ಯೆ 50 ಪ್ರತಿಶತವನ್ನು ತಲುಪಿದ ನಂತರ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. 50 ಪ್ರತಿಶತದ ಪ್ರಕಾರ ಭತ್ಯೆಯಾಗಿ ನೌಕರರು ಪಡೆಯುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.
ಇದನ್ನೂ ಓದಿ : ಪಿಪಿಎಫ್ ನಲ್ಲಿ ಹಣ ಹೂಡುವವರಿಗೆ 2.69 ಲಕ್ಷ ರೂಪಾಯಿ ಹೆಚ್ಚುವರಿ ಲಾಭ! ಆದರೆ ಈ ವಿಚಾರ ನೆನಪಿರಲಿ !
ಡಿಎ ಏಕೆ ಶೂನ್ಯವಾಗಿರುತ್ತದೆ? :
ಹೊಸ ವೇತನ ಶ್ರೇಣಿಯನ್ನು ಜಾರಿಗೆ ತಂದಾಗಲೆಲ್ಲಾ ನೌಕರರು ಪಡೆಯುವ ಡಿಎಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನಿಯಮಗಳ ಪ್ರಕಾರ, ನೌಕರರು ಪಡೆದ ಪೂರ್ಣ ಡಿಎಯನ್ನು ಮೂಲ ವೇತನದೊಂದಿಗೆ ಲಿಂಕ್ ಮಾಡಬೇಕು. ಆದರೆ ಇದನ್ನು ಮಾಡಲು ಸಾಧ್ಯವಿಲ್ಲ. ಹಣಕಾಸಿನ ಪರಿಸ್ಥಿತಿಯು ಇದಕ್ಕೆ ಅಡ್ಡಿಯಾಗುತ್ತದೆ. ಆದರೆ, 2006ರಲ್ಲಿ ಆರನೇ ವೇತನ ಆಯೋಗ ಬಂದಾಗ ಐದನೇ ವೇತನ ಆಯೋಗದಲ್ಲಿ ಡಿಸೆಂಬರ್‌ವರೆಗೆ ಶೇ.187ರಷ್ಟು ಡಿಎ ಲಭ್ಯವಿತ್ತು. ಆ ಸಂದರ್ಭದಲ್ಲಿ ಪೂರ್ಣ ಡಿಎಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಯಿತು. ಹೊಸ ಪೇ ಬ್ಯಾಂಡ್‌ಗಳು ಮತ್ತು ಹೊಸ ದರ್ಜೆಯ ವೇತನವನ್ನು ಸಹ ರಚಿಸಲಾಯಿತು.
ತುಟ್ಟಿಭತ್ಯೆ ಯಾವಾಗ ಶೂನ್ಯವಾಗುತ್ತದೆ?:
ತಜ್ಞರ ಮಾತನ್ನು ಆಧರಿಸಿ ಹೇಳುವುದಾದರೆ, ಹೊಸ ತುಟ್ಟಿಭತ್ಯೆಯನ್ನು ಜುಲೈನಲ್ಲಿ ಲೆಕ್ಕಹಾಕಲಾಗುತ್ತದೆ.ಸರ್ಕಾರವು ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಹೆಚ್ಚಿಸುತ್ತದೆ. ಜನವರಿಯ ಡಿಎ ಹೆಚ್ಚಳವನ್ನು ಮಾರ್ಚ್‌ನಲ್ಲಿ ಅನುಮೋದಿಸಲಾಗಿದೆ.ಮುಂದಿನ ಪರಿಷ್ಕರಣೆ ಜುಲೈ 2024 ರಿಂದ ಜಾರಿಗೆ ಬರಲಿದೆ. ಈ ಸಂದರ್ಭದಲ್ಲಿ, ತುಟ್ಟಿಭತ್ಯೆಯನ್ನು ಸಹ ವಿಲೀನಗೊಳಿಸಿ ನಂತರ ಡಿಎ ಯನ್ನು ಶೂನ್ಯದಿಂದ ಲೆಕ್ಕಹಾಕಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.