Business Idea: ಕೇವಲ 25 ಸಾವಿರ ರೂ.ಗಳನ್ನು ಹೂಡಿಕೆ ಮಾಡಿ ಈ ಉದ್ಯಮದಿಂದ 72 ಲಕ್ಷ ರೂ.ಗಳವರೆಗೆ ನೀವು ಸಂಪಾದಿಸಬಹುದು, ಇಲ್ಲಿದೆ ವಿವರ?
Profitable Business Idea: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ.
Profitable Business Idea: ಉದ್ಯೋಗ ಅಥವಾ ವ್ಯಾಪಾರ? ಎರಡರಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆ ಬಹುತೇಕರಿಗೆ ಕಾಡುತ್ತದೆ. ಕೊರೊನಾ ನಂತರದ ಇಂದಿನ ಕಾಲದಲ್ಲಿ, ಉದ್ಯೋಗಕ್ಕಿಂತ ಜನರು ವ್ಯಾಪಾರ ಮಾಡುವುದನ್ನೇ ಲೇಸು ಎನ್ನುತ್ತಿದ್ದಾರೆ. ಕೊರೊನಾ ವೈರಸ್ ಕಾಲಾವಧಿಯಲ್ಲಿ ಖಾಸಗಿ ಉದ್ಯೋಗದಲ್ಲಿ ನಿರತರಾಗಿದ್ದವರ ಸ್ಥಿತಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ತಮ್ಮ ತಮ್ಮ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ವಜಾಗೊಳಿಸಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ..
ಕೊರೊನಾ ಅವಧಿಯಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅದರ ನಂತರ ಹೆಚ್ಚಿನ ಜನರು ತಮ್ಮದೇ ಆದ ಕೆಲಸವನ್ನು ಮಾಡಲು ಮುಂದಾಗಿದ್ದಾರೆ. ಹೊಸ ಉದ್ಯಮವನ್ನು ಪ್ರಾರಂಭಿಸಲು ಮತ್ತು ಸ್ವಾವಲಂಭಿಯಾಗಲು ಕೇಂದ್ರದ ಮೋದಿ ನೇತೃತ್ವದ ಸರ್ಕಾರವು ಜನರನ್ನು ಪ್ರೋತ್ಸಾಹಿಸುತ್ತಿದೆ. ಇದೆ ಕಾರಣದಿಂದ ಸರ್ಕಾರವು ಅಂತಹ ಜನರಿಗಾಗಿ ಹಲವು ಯೋಜನೆಗಳನ್ನು ನಡೆಸುತ್ತಿದೆ, ಇದರ ಸಹಾಯದಿಂದ ಜನರು ಕಡಿಮೆ ವೆಚ್ಚದಲ್ಲಿ ತಮ್ಮ ಉದ್ಯಮವನ್ನು ಪ್ರಾರಂಭಿಸಬಹುದು.
25 ಸಾವಿರ ಹೂಡಿಕೆ ಮಾಡಿ 72 ಲಕ್ಷ ಸಂಪಾದಿಸಿ
ವ್ಯಾಪಾರವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಸಾಕಷ್ಟು ಆದಾಯವನ್ನು ಗಳಿಕೆ ಮಾಡಬಹುದು. ಹೀಗಿರುವಾಗ ಇಂದು ನಾವು ನಿಮಗೆ ಒಂದು ಅದ್ಭುತ ವ್ಯಾಪಾರದ ಪರಿಕಲ್ಪನೆಯೊಂದನ್ನು ಹೇಳಿಕೊಡುತ್ತಿದ್ದು, ಈ ಉದ್ಯಮದಲ್ಲಿ ನೀವು ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚು ಆದಾಯ ಗಳಿಸಬಹುದು. ಈ ಉದ್ಯಮ ಆರಂಭಿಸಲು ಕನಿಷ್ಠ 25 ಸಾವಿರ ರೂಪಾಯಿ ಹೂಡಿಕೆ ಮಾಡಬೇಕು. ಇದರ ನಂತರ ನೀವು ಐದು ವರ್ಷಗಳಲ್ಲಿ 72 ಲಕ್ಷ ರೂ.ಗಳನ್ನು ಸುಲಭವಾಗಿ ಗಳಿಸಬಹುದು.
ಇದನ್ನೂ ಓದಿ-Post Office Scheme: ಈ ಸೂಪರ್ ಹಿಟ್ ಯೋಜನೆಯಲ್ಲಿ 50 ಸಾವಿರ ಠೇವಣಿ ಇರಿಸಿ, 3300 ಪಿಂಚಣಿ ಪಡೆಯಿರಿ
ನೀಲಗಿರಿ ಕೃಷಿ ಒಂದು ಲಾಭಕಾರಿ ಉದ್ಯಮವಾಗಿದೆ
ಇಲ್ಲಿ ನಾವು ಚರ್ಚಿಸುತ್ತಿರುವುದು ನೀಲಗಿರಿ ಅಂದರೆ ನೀಲಗಿರಿ ಕೃಷಿಯ ಕುರಿತು. ಗ್ರಾಮೀಣ ಭಾಗದಲ್ಲಿ ಇದರ ಬೇಸಾಯದ ಬಗ್ಗೆ ರೈತರು ತುಂಬಾ ಕಡಿಮೆ ಆಸಕ್ತಿಯನ್ನು ಹೊಂದಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ನೀಲಗಿರಿ ಕೃಷಿಯನ್ನು ಮಾಡಿದರೆ, ಇದರಿಂದ ಸಾಕಷ್ಟು ಆದಾಯವನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಈ ಕೃಷಿಯ ವಿಶೇಷತೆ ಎಂದರೆ, ಇದನ್ನು ದೇಶಾದ್ಯಂತ ಎಲ್ಲಿ ಬೇಕಾದರೂ ನೀವು ಮಾಡಬಹುದು. ಇದರ ದೊಡ್ಡ ಪ್ರಯೋಜನ ಎಂದರೆ ಈ ಕೃಷಿಯ ಮೇಲೆ ಪ್ರದೇಶ ಅಥವಾ ಹವಾಮಾನದ ಯಾವುದೇ ವಿಶೇಷ ಪರಿಣಾಮ ಇರುವುದಿಲ್ಲ.
ಇದನ್ನೂ ಓದಿ-PM Kisan: ಪಿಎಂ ಕಿಸಾನ್ ಕಂತಿನ ಹಣ ನೇರವಾಗಿ ರೈತರ ಮನೆಗೆ ತಲುಪಲಿದೆ, ಹೇಗೆ ಇಲ್ಲಿ ತಿಳಿಯಿರಿ
ಈ ಮರದ ಉಪಯೋಗಗಳೇನು?
ಒಂದು ಹೆಕ್ಟೇರ್ ಪ್ರದೇಶದಲ್ಲಿ ನೀವು ಸುಮಾರು 3 ಸಾವಿರ ನಿಲಗಿರಿಯ ಮರಗಳನ್ನು ನೆಡಬಹುದು. ಈ ಗಿಡದ ಸಸಿಗಳು ನರ್ಸರಿಯಲ್ಲಿ 7 ರಿಂದ 8 ರೂ.ಗಳಿಗೆ ಸಿಗುತ್ತವೆ.ಈ ಸಸಿಗಳು ಆಸ್ಟ್ರೇಲಿಯಾ ಮೂಲದ ಸಸಿಗಳಾಗಿದ್ದು, ಅವುಗಳನ್ನು ಭಾರತದಲ್ಲಿಯೂ ಕೂಡ ಸುಲಭವಾಗಿ ಬೆಳೆಸಬಹುದು. ಈ ಮರಗಳನ್ನು ಗಟ್ಟಿ ಹಲಗೆ, ತಿರುಳು, ಪೀಠೋಪಕರಣಗಳು, ಪೆಟ್ಟಿಗೆಗಳು ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ಬಿಹಾರ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಇವುಗಳನ್ನು ಬೆಳೆಯಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.