PM Kisan: ಪಿಎಂ ಕಿಸಾನ್ ಕಂತಿನ ಹಣ ನೇರವಾಗಿ ರೈತರ ಮನೆಗೆ ತಲುಪಲಿದೆ, ಹೇಗೆ ಇಲ್ಲಿ ತಿಳಿಯಿರಿ

PM Kisan Update: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಇನ್ಮುಂದೆ ರೈತರಿಗೆ ಮತ್ತೊಂದು ದೊಡ್ಡ ಸೌಕರ್ಯ ಸಿಗಲಿದೆ.  ಹೌದು, 11ನೇ ಕಂತಿನ ಹಣವನ್ನು ಪಡೆಯಲು ರೈತರು ಇನ್ಮುಂದೆ ಬ್ಯಾಂಕ್ ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಅಂಚೆ ಇಲಾಖೆ ರೈತರಿಗೆ ಅವರ ಮನೆಬಾಗಿಲಿದೆ ಈ ಹಣವನ್ನು ತಲುಪಿಸಲಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.   

Written by - Nitin Tabib | Last Updated : Jun 12, 2022, 07:53 PM IST
  • ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಿಗೆ ಸಂತಸದ ಸುದ್ದಿ ಪ್ರಕಟವಾಗಿದೆ.
  • ಇನ್ಮುಂದೆ ಈ ಯೋಜನೆಯಡಿ ರೈತರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ.
  • ರೈತರು ತಮ್ಮ ಮನೆಗಳಲ್ಲಿಯೇ ಕುಳಿತು ಈ ಯೋಜನೆಯ ಹಣವನ್ನು ಪಡೆಯಲಿದ್ದಾರೆ
PM Kisan: ಪಿಎಂ ಕಿಸಾನ್ ಕಂತಿನ ಹಣ ನೇರವಾಗಿ ರೈತರ ಮನೆಗೆ ತಲುಪಲಿದೆ, ಹೇಗೆ ಇಲ್ಲಿ ತಿಳಿಯಿರಿ title=
PM Kisan Update

PM Kisan Latest Update: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ಇನ್ಮುಂದೆ ಈ ಯೋಜನೆಯಡಿ ರೈತರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಹೌದು ರೈತರು ತಮ್ಮ ಕಂತಿನ ಹಣ ಪಡೆಯಲು ಬ್ಯಾಂಕ್‌ ಬಳಿ ಹೋಗಬೇಕಾಗಿಲ್ಲ. ಇದಕ್ಕಾಗಿ ಅಂಚೆ ಇಲಾಖೆ ಹೊಸ ಯೋಜನೆ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ ಪೋಸ್ಟ್‌ಮ್ಯಾನ್‌ಗಳು ರೈತರ ಮನೆ ಮನೆಗೆ ತೆರಳಿ ಅವರಿಗೆ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ನೀಡಲಿದ್ದಾರೆ. ಇದಕ್ಕಾಗಿ ಜೂನ್ 13 ರವರೆಗೆ ವಿಶೇಷ ಅಭಿಯಾನವನ್ನು ಅಂಚೆ ಇಲಾಖೆ ನಡೆಸುತ್ತಿದೆ.

ಅಂಚೆ ಇಲಾಖೆ ಉಪಕ್ರಮ
ಈ ಅಭಿಯಾನದ ಅಡಿಯಲ್ಲಿ, ಪೋಸ್ಟ್‌ಮ್ಯಾನ್‌ಗಳು ರೈತರ ಮನೆಗಳಿಗೆ ತೆರಳಿ 'ಹ್ಯಾಂಡ್ ಹೋಲ್ಡ್ ಮಶೀನ್' ಗಳ ಮೇಲೆ ಹೆಬ್ಬೆರಳು ಒತ್ತಿಸಿ ನಂತರ ರೈತರಿಗೆ ಪ್ರಧಾನ ಮಂತ್ರಿ ಸಮ್ಮಾನ್ ನಿಧಿಯನ್ನು ಹಸ್ತಾಂತರಿಸಲಿದ್ದಾರೆ. ಕೇಂದ್ರ ಸರಕಾರ ಅಂಚೆ ಇಲಾಖೆಗೆ ರೈತರಿಗೆ ಮನೆ ಮನೆಗೆ ತೆರಳಿ ಹಣ ಹಸ್ತಾಂತರಿಸುವ ಜವಾಬ್ದಾರಿ ನೀಡಿದೆ. ಇದಕ್ಕಾಗಿ ಸರ್ಕಾರ ಭಾರತೀಯ ಅಂಚೆ ಇಲಾಖೆಗೂ ವಿಶೇಷ ಅಧಿಕಾರ ನೀಡಿದೆ. ಇದುವರೆಗೆ ಬ್ಯಾಂಕ್ ಹೊರತುಪಡಿಸಿ ರೈತರೇ ಅಂಚೆ ಕಚೇರಿಗೆ ತೆರಳಿ ಹಣ ಪಡೆಯುತ್ತಿದ್ದರು.

ಇದನ್ನೂ ಓದಿ-Pension Scheme:ನಿತ್ಯ ಕೇವಲ 7 ರೂ. ಉಳಿತಾಯ ಮಾಡಿ 60 ಸಾವಿರ ಪೆನ್ಷನ್ ಜೊತೆಗೆ ತೆರಿಗೆ ಉಳಿತಾಯ, ಯಾವುದು ಈ ಯೋಜನೆ?

ಇದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ
ಈ ಕುರಿತು ಅಂಚೆ ಇಲಾಖೆಯು ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ ಎಂಬುದು ಇಲ್ಲಿ ಗಮನಾರ್ಹ. ಇದರಡಿ ಜೂನ್ 13ರವರೆಗೆ ಎಲ್ಲಾ ಅಂಚೆ ಕಚೇರಿಗಳು ತನ್ನ ವ್ಯಾಪ್ತಿಯ ಪೋಸ್ಟ್ ಮ್ಯಾನ್ ಗಳಿಗೆ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು ನೀಡಲಿದ್ದು, ನಂತರ ಅಂಚೆ ಸಿಬ್ಬಂದಿ ಆ ಮೊತ್ತವನ್ನು ರೈತರ ಮನೆಗಳಿಗೆ ತಲುಪಿಸಲಿದ್ದಾರೆ. ಇದಕ್ಕಾಗಿ ರೈತರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯಲಾಗುವುದಿಲ್ಲ. ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಈ ದೊಡ್ಡ ಹೆಜ್ಜೆಯನ್ನು ಇಟ್ಟಿದೆ.

ಇದನ್ನೂ ಓದಿ-Pension : ಕೇಂದ್ರದ ಈ ಯೋಜನೆ ಮೂಲಕ, ಕಾರ್ಮಿಕರಿಗೆ ಸಿಗಲಿದೆ ತಿಂಗಳಿಗೆ ₹3000 ಪಿಂಚಣಿ!

ಗಮನಾರ್ಹವಾಗಿ, ಮೇ 31 ರಂದು, ಪಿಎಂ ಕಿಸಾನ್ ಯೋಜನೆಯ 11 ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಇದೀಗ ರೈತರಿಗೆ ಈ ಯೋಜನೆಯ ಮೊತ್ತ ಮನೆಯಲ್ಲೇ ಕುಳಿತು ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
         

Trending News