Provident Fund: PFಗೆ ಸಂಬಂಧಿಸಿದಂತೆ Modi ಸರ್ಕಾರದ ಮಹತ್ವದ ಘೋಷಣೆ, ನೌಕರಿ ಕಳೆದುಕೊಂಡವರಿಗೆ ಸಿಗಲಿದೆ ಈ ನೆಮ್ಮದಿ
Atmanirbhar Bharat Rojgar Yojana - ಹೊಸ ಘೋಷಣೆಯಡಿ, ಖಾಸಗಿ ಕಂಪನಿಗಳಲ್ಲಿ ಹೊಸ ನೇಮಕಾತಿಗಳ ಸಂದರ್ಭದಲ್ಲಿ ಪಿಎಫ್ ಖಾತೆಯಲ್ಲಿನ ನೌಕರರ ಪಾಲನ್ನು ಸರ್ಕಾರವೆ ಭರಿಸಲಿದೆ.
ನವದೆಹಲಿ: Provident Fund - ಕೋವಿಡ್ ಬಿಕ್ಕಟ್ಟಿನೊಂದಿಗೆ (Covid Crisis) ಹೋರಾಡುತ್ತಿರುವ ದೇಶಕ್ಕೆ ಪರಿಹಾರವನ್ನು ನೀಡುವ ಮೂಲಕ ರಾಜ್ಯ ಸರ್ಕಾರಗಳಿಗೆ ಮತ್ತು ಮೈಕ್ರೋ ಫೈನಾನ್ಸ್ ಕ್ರೆಡಿಟ್ ಬಳಕೆದಾರರಿಗೆ ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಸ್ವಾವಲಂಬಿ ಭಾರತ ಉದ್ಯೋಗ ಯೋಜನೆಯನ್ನು (Atmanirbhar Bharat Rojgar Yojana) 20 ಮಾರ್ಚ್ 2022ರವರೆಗೆ ಹೆಚ್ಚಿಸಿರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಇದುವರೆಗೆ ಸುಮಾರು 21.42 ಲಕ್ಷ ಫಲಾನುಭವಿಗಳಿಗೆ 902 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೊಸ ಘೋಷಣೆಯಡಿ, ಖಾಸಗಿ ಕಂಪನಿಗಳಲ್ಲಿ ಹೊಸ ನೇಮಕಾತಿಗಳ ಸಂದರ್ಭದಲ್ಲಿ ಪಿಎಫ್ ಖಾತೆಯಲ್ಲಿನ ನೌಕರರ ಪಾಲನ್ನು ಸರ್ಕಾರವೆ ಭರಿಸಲಿದೆ..
1000 ನೌಕರರು ಇರುವ ಕಂಪನಿಗಳ ಇದ್ದರೆ ಸಂಪೂರ್ಣ PF ಸರ್ಕಾರವೇ ಭರಿಸಲಿದೆ
ಈ ಯೋಜನೆಯಡಿ, 1000 ಉದ್ಯೋಗಿಗಳ ಸಾಮರ್ಥ್ಯ ಹೊಂದಿರುವ ಕಂಪನಿಗಳಲ್ಲಿ ಉದ್ಯೋಗದಾತ ಮತ್ತು ಉದ್ಯೋಗಿಗಳ ಪಿಎಫ್ (Provident Fund) ಪಾಲನ್ನು ಸರ್ಕಾರ (Modi Government) ತುಂಬುತ್ತದೆ. 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ, ನೌಕರರ ಪಾಲಿನ 12% ನಷ್ಟು ಹಣವನ್ನು ಸರ್ಕಾರ ಭರಿಸಲಿದೆ. ಈ ಯೋಜನೆಯನ್ನು 2020 ರ ಅಕ್ಟೋಬರ್ 1 ರಂದು ಜಾರಿಗೆ ತರಲಾಯಿತು, ಅದು 20 ಜೂನ್ 2021 ರವರೆಗೆ ಇತ್ತು, ಈಗ ಅದರ ಅವಧಿಯನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ-ಭಾರತದಲ್ಲಿ ತಡವಾಗಿ ಬರಲಿದೆ ಮೂರನೇ ಅಲೆ, ನೆಮ್ಮದಿಯ ವರದಿ ನೀಡಿದ ICMR
ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡವರಿಗೂ ಕೂಡ ನೆಮ್ಮದಿ
ಈ ಯೋಜನೆಯ ಅಡಿ 15 ಸಾವಿರಕ್ಕಿಂತ ಕಡಿಮೆ ಮಾಸಿಕ ವೇತನದ ಮೇಲೆ EPFO-ನೊಂದಾಯಿತ ಸಂಸ್ಥೆಗಳಲ್ಲಿ ನೌಕರಿ ಪಡೆದವರೂ ಕೂಡ ಹೊಸ ನೌಕರರು ಎಂದು ಪರಿಗಣಿಸಲಾಗುವುದು ಮತ್ತು ಅವರಿಗೂ ಈ ಲಾಭ ಸಿಗಲಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ EPF ಧಾರಕರು ಒಂದು ವೇಳೆ 01.03.2020 ರಿಂದ 30.09.2020ರ ನಡುವೆ ಕೊರೊನಾ ಮಹಾಮಾರಿಯ ಕಾರಣ ನೌಕರಿ ಕಳೆದುಕೊಂಡಿದ್ದರೆ ಮತ್ತು 01.10.2020ರಂದು ಅಥವಾ ಅದರ ನಂತರ ಅವನಿಗೆ ಪುನಃ ನೌಕರಿ ಸಿಕ್ಕಿದ್ದರೆ, ಆತನಿಗೂ ಕೂಡ ಈ ಲಾಭ ನೀಡಲಾಗುವುದು. ಕೇಂದ್ರ ಸರ್ಕಾರ ನಿಮ್ನಲಿಖಿತ ಆಧಾರದ ಮೇಲೆ 01.10.2020ರಂದು ಅಥವಾ ಅದರ ನಂತರ ಪಾತ್ರರಾದ ಹೊಸ ನೌಕರರಿಗೆ ಇದಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಸಬ್ಸಿಡಿ ನೀಡಲಿದೆ.
ಇದನ್ನೂ ಓದಿ-2DG Commercial Launch: Dr.Reddy's Lab ವತಿಯಿಂದ 2-DG ಕೊರೊನಾ ಔಷಧಿಯ ಕಮರ್ಷಿಯಲ್ ಲಾಂಚ್
ಇದೂ ಕೂಡ ಮಹತ್ವದ ಘೋಷಣೆ
ಇದಲ್ಲದೆ, ಅಸ್ತಿತ್ವದಲ್ಲಿರುವ ECGLS ನಂತಹ ಪರಿಹಾರ ಕ್ರಮಗಳನ್ನು ಹೆಚ್ಚಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಾಲ ಬಳಕೆದಾರರಿಗೆ ಮತ್ತು ಪ್ರವಾಸೋದ್ಯಮಕ್ಕೆ ಸಾಲ ನೀಡಲು ಒಟ್ಟು ನಾಲ್ಕು ಹೊಸ ಕ್ರಮಗಳನ್ನು ಘೋಷಿಸಲಾಗಿದೆ. ವೈದ್ಯಕೀಯ ಮೂಲಸೌಕರ್ಯಗಳನ್ನು ಅಭಿವೃದ್ಧಿಗೆ ಹಣಕಾಸು ಸಚಿವರು 50,000 ಕೋಟಿ ರೂ. ಗ್ಯಾರಂಟಿ ಸಾಲ ಘೋಷಿಸಿದ್ದಾರೆ. ECGLS ಯೋಜನೆಯನ್ನು 1.5 ಲಕ್ಷ ಕೋಟಿ ರೂ.ಗಳಿಂದ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಕೊವಿಡ್ ಪೀಡಿತ ಪ್ರದೇಶಗಳಿಗೆ 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿಯನ್ನು ಸೀತಾರಾಮನ್ (FM Nirmala Sitharaman) ಘೋಷಿಸಿದ್ದಾರೆ. ಈ ಪರಿಹಾರ ಪ್ಯಾಕೇಜುಗಳು ಕರೋನಾದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ-Sugar Free Mangoes: Diabetes ರೋಗಿಗಳಿಗೊಂದು ಸಂತಸದ ಸುದ್ದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.