Business Legend Ratan Tata: ರತನ್ ಟಾಟಾ ಯಶಸ್ವಿ ಕೈಗಾರಿಕೋದ್ಯಮಿ ಮಾತ್ರವಲ್ಲ, ಟಾಟಾ ಗ್ರೂಪ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ ದೇಶ ಮತ್ತು ವಿಶ್ವದಲ್ಲಿ ತಮ್ಮದೇ ಛಾಪು ಮೂಡಿಸಿರುವ ವ್ಯಕ್ತಿತ್ವವೂ ಹೌದು. ಇಂತಹ ಮಹಾನ್ ವ್ಯಕ್ತಿ ನಿನ್ನೆ (ಬುಧವಾರ ಅಕ್ಟೋಬರ್ 10) ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿಸ್ಸಂದೇಹವಾಗಿ ಯಶಸ್ವಿ ಉದ್ಯಮಿ ಎಂದು ಗುರುತಿಸಲ್ಪಟ್ಟಿರುವ ರತನ್ ಟಾಟಾ ತಮ್ಮ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂಬ ವಿಚಾರ ಕೆಲವೇ ಕೆಲವು ಮಂದಿಗಷ್ಟೇ ಗೊತ್ತು. ಹೌದು, ಸಾವಿರ ಕೋಟಿ ಆಸ್ತಿಯ ಒಡೆಯನಾಗಿರುವ ರತನ್ ಟಾಟಾ ತಮ್ಮ ಕಂಪನಿಯಲ್ಲೇ ಉದ್ಯೋಗಕ್ಕಾಗಿ 'ರೆಸ್ಯೂಮ್' ರೆಡಿ ಮಾಡಿದ್ದರು. 


COMMERCIAL BREAK
SCROLL TO CONTINUE READING

ಸಾವಿರ ಕೋಟಿ ಆಸ್ತಿಯ ಒಡೆಯನಿಗೂ ಕಾಡಿತ್ತು ನಿರುದ್ಯೋಗದ ಕಷ್ಟ: 
ಟಾಟಾ ಗ್ರೂಪ್‌ನ ಒಡೆಯ ರತನ್ ಟಾಟಾ ಮೊದಲು ತಮ್ಮದೇ ಸಂಸ್ಥೆ ಬದಲಿಗೆ ಬೇರೆಡೆ ಕೆಲಸ ಮಾಡುತ್ತಿದ್ದರು.  ಬಳಿಕ ತಮ್ಮದೇ ಆದ ಟಾಟಾ ಗ್ರೂಪ್‌ನಲ್ಲಿ ಕೆಲಸಕ್ಕಾಗಿ ರತನ್ ಟಾಟಾ "ರೆಸ್ಯೂಮ್" ತಯಾರಿಸಿದ್ದರು. ಎಲ್ಲರಿಗೂ ಪ್ರೇರಣೆ ನೀಡಿರುವ ರತನ್ ಟಾಟಾ ಅವರ ಜೀವನದ ಪ್ರಸಿದ್ಧ ಕಥೆಯಿದು... 


ಐ‌ಬಿಎಂನಲ್ಲಿ ವೃತಿ ಬದುಕು ಆರಂಭಿಸಿದ್ದ ರತನ್ ಟಾಟಾ! 
ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರತನ್ ಟಾಟಾ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ರತನ್ ಟಾಟಾ ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ಆದರೇ, ಅದೇ ಸಮಯದಲ್ಲಿ ಅವರ ಅಜ್ಜಿ ಲೇಡಿ ನವಾಜಬಾಯಿ ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಅವರು ಭಾರತಕ್ಕೆ ಮರಳಬೇಕಾಯಿತು. ಬಳಿಕ ರತನ್ ಟಾಟಾ ಐ‌ಬಿಎಂನಲ್ಲಿ ಕೆಲಸಕ್ಕೆ ಸೇರಿದ್ದರು. ವಿಶೇಷವೆಂದರೆ ಈ ಬಗ್ಗೆ ಮನೆಯಲ್ಲಿ ಯಾರಿಗೂ ತಿಳಿದಿರಲೇ ಇಲ್ಲ. 


ಇದನ್ನೂ ಓದಿ- Ratan Tata: ಕೋಟ್ಯಾಧಿಪತಿ ಆದ್ರೂ ರತನ್‌ ಟಾಟಾ ಯಾಕೆ ಮದುವೆಯಾಗಲಿಲ್ಲ.. ಇಷ್ಟ ಪಟ್ಟ ಹುಡುಗಿಯಿಂದಲೂ ದೂರವಾಗಿದ್ದೇಕೆ..?


ಜೆ‌ಆರ್‌ಡಿ ಟಾಟಾಗೆ ವಿಷಯ ತಿಳಿದಾಗ... 
ಆದರೀ ಪುಟ್ಟ ಪ್ರಪಂಚದಲ್ಲಿ ಎಷ್ಟು ದಿನ ಈ ಸುದ್ದಿಯನ್ನು ಬಚ್ಚಿಡಲು ಸಾಧ್ಯ. ಅದರಲ್ಲೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗೆ ತಮ್ಮ ಮನೆ ಮಗನ ಬಗ್ಗೆ ತಿಳಿಯದಿರಲು ಸಾಧ್ಯವೇ ಇಲ್ಲ... ಟಾಟಾ ಗ್ರೂಪ್‌ನ ಆಗಿನ ಅಧ್ಯಕ್ಷರಾಗಿದ್ದ ಜೆಆರ್‌ಡಿ ಟಾಟಾ ಅವರಿಗೆ ರತನ್ ಟಾಟಾ ಐ‌ಬಿಎಂನಲ್ಲಿ ಕೆಲಸಕ್ಕಾಗಿ ಸೇರಿದ್ದಾರೆ ಎಂದು ತಿಳಿದಾಗ ತೀವ್ರ ಕೋಪಗೊಂಡು ಕೂಡಲೇ ಅವರಿಗೆ ಕರೆ ಮಾಡಿ, 'ನೀವು ಭಾರತದಲ್ಲಿದ್ದುಕೊಂಡು ಐಬಿಎಂನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲ, ರತನ್ ಟಾಟಾ "ರೆಸ್ಯೂಮ್" ಶೇರ್ ಮಾಡುವಂತೆ ಗದರಿದ್ದರು.  


ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ರತನ್ ಟಾಟಾ ಅವರ ಬಳಿ ರೆಸ್ಯೂಮ್ ಇರದಿದ್ದ ಕಾರಣ ಐಬಿಎಂ ಕಚೇರಿಯಲ್ಲಿ ಎಲೆಕ್ಟ್ರಿಕ್ ಟೈಪ್ ರೈಟರ್‌ಗಳಲ್ಲಿ ಟೈಪ್ ಮಾಡುವ ಮೂಲಕ ತಮ್ಮ ರೆಸ್ಯೂಮ್ ಅನ್ನು ಅವರೇ ಸಿದ್ಧಪಡಿಸಿದರು. ಅವರ ಬಯೋಡೇಟಾವನ್ನು ಹಂಚಿಕೊಂಡ ನಂತರ, ಅವರಿಗೆ 1962 ರಲ್ಲಿ ಟಾಟಾ ಇಂಡಸ್ಟ್ರೀಸ್‌ನಲ್ಲಿ ಉದ್ಯೋಗಕ್ಕಾಗಿ ಆಫರ್ ಸಿಕ್ಕಿತು. ಸ್ವಂತ ಕುಟುಂಬದ ಕುಡಿಯಾದರೂ, ಕೋಟಿ ಕೋಟಿ ಒಡೆಯನಾದರೂ ರತನ್ ಟಾಟಾ ಕಂಪನಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿತ್ತು. ಕಂಪನಿ ಕೆಲಸಕ್ಕೆ ಸಂಬಂಧಿಸಿದಂತೆ ಎಲ್ಲಾ ಅನುಭವಗಳನ್ನು ಹೊಂದಿದ ಬಳಿಕವಷ್ಟೆ ಅವರಿಗೆ ಕಂಪನಿಯ ಉನ್ನತ ಹುದ್ದೆಯನ್ನು ನೀಡಲಾಗಿತ್ತು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಮದುವೆ ಮಕ್ಕಳು ಇಲ್ಲದ ರತನ್‌ ಟಾಟಾ ಅವರ ಸಾಮ್ರಾಜ್ಯವನ್ನು ಮುಂದೆ ಯಾರು ಆಳಲಿದ್ದಾರೆ ಗೊತ್ತಾ..? 


1991ರಲ್ಲಿ ಟಾಟಾ ಸನ್ಸ್ ಮತ್ತು ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಟಾಟಾ: 
1962 ರಲ್ಲಿ ಟಾಟಾ ಇಂಡಸ್ಟ್ರೀಸ್‌ನಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿಡ್ ರತನ್ ಟಾಟಾ 1991ರಲ್ಲಿ,  ಟಾಟಾ ಸನ್ಸ್ ಮತ್ತು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಎರಡು ದಶಕಗಳ ಕಾಲ ಎಂದರೆ ಸುಮಾರು 21ವರ್ಷಗಳ ಕಾಲ ಟಾಟಾ ಗ್ರೂಪ್‌ನ್ನು ಮುನ್ನಡೆಸಿದ ಅವರು ಟಾಟಾ ಸಮೂಹವನ್ನು ವಿಶ್ವದೆದುರು ಹೊಸ ಎತ್ತರಕ್ಕೆ ಏರುವಂತೆ ಮಾಡಿದರು. ರತನ್ ಟಾಟಾ ಅವರ ನಾಯಕತ್ವದಲ್ಲಿ ಟೆಟ್ಲಿ ಟೀ, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಕೋರಸ್ ಅನ್ನು ಸ್ವಾಧೀನಪಡಿಸಿಕೊಂಡ ರತನ್ ಟಾಟಾ 100ಕ್ಕೂ ಹೆಚ್ಚು ದೇಶಗಳಲ್ಲಿ ಟಾಟಾ ಗ್ರೂಪ್ ಅನ್ನು ವಿಸ್ತರಿಸಿದರು. ಭಾರತದಲ್ಲಿ ಮಧ್ಯಮವರ್ಗದವರೂ ಕಾರು ಕೊಳ್ಳಲು ಸಾಧ್ಯವಾಗುವಂತೆ "ಟಾಟಾ ನ್ಯಾನೋ ಕಾರ್" ಅನ್ನು ಮಾರುಕಟ್ಟೆಗೆ ಪ್ರವೇಶಿಸುವುದು ಕೂಡ ರತನ್ ಟಾಟಾ ಅವರದ್ದೇ ಪರಿಕಲ್ಪನೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.