RBI on 10 rupee coin: ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯ ಅಮಾನ್ಯ ಎಂಬ ತಪ್ಪು ಕಲ್ಪನೆ ಎಲ್ಲೆಡೆ ಹರಿದಾಡುತ್ತಿದೆ. ದಿನಸಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿಯೂ ಈ ಕಾಯಿನ್‌ ಚಲಾವಣೆಯಾಗಬೇಕು, ಗ್ರಾಹಕರು ನೀಡಿದರೆ ತಗೆದುಕೊಳ್ಳಬೇಕು ಎಂದು ಆರ್‌ಬಿಐ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಪ್ರಯೋಜನವಾಗುತ್ತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮನೆಯಲ್ಲಿ ರಾಶಿರಾಶಿ ಹಳೆಯ ಸೀರೆ-ಬಟ್ಟೆಗಳಿದ್ಯಾ? ಹಾಗಾದ್ರೆ ಈ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಿ ಸಾವಿರ ಸಾವಿರ ರೂಪಾಯಿ ಪಡೆಯಿರಿ! ಬಟ್ಟೆ ಮಾರುವ ಸೈಟ್ ಇಲ್ಲಿದೆ


ಹೀಗಾಗಿ ಆರ್‌ಬಿಐ ಕ್ರಮಕ್ಕೆ ಮುಂದಾಗಿದ್ದು, ಹತ್ತು ರೂಪಾಯಿ ನಾಣ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಹಕರೊಂದಿಗೆ ಮಾತನಾಡಲು ಆರ್‌ಬಿಐ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಷ್ಟೇ ಅಲ್ಲದೆ, ಎಲ್ಲಾದರೂ ಗ್ರಾಹಕರು ನೀಡಿದ 10 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳದೆ ಸುಳ್ಳು ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರ್‌ಬಿಐ ಸ್ಪಷ್ಟ ಆದೇಶ ಹೊರಡಿಸಿದೆ.


ಇದನ್ನೂ ಓದಿ: ಶ್ವಾನವನ್ನು ಮದುವೆಯಾಗಲು ರೆಡಿಯಾದ ಖ್ಯಾತ ಮ್ಯೂಸಿಕ್‌ ಡೈರೆಕ್ಟರ್‌..!? ಫೋಸ್ಟ್‌ ವೈರಲ್‌


ಪ್ರಸ್ತುತ ಮಾರುಕಟ್ಟೆಯಲ್ಲಿ ಸುಕ್ಕುಗಟ್ಟಿದ ಮತ್ತು ಹರಿದ ನೋಟುಗಳನ್ನು ಬೇಕಾದರೂ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಹತ್ತು ರೂಪಾಯಿ ನಾಣ್ಯಗಳನ್ನು ಮಾತ್ರ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳು ಆರ್‌ಬಿಐ ಕಿವಿಗೆ ಬಿದ್ದಿದೆ. ಇದೇ ಕಾರಣಕ್ಕೆ ಮಾನ್ಯವಿರುವ 10 ರೂಪಾಯಿ ಕಾಯಿನ್‌ ಬಗ್ಗೆ ಜಾಗೃತಿ ಮೂಡಿಸಲು ಆರ್‌ಬಿಐ ಮುಂದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.