ಬೆಂಗಳೂರು : RBI Hikes Repo Rate: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆ ಬಳಿಕ ರೆಪೊ ದರ ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಆರ್‌ಬಿಐ ಎರಡನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಿದೆ. ರೆಪೊ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕಾರು ಸಾಲದ ಇಎಂಐಗಳು ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ.


COMMERCIAL BREAK
SCROLL TO CONTINUE READING

ಹೆಚ್ಚಾಗುತ್ತದೆ ಸಾಲದ EMI  :
ರೆಪೊ ದರದಲ್ಲಿ ಆರ್‌ಬಿಐ ಬದಲಾವಣೆ ಮಾಡಿರುವುದು ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ದಾರಿ ಮಾಡಿಕೊಟ್ಟಿದೆ. ರೆಪೋ ದರ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಗೃಹ ಸಾಲ, ಕಾರು ಸಾಲದ ಇಎಂಐ ಹೆಚ್ಚಾಗಲಿದೆ. 


ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ


ಏನಾಗಲಿದೆ ಪರಿಣಾಮ ? :
ರೆಪೊ ದರವನ್ನು ಹೆಚ್ಚಿಸಿರುವ ನೇರ ಪರಿಣಾಮ ಗೃಹ ಸಾಲ, ಕಾರು ಸಾಲ ಅಥವಾ ಇತರ ಯಾವುದೇ ಸಾಲದ ಮೇಲೆ ಬೀರುತ್ತದೆ. ಈಗಾಗಲೇ ಯಾವುದಾದರೂ ಬ್ಯಾಂಕ್ ನಲ್ಲಿ ಸಾಲ ಹೊಂದಿದ್ದರೆ ಅಥವಾ ಸಾಲವನ್ನು ತೆಗೆದುಕೊಳಳ್ಳುವ ಬಗ್ಗೆ ಯೋಚನೆ ಇದ್ದರೆ ಮುಂದಿನ ದಿನಗಳಲ್ಲಿ ಆ ಸಾಲದ ಬಡ್ಡಿದರ ಹೆಚ್ಚಳವಾಗುತ್ತದೆ. ಪರಿಣಾಮವಾಗಿ ಸಾಲದ  EMI ಮೊದಲಿಗಿಂತ ಹೆಚ್ಚಾಗಿರುತ್ತದೆ. ಇದು ಹೊಸ ಮತ್ತು ಹಳೆಯ ಹೀಗೆ ಎರಡೂ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.


ಇದನ್ನು ಅಂಕಿ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದಾದರೆ : 
ಗ್ರಾಹಕರು 20 ವರ್ಷಗಳವರೆಗೆ ಗೃಹ ಸಾಲವನ್ನು ಬ್ಯಾಂಕ್ ನಿಂದ ಪಡೆದಿದ್ದರೆ  ಇಲ್ಲಿಯವರೆಗೆ, ಗೃಹ ಸಾಲದ ಬಡ್ಡಿ ದರವು ಶೇಕಡಾ 7.20 ರಷ್ಟಿತ್ತು ಎಂದು ಕೊಳ್ಳೋಣ. ಆದರೆ ಇನ್ನು ಮುಂದೆ ಅದು ಶೇಕಡಾ 7.70 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. 30 ಲಕ್ಷಗಳ ಸಾಲದ ಮೇಲಿನ ಪ್ರಸ್ತುತ ಬಡ್ಡಿದರದಲ್ಲಿ 20 ವರ್ಷಗಳವರೆಗೆ ತಿಂಗಳಿಗೆ  23,620 ರೂ.  EMI  ಪಾವತಿಸುತ್ತಿದ್ದರೆ , ಇನ್ನು ಮುಂದೆ ಶೇಕಡಾ 0.50 ರಷ್ಟು ಹೆಚ್ಚು ಬಡ್ಡಿ ಯೊಂದಿಗೆ  24,536 ರೂ. ಇಎಂಐ ಪಾವತಿಸಬೇಕಾಗುತ್ತದೆ. ಅಂದರೆ, ಪ್ರತಿ ತಿಂಗಳು 916 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ. ಇದನ್ನು ವರ್ಷಕ್ಕೆ ಹೋಲಿಸಿದರೆ  ಪ್ರತಿ ವರ್ಷ ಸುಮಾರು 10,992 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : ಸರ್ಕಾರದ ಯೋಜನೆಯಡಿ ಸಿಗಲಿದೆ 2.67 ಲಕ್ಷ ರೂಪಾಯಿ..! ನಿಮಗೂ ಬಂದಿದೆಯೇ? ಇಂಥಹ ಸಂದೇಶ ?


ರೆಪೋ ದರ ಎಂದರೇನು?
ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರ ಹೆಚ್ಚಳದಿಂದ ಬ್ಯಾಂಕ್‌ಗಳು ಆರ್‌ಬಿಐನಿಂದ ಹೆಚ್ಚಿನ ದರದಲ್ಲಿ ಸಾಲ ಪಡೆಯಲಿವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತದೆ. ಇದು ಗ್ರಾಹಕರ EMI ಗಳ ಮೇಲೆ ನೇರ ಪರಿಣಾಮ ಬೀರುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.