Reserve Bank of India : ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ನಿರ್ಧರಿಸುವ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯ ನಿರ್ಧಾರ ಇಂದು ಹೊರಬೀಳಲಿದೆ.  ಎಂಪಿಸಿ ಸಭೆಯ ಫಲಿತಾಂಶಗಳ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಲಿದ್ದಾರೆ. ಈ ಬಾರಿಯೂ ಆರ್‌ಬಿಐನಿಂದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಬಹುದು ಎಂದು ಮೂಲಗಳು ಹೇಳುತ್ತವೆ. ಈ ಬಾರಿ ರಿಸರ್ವ್ ಬ್ಯಾಂಕ್ ನಿಂದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದರೆ ಅದು ಶೇ.6.75ರ ಮಟ್ಟವನ್ನು ತಲುಪಲಿದೆ.


COMMERCIAL BREAK
SCROLL TO CONTINUE READING

ಗೃಹ ಸಾಲದ EMI ಹೆಚ್ಚಾಗುತ್ತದೆ :
ಇದರೊಂದಿಗೆ ಮೇ 2022 ರಿಂದ ಪ್ರಾರಂಭವಾದ ಬಡ್ಡಿದರ ಏರಿಕೆ  ಹೆಚ್ಚಿಸುವ ಪ್ರಕ್ರಿಯೆ ಕೂಡಾ ಇಲ್ಲಿಗೆ ಕೊನೆಯಾಗಲಿದೆ ಎನ್ನುತ್ತಾರೆ ತಜ್ಞರು. 2022 ಮೇ ತಿಂಗಳಿನಿಂದ ಇಲ್ಲಿಯವರೆಗೆ, ರೆಪೊ ದರವು 2.5 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಸಮಯದಲ್ಲಿ, ರೆಪೊ ದರವು 4 ಶೇಕಡಾದಿಂದ 6.5 ಶೇಕಡಾಕ್ಕೆ ಏರಿದೆ. ಇದು ನಾಲ್ಕು ವರ್ಷಗಳ ಗರಿಷ್ಠ ಮಟ್ಟವಾಗಿದೆ. ರೆಪೋ ದರ ಏರಿಕೆಯ ಪರಿಣಾಮ ಬಡ್ಡಿ ದರದ ಮೇಲೂ ಕಾಣಿಸುತ್ತದೆ. ರೆಪೋ ದರದ ಹೆಚ್ಚಳದಿಂದಾಗಿ ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲದಂತಹ ಎಲ್ಲಾ ರೀತಿಯ ಸಾಲಗಳು ದುಬಾರಿಯಾಗುತ್ತವೆ. 


ಇದನ್ನೂ ಓದಿ : Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, 10 ಗ್ರಾಂ ದರ ಕೇಳಿದ್ರೆ ಶಾಕ್ ಆಗ್ತೀರಾ! ಬಂಗಾರ ಇನ್ನು ಕನಸು ಮಾತ್ರ


ಮೊದಲ ದ್ವೈಮಾಸಿಕ ಹಣಕಾಸು ನೀತಿಯ ಘೋಷಣೆ : 
2023-24 ರ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್‌ಬಿಐ ಪ್ರಕಟಿಸಲಿದೆ. ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸುತ್ತಿದೆ. ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ಹಣದುಬ್ಬರವನ್ನು ಶೇ.2-6ರ ವ್ಯಾಪ್ತಿಯಲ್ಲಿ ತರಲು ರಿಸರ್ವ್ ಬ್ಯಾಂಕ್  ಆದ್ಯತೆ ನೀಡಬೇಕು ಎನ್ನುವುದು ಹಣಕಾಸು ಸಚಿವಾಲಯದ ಅಧಿಕಾರಿಗಳ ವಾದ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಬಡ್ಡಿದರವನ್ನು ಹೆಚ್ಚಿಸಬೇಕಾಗುತ್ತದೆ. 


ಪರಿಣಾಮ ಏನಾಗಲಿದೆ?
ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿರುವುದು ಬ್ಯಾಂಕ್‌ಗಳ ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರ ಮತ್ತು FD ಮೇಲೆ ಲಭ್ಯವಿರುವ ಬಡ್ಡಿ ದರವನ್ನು ಹೆಚ್ಚಿಸಬಹುದು. ಇದು ಗ್ರಾಹಕರ ಗೃಹ ಸಾಲದ EMI ಅನ್ನು ಹೆಚ್ಚಿಸುತ್ತದೆ. ಇದಲ್ಲದೆ, ಹಣದುಬ್ಬರದೊಂದಿಗೆ ಬೆಳವಣಿಗೆಯ ದರದಲ್ಲಿ ಕುಸಿತವಾಗಬಹುದು.


ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಜಾಕ್‌ಪಾಟ್ ! ಹಿರಿಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಮತ್ತಷ್ಟು ಇಳಿಕೆ


ರೆಪೋ ದರ ಎಂದರೇನು?
ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರವನ್ನು ಹೆಚ್ಚಿಸುವುದರಿಂದ ಬ್ಯಾಂಕ್‌ಗಳು ಆರ್‌ಬಿಐನಿಂದ ದುಬಾರಿ ದರದಲ್ಲಿ ಸಾಲ ಪಡೆಯುತ್ತವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಬಡ್ಡಿ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ನಿಮ್ಮ EMI ಮೇಲೆ ನೇರ ಪರಿಣಾಮ ಬೀರುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.