ನವದೆಹಲಿ: RBI Monetary Policy - ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹಣಕಾಸು ಸಮಿತಿಯ ಸಭೆಯ ಫಲಿತಾಂಶ ಪ್ರಕಟಗೊಂಡಿವೆ. ಆರ್‌ಬಿಐ ಮತ್ತೊಮ್ಮೆ ರೆಪೊ ದರವನ್ನು ಸ್ಥಿರವಾಗಿರಿಸಿದೆ. ಅಂದರೆ ರೆಪೊ ದರವು ಶೇ.4 ರಷ್ಟು ಮುಂದುವರೆಯಲಿದೆ. ಇದರರ್ಥ ನಿಮ್ಮ ಬ್ಯಾಂಕ್ EMI ಕಡಿಮೆಯಾಗುವುದಿಲ್ಲ. ವಾಸ್ತವದಲ್ಲಿ ರೆಪೋ ದರ ಇಳಿಕೆ ಮಾಡಿದರೆ, ಬ್ಯಾಂಕ್ ಗಳ ಮೇಲೆ ಬಡ್ಡಿದರ ಕಡಿಮೆ ಮಾಡುವಂತೆ ಒತ್ತಡ ಉಂಟಾಗೀರುತ್ತದೆ. ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿದರೆ, ಇಎಂಐ ಕೂಡ ಕಡಿಮೆಯಾಗುತ್ತದೆ.


Simple One Electric Scooter: ಆಗಸ್ಟ್ 15 ರಂದು 13 ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ವಿಶೇಷತೆ ಏನೆಂದು ತಿಳಿಯಿರಿ


COMMERCIAL BREAK
SCROLL TO CONTINUE READING

ಇನ್ನೊಂದೆಡೆ ಡಿಮಾಂಡ್ ಔಟ್ ಲುಕ್ ನಲ್ಲಿ ಸುಧಾರಣೆಯಾಗಿದೆ ಆದರೆ, ಪರಿಸ್ಥಿತಿ ಸಾಮಾನ್ಯವಾಗಲು ಇನ್ನಷ್ಟು ಸಮಯಾವಕಾಶ ಬೇಕಾಗಲಿದೆ.  ಡಿಮಾಂಡ್ ಹಾಗೂ ಸಪ್ಲೈ ಅನ್ನು ಸಮತೋಲನದಲ್ಲಿರಿಸಲು ಕೆಲ ಉಪಾಯಗಳನ್ನು ಮಾಡಬೇಕಿದ್ದು, ಜೂನ್ ತಿಂಗಳಿನಲ್ಲಿ ಹಣದುಬ್ಬರ ದರ ಹೆಚ್ಚಾಗಿದೆ. FY21-22 ರಲ್ಲಿ ಚಿಲ್ಲರೆ ಹಣದುಬ್ಬರದ (Retail Inflation) ಗುರಿಯನ್ನು ಶೇ.5.7ರಷ್ಟು ಇರಿಸಲಾಗಿದೆ ಎಂದು RBI ಗವರ್ನರ್ ಹೇಳಿದ್ದಾರೆ. 


EPFO ಸದಸ್ಯರಿಗೆ ಸಿಗಲಿದೆ 7 ಲಕ್ಷ ರೂಪಾಯಿಗಳ ಲಾಭ ..! ಇದಕ್ಕಾಗಿ ಏನು ಮಾಡಬೇಕು ತಿಳಿಯಿರಿ


FY22ರಲ್ಲಿ GDP ಬೆಳವಣಿಗೆ ದರ ಶೇ.9.5 ರಷ್ಟು ಇರಲಿದೆ
2022ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ನಿರೀಕ್ಷೆಯಲ್ಲಿ RBI ಗವರ್ನರ್ ಯಾವುದೇ ಬದಲಾವಣೆ ಮಾಡಿಲ್ಲ. FY22ರ ಹಣಕಾಸು ವರ್ಷದಲ್ಲಿ GDP ಬೆಳವಣಿಗೆ ದರ ಶೇ.9.5ರಷ್ಟು ಇರಲಿದೆ ಎಂದು ಅವರು ಅಂದಾಜು ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ-Central Govt Additional Pension Scheme : ಕೇಂದ್ರ ಸರ್ಕಾರದ ಹೆಚ್ಚುವರಿ ಪಿಂಚಣಿ ಯೋಜನೆ : ನೀವು ತಿಂಗಳಿಗೆ ಗರಿಷ್ಠ 1,25,000 ಪಿಂಚಣಿ ಪಡೆಯುವುದು! ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ