RBI New Rule! ಬ್ಯಾಂಕ್ ನಲ್ಲಿ ಚೆಕ್ ನೀಡುವ ಮೊದಲು ಈ ಸಂಗತಿಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಹಾನಿ ತಪ್ಪಿದ್ದಲ್ಲ

 RBI New Rule - ನೀವೂ ಕೂಡ ಒಂದು ವೇಳೆ ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಈ ಸುದ್ದಿಯನ್ನು ಓದಲು ಮರೆಯಬೇಡಿ.  ಈಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಚೆಕ್ ನೀಡುವ ಮುನ್ನ ಜಾಗರೂಕರಾಗಿರಬೇಕಾದ ಅವಶ್ಯಕತೆ ಇದೆ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.

Written by - Nitin Tabib | Last Updated : Aug 3, 2021, 07:29 PM IST
  • RBI, NACH ನಿಯಮಗಳಲ್ಲಿ ಬದಲಾವಣೆ ಮಾಡಿದೆ.
  • ವಾರಾಂತ್ಯದಲ್ಲಿಯೂ ಕೂಡ NACH ಸೇವೆಗಳು ಲಭ್ಯ ಇರಲಿವೆ.
  • ವಾರಾಂತ್ಯದಲ್ಲಿಯೂ ಕೂಡ ಖಾತೆಗೆ ವೇತನ, ಪೆನ್ಶನ್ ಬರಲಿದ್ದು, EMI ಕೂಡ ಕಡಿತಗೊಳ್ಳಲಿದೆ.
RBI New Rule! ಬ್ಯಾಂಕ್ ನಲ್ಲಿ ಚೆಕ್ ನೀಡುವ ಮೊದಲು ಈ ಸಂಗತಿಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಹಾನಿ ತಪ್ಪಿದ್ದಲ್ಲ  title=
RBI New Rule (File Photo)

ನವದೆಹಲಿ: RBI New Rule - ನೀವೂ ಕೂಡ ಒಂದು ವೇಳೆ ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಈ ಸುದ್ದಿಯನ್ನು ಓದಲು ಮರೆಯಬೇಡಿ.  ಈಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಚೆಕ್ ನೀಡುವ ಮುನ್ನ ಜಾಗರೂಕರಾಗಿರಬೇಕಾದ ಅವಶ್ಯಕತೆ ಇದೆ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಆದ್ದರಿಂದ ನೀವು ಬ್ಯಾಂಕಿನ ಈ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ಅನ್ನು ದಿನದ 24 ಗಂಟೆಯೂ ಹಾಗೂ ವಾರದ ಏಳೂ ದಿನಗಳವರೆಗೆ ಕಾರ್ಯನಿರ್ವಹಿಸುವಂತೆ ಮಾಡಲು RBI ನಿರ್ಧರಿಸಿದೆ. ಇದರ ಅಡಿಯಲ್ಲಿ, ಇದೀಗ ಈ ನಿಯಮವು ಎಲ್ಲಾ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಿಗೂ ಅನ್ವಯವಾಗುತ್ತದೆ.

ಚೆಕ್ ನೀಡುವ ಮೊದಲು ಈ ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಿ
ಈ ಹೊಸ ನಿಯಮದ ಅಡಿಯಲ್ಲಿ ಇದೀಗ ರಜಾ ದಿನಗಳಲ್ಲಿಯೂ ಕೂಡ ನಿಮ್ಮ ಚೆಕ್ ಕ್ಲಿಯರಿಂಗ್ (Cheque Clearing) ಆಗಲಿದೆ. ಆದರೆ, ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಾಗುವಷ್ಟು ಬ್ಯಾಲೆನ್ಸ್ ಇಲ್ಲದೆ ಹೋದಲ್ಲಿ, ನಿಮ್ಮ ಚೆಕ್ ಬೌನ್ಸ್ ಆಗಿ ನಿಮಗೆ ಪೆನಾಲ್ಟಿ ಬೀಳುವ ಸಾಧ್ಯತೆ ಇದೆ. ಏಕೆಂದರೆ, ಶನಿವಾರ ನೀವು ಜಾರಿಗೊಳಿಸುವ ಚೆಕ್ ಇದೀಗ ಭಾನುವಾರ ಕೂಡ ಕ್ಲಿಯರಿಂಗ ಆಗಲಿದೆ. ಅಂದರೆ, ಚೆಕ್ ಕ್ಲಿಯರಿಂಗ್ ಗಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಕಾಯುವ ಅವಶ್ಯಕತೆ ಇದೆ. ಇಲ್ಲದೆ ಹೋದರೆ, ಚೆಕ್ ಬೌನ್ಸ್ ಆಗಿ ನಿಮಗೆ ಪೆನಾಲ್ಟಿ ಬೀಳುವ ಸಾಧ್ಯತೆ ಇದೆ. ಈ ಮೊದಲು ಚೆಕ್ ನೀಡುವ ಮೊದಲು ಗ್ರಾಹಕರು ಚೆಕ್ ರಜಾದಿನಗಳ ಬಳಿಕವೆ ಕ್ಲಿಯರ್ ಆಗಲಿದೆ ಎಂದು ಭಾವಿಸುತ್ತಿದ್ದರು. ಆದರೆ, ಇದೀಗ ರಜಾ ದಿನಗಳಲ್ಲಿಯೂ ಕೂಡ ಚೆಕ್ ಕ್ಲಿಯರ್ ಆಗಲಿದೆ.

ಇದನ್ನೂ ಓದಿ-SBI ನಿಂದ ಮಹಿಳೆಯರಿಗೆ ಸಿಹಿ ಸುದ್ದಿ : ಶೂನ್ಯ ಬಡ್ಡಿ ದರದಲ್ಲಿ ಗೃಹ ಸಾಲ ಯೋಜನೆ!

ವಾರಾಂತ್ಯದಲ್ಲಿಯೂ ಕೂಡ ವೇತನ, ಪೆನ್ಷನ್, EMI ಸಿಗಲಿದೆ
NACH ಒಂದು ಬಲ್ಕ್ ಪೇಮೆಂಟ್ ಪ್ಲಾಟ್ ಫಾರ್ಮ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ನಿರ್ವಹಿಸುತ್ತದೆ. ಇದು ಹಲವು ರೀತಿಯ ಕ್ರೆಡಿಟ್ ಟ್ರಾನ್ಸ್ಫರ್ ಸೇವೆಗಳಾಗಿರುವ ಡಿವಿಡೆಂಡ್ (Dividend), ಬಡ್ಡಿ, ವೇತನ ಹಾಗೂ ಪೆನ್ಷನ್ (Pension) ಸೌಕರ್ಯ ಒದಗಿಸುತ್ತದೆ. ಇದಲ್ಲದೆ ವಿದ್ಯುತ್ ಬಿಲ್, ಅಡುಗೆ ಅನಿಲ, ಟೆಲಿಫೋನ್, ನೀರು. ಸಾಲ, EMI, ಮ್ಯೂಚವಲ್ ಫಂಡ್ ಹಾಗೂ ಇನ್ಸುರನ್ಸ್ ಪಾವತಿಯ ಸೌಲಭ್ಯ ನೀಡುತ್ತದೆ. ಅಂದರೆ, ಇನ್ಮುಂದೆ ಈ ಎಲ್ಲಾ ಸೇವೆಗಳನ್ನು ಪಡೆಯಲು ಸೋಮವಾರದಿಂದ ಶುಕ್ರವಾರದವರೆಗೆ ಕಾಯಬೇಕಾಗಿಲ್ಲ. ಇವುಗಳನ್ನು ನೀವು ವೀಕ್ ಎಂಡ್ ನಲ್ಲಿಯೂ ಕೂಡ ಮಾಡಬಹುದು.

ಇದನ್ನೂ ಓದಿ-Post Office Scheme: 25 ಸಾವಿರ ರೂ. ಹೂಡಿಕೆ ಮಾಡಿ, 21 ಲಕ್ಷದವರೆಗೆ ಗಳಿಸಿ, ಹೇಗೆಂದು ತಿಳಿಯಿರಿ...

ಈ ಕುರಿತು ಹೇಳಿಕೆ ನೀಡಿರುವ RBI, NACH ಲಾಭಾರ್ಥಿಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ಒಂದು ಪ್ರಮುಖ ಡಿಜಿಟಲ್ ಮೋಡ್ ರೂಪದಲ್ಲಿ ಮುಂದೆ ಬಂದಿದ್ದು, ಪ್ರಸ್ತುತ ಸಮಯದಲ್ಲಿ ಕೊವಿಡ್-19 (Covid-19) ಕಾಲಾವಧಿಯಲ್ಲಿ ಸಮಯಕ್ಕೆ ಹಾಗೂ ಪಾರದರ್ಶಕವಾಗಿ ಸಬ್ಸಿಡಿ ವರ್ಗಾವಣೆಯಲ್ಲಿ ಸಹಾಯ ಮಾಡುತ್ತಿದೆ. ಪ್ರಸ್ತುತ NACH ಸೇವೆಗಳನ್ನು ಕೇವಲ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿರುವ ದಿನಗಳಲ್ಲಿ ಮಾತ್ರ ಲಭ್ಯವಿದೆ. ಆದರೆ, ಆಗಸ್ಟ್ 1 ರಿಂದ ಈ ಸೇವೆ ವಾರದ ಏಳೂ ದಿನಗಳವರೆಗೆ ಲಭ್ಯವಿರಲಿದೆ.

ಇದನ್ನೂ ಓದಿ-India Post : ಈ ಯೋಜನೆಯಲ್ಲಿ ಹೂಡಿಕೆ ಮಾಡಿ : ತಿಂಗಳಿಗೆ ಪಡೆಯಿರಿ 3300 ರೂ.ವರೆಗೆ ಪಿಂಚಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News