RBI MPC Meeting 2021: Payments Bank ಗಳಲ್ಲಿನ ಡಿಪಾಸಿಟ್ ಲಿಮಿಟ್ 1 ರಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ RBI
RBI MPC Meeting: ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 7 ರಂದು ತನ್ನ ನೀತಿಗತ ಬಡ್ಡಿದರಗಳನ್ನು ಪ್ರಕಟಿಸಿದ್ದು, ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದಲ್ಲದೆ RBI Payments Bankಗಳ ಕುರಿತು ಕೂಡ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಬುಧವಾರ ಪ್ರಕಟಗೊಂಡ RBI Monetary Policyಯಲ್ಲಿ ಪೇಮೆಂಟ್ಸ್ ಬ್ಯಾಂಕ್ ಗಳಿಗೆ ಭಾರಿ ಪ್ರೋತ್ಸಾಹನ ನೀಡಲಾಗಿದೆ. ತನ್ನ ವಾರ್ಷಿಕ ಆರ್ಥಿಕ ನೀತಿಯಲ್ಲಿ ಕೇಂದ್ರೀಯ ಬ್ಯಾಂಕ್ ಪೇಮೆಂಟ್ಸ್ ಬ್ಯಾಂಕ್ ಗಳಲ್ಲಿ ಮಾಡಲಾಗುವ ಹೂಡಿಕೆಯ ಮಿತಿಯನ್ನು ಹೆಚ್ಚಿಸಿದೆ.
ನವದೆಹಲಿ: RBI Monetary Policy 2021: ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 7 ರಂದು ತನ್ನ ನೀತಿಗತ ಬಡ್ಡಿದರಗಳನ್ನು ಪ್ರಕಟಿಸಿದ್ದು, ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದಲ್ಲದೆ RBI Payments Bankಗಳ ಕುರಿತು ಕೂಡ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಬುಧವಾರ ಪ್ರಕಟಗೊಂಡ RBI Monetary Policyಯಲ್ಲಿ ಡಿಜಿಟಲ್ ಪೇಮೆಂಟ್ಸ್ ಬ್ಯಾಂಕ್ (Digital Payments Bank) ಸೇವೆ ಒದಗಿಸುವ Paytm, Airtel Payments Bank, India Post Payments Bank ಸೇರಿತಂತೆ ಇತರೆ ಡಿಜಿಟಲ್ ಪೇಮೆಂಟ್ ಬ್ಯಾಂಕ್ ಗಳಿಗೆ ಭಾರಿ ಉತ್ತೇಜನ ನೀಡಿದೆ. ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಪೇಮೆಂಟ್ಸ್ ಬ್ಯಾಂಕ್ ಗಳಲ್ಲಿ ಹೂಡಿಕೆಯ ಮಿತಿಯಲ್ಲಿ ಹೆಚ್ಚಳ ಮಾಡಿದೆ. ಬ್ಯಾಂಕ್ ಇದೀಗ ಈ ಮಿತಿಯನ್ನು 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ದೀರ್ಘ ಕಾಲದಿಂದ ಪೇಮೆಂಟ್ಸ್ ಬ್ಯಾಂಕ್ ಗಳು ಈ ಮಿತಿಯನ್ನು 1 ರಿಂದ 2 ಲಕ್ಷ ರೂ.ಗಳಿಗೆ ಏರಿಸುವಂತೆ ಮನವಿ ಮಾಡಿದ್ದವು. RBIನ ಈ ನಿರ್ಧಾರದಿಂದ ಪೇಮೆಂಟ್ಸ್ ಬ್ಯಾಂಕ್ ಗಳಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ.
ಇದನ್ನೂ ಓದಿ- RBI Monetary Policy: RBIನ ಈ ನಿರ್ಧಾರದಿಂದ FD ಹೂಡಿಕೆದಾರರಿಗೆ ಲಾಭ
ಚಿಲ್ಲರೆ ಹಣದುಬ್ಬರ ಶೇ.5ರ ಆಸುಪಾಸು ಇರುವ ಸಾಧ್ಯತೆ
ಈ ಕುರಿತು ಮಾಹಿತಿ ನೀಡಿರುವ RBI ಗವರ್ನರ್ (RBI Governor) ಶಕ್ತಿಕಾಂತಾ ದಾಸ್ (Shaktikanta Das), ಪ್ರಸ್ತುತ ಬ್ಯಾಂಕ್ ಪೇಮೆಂಟ್ಸ್ ವ್ಯಾಲೆಟ್ ಅಪ್ಗ್ರೇಡೆಶನ್ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರಿಗೆ ಒಂದು ವ್ಯಾಲೆಟ್ ನಿಂದ ಮತ್ತೊಂದು ವ್ಯಾಲೆಟ್ ಗೆ ಸುಲಭವಾಗಿ ಹಣ ವರ್ಗಾಯಿಸುವ ಸ್ವಾತಂತ್ರ್ಯ ಸಿಗಬೇಕು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಗೂಗಲ್ ಪೆ ಮೂಲಕ ಬಳಕೆದಾರರು ಪೆಟಿಎಂ ವ್ಯಾಲೆಟ್ ಗೆ ಹಣ ವರ್ಗಾಯಿಸಲು ಬರುವುದಿಲ್ಲ. ಹೊಸ ವರ್ಷದ ಹೊಸ ವಿತ್ತೀಯ ನೀತಿ ಪ್ರಕಟಿಸಿ ಮಾತನಾಡಿರುವ ಶಕ್ತಿಕಾಂತಾ ದಾಸ್, 2022 ಆರ್ಥಿಕ ವರ್ಷದ ಮೊದಲ ಅರ್ಧವಾರ್ಷಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ.5 ರ ಆಸುಪಾಸು ಇರುವ ಸಾಧ್ಯತೆ ಇದೆ ಹಾಗೂ ಇದಕ್ಕೂ ಮೊದಲು ಇದು ಶೇ.5.2ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ-RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ
ಇದೇ ವೇಳೆ ಆರ್ಥಿಕ ವರ್ಷ 2022 ರಲ್ಲಿ GDP Growth ಶೇ.10.5 ರಷ್ಟು ಇರುವ ನಿರೀಕ್ಷೆ ಇದೆ ಎಂದು RBI ಹೇಳಿದೆ. ಜಾಗತಿಕ ಬೆಳವಣಿಗೆ ನಿಧಾನ ಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಆದರೆ, ಇದುವರೆಗೆ ಹಲವು ರೀತಿಯ ಶಂಕೆಗಳು ಮತ್ತು ಅನಿಶ್ಚಿತತೆಗಳು ಮುಂದುವರೆಯಲಿವೆ ಎಂದು RBI ಹೇಳಿದೆ.
ಇದನ್ನೂ ಓದಿ- RTGS ಮತ್ತು NEFT ಮಾಡಲು ಬ್ಯಾಂಕ್ ಅವಶ್ಯಕತೆ ಇಲ್ಲ , ಇನ್ನು ಮೊಬೈಲ್ ವಾಲೆಟ್ ಆಗಲಿದೆ ATM
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.