RBI Monetary Policy: RBIನ ಈ ನಿರ್ಧಾರದಿಂದ FD ಹೂಡಿಕೆದಾರರಿಗೆ ಲಾಭ

RBI Monetary Policy - ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) ಬಡ್ಡಿದರದಲ್ಲಿ ಯಥಾಸ್ಥಿತಿ ಮುಂದುವರೆಸಿದೆ. ಕೇಂದ್ರೀಯ ಬ್ಯಾಂಕ್ ನ ಈ ನಿರ್ಧಾರದಿಂದ ಸ್ಥಿರ ಖಾತೆಯಲ್ಲಿ (Fixed Deposit)ಹೂಡಿಕೆ ಮಾಡುವವರಿಗೆ ಲಾಭ ಸಿಗಲಿದೆ.  

Written by - Nitin Tabib | Last Updated : Apr 7, 2021, 01:34 PM IST
  • RBI Monetary Policy 2021 ಪ್ರಕಟ.
  • ರೆಪೋ-ರಿವರ್ಸ್ ರೆಪೋ ದರಗಳಲ್ಲಿ ಸ್ಥಿರತೆ ಕಾಯ್ದುಕೊಂಡ RBI
  • ಸ್ಥಿರ ಖಾತೆ ಹೊಂದಿದವರಿಗೆ ಈ ನಿರ್ಧಾರದಿಂದ ಏನು ಲಾಭ ತಿಳಿಯೋಣ ಬನ್ನಿ.
RBI Monetary Policy: RBIನ ಈ ನಿರ್ಧಾರದಿಂದ FD ಹೂಡಿಕೆದಾರರಿಗೆ ಲಾಭ title=
RBI Monetary Policy 2021 (File Photo)

ನವದೆಹಲಿ: RBI Monetary Policy - ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಆರ್ಥಿಕ ನೀತಿ ಸಮಿತಿ (MPC)ಸಭೆಯಲ್ಲಿ ರೆಪೋ ರೇಟ್ ಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಅಂದರೆ, ಸತತ ಆರನೇ ಬಾರಿಗೆ ಕೇಂದ್ರೀಯ ಬ್ಯಾಂಕ್ ತನ್ನ ನೀತಿಗತ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಅರ್ಥಶಾಸ್ತ್ರಜ್ಯರು ಕೂಡ ಈ ನಿರೀಕ್ಷೆ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ RBI ನಿರೀಕ್ಷೆಯಂತೆಯೇ ನಿರ್ಣಯವನ್ನು ಕೈಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. RBIನ ಮುದ್ರಾ ನೀತಿ ಸಮಿತಿ ಹಣದುಬ್ಬರದ ಜಾಗದಲ್ಲಿ ಅರ್ಥವ್ಯವಸ್ಥೆಯಲ್ಲಿ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ ಹಣದುಬ್ಬರ ಹೆಚ್ಚಳಕ್ಕೆ ಸಪ್ಲೈ ಸೈಡ್ ಪ್ರಮುಖ ಕಾರಕ ಎಂಬ ಸಂಕೇತವೂ ಇದೀಗ ದೊರೆತಿದೆ.

ಮೂರು ದಿನಗಳ ಸಭೆಯ ಬಳಿಕ ಬುಧವಾರ ಮಾತನಾಡಿರುವ RBI ಗವರ್ನರ್ ಶಕ್ತಿಕಾಂತಾ ದಾಸ್, RBI ತನ್ನ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದು, ಇದು ಶೇ. 4 ರಷ್ಟೇ ಮುಂದುವರೆಯಲಿದೆ ಎಂದಿದ್ದಾರೆ.

FD ಹೂಡಿಕೆದಾರರಿಗೆ ಹೇಗೆ ಲಾಭ?
ಆರ್‌ಬಿಐನ ಈ ನಿರ್ಧಾರದಿಂದ ಇದೀಗ ರೆಪೊ ದರ ಮತ್ತು ರಿವರ್ಸ್ ರೆಪೊ ದರಗಳು ಕ್ರಮವಾಗಿ ಶೇ. 4 ಮತ್ತು ಶೇ.3.35 ರ ದರದಲ್ಲಿ ಮುಂದುವರೆಯಲಿವೆ. ನೀತಿಗತ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ  ಸ್ಥಿರ ಠೇವಣಿಗಳ ಮೂಲಕ ಉಳಿತಾಯ ಮಾಡುವವರಿಗೆ ಇದೊಂದು ಒಳ್ಳೆಯ ಸುದ್ದಿ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಎಫ್‌ಡಿ ಮೇಲಿನ ಬಡ್ಡಿದರವನ್ನು ಕಡಿತ ಮಾಡಲು ಇನ್ಮುಂದೆ ಬ್ಯಾಂಕುಗಳು ಯೋಚಿಸುವುದಿಲ್ಲ. ಪ್ರಸ್ತುತ, ಬ್ಯಾಂಕುಗಳು ಎಫ್‌ಡಿ ಮೇಲೆ ಶೇ 2.9 ರಿಂದ ಶೇ 5.4 ರವರೆಗೆ ಬಡ್ಡಿ ನೀಡುತ್ತಿವೆ.

ಇದನ್ನೂ ಓದಿ- RTGS ಮತ್ತು NEFT ಮಾಡಲು ಬ್ಯಾಂಕ್ ಅವಶ್ಯಕತೆ ಇಲ್ಲ , ಇನ್ನು ಮೊಬೈಲ್ ವಾಲೆಟ್ ಆಗಲಿದೆ ATM

ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವವರ ಮೇಲೆ ಏನು ಪ್ರಭಾವ?
ನೀತಿಗತ ಬಡ್ಡಿ ದರಗಳಲ್ಲಿ ಒಂದು ವೇಳೆ RBI ಕಡಿತಗೊಳಿಸಿದರೆ, ಬ್ಯಾಂಕ್ ಗಳೂ ಕೂಡ ತಮ್ಮ FD ಬಡ್ಡಿ ದರದಲ್ಲಿ ಇಳಿಕೆ ಮಾಡುತ್ತವೆ. ಆದರೆ ಡಿಪಾಸಿಟ್ ರೇಟ್ ನಲ್ಲಿ ಈ ಕಡಿತ ರೆಪೋ ರೇಟ್ ಅನುಪಾದಲ್ಲಿ ಇರುವುದಿಲ್ಲ. ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡುವವರ ದೃಷ್ಟಿಯಿಂದ ಹೇಳುವುದಾದರೆ ಬಡ್ಡಿ ದರ ಕಡಿತದ ಅರ್ಥ ಅಕೌಂಟ್ ನಲ್ಲಿರುವ ಹೊಸ ಡಿಪಾಸಿಟ್ ಮೇಲೆ ಕಡಿಮೆ ಬಡ್ಡಿ ಸಿಗುವುದು ಎಂದರ್ಥ. ಇದರಿಂದ ಹೂಡಿಕೆದಾರರಿಗೆ ತಮ್ಮ ಹೂಡಿಕೆಗೆ ಕಡಿಮೆ ರಿಟರ್ನ್ ಬರುತ್ತದೆ. ಬಡ್ಡಿ ದರದಲ್ಲಿ ಹೆಚ್ಚಳ ಮಾಡುವುದರ ಅರ್ಥ ಹೂಡಿಕೆದಾರರಿಗೆ ಹೆಚ್ಚಿನ ಆದಾಯ ಬರುತ್ತದೆ ಎಂದರ್ಥ. 

ಇದನ್ನೂ ಓದಿ- RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ

FD ಹಾಗೂ ಡೆಟ್ ಮ್ಯೂಚವಲ್ ಫಂಡ್ ಹೊರತುಪಡಿಸಿ ಹೂಡಿಕೆದಾರರಿಗೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಆಯ್ಕೆ ಇದೆ. ಕಳೆದ ತ್ರೈಮಾಸಿಕ ಸಮೀಕ್ಷೆಯ ಸಂದರ್ಭದಲ್ಲಿ ಸರ್ಕಾರ ಇವುಗಳ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. FD ಆಯ್ಕೆಯನ್ನೇ ಒಂದು ವೇಳೆ ನೀವು ಆಯ್ದುಕೊಂಡರೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಹಾಗೂ ಸಿನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಗಳಲ್ಲಿ ಪ್ರಸ್ತುತ ಶೇ.7 ಬಡ್ಡಿದರ ನೀಡಲಾಗುತ್ತಿದೆ.

ಇದನ್ನೂ ಓದಿ- ನಿಮ್ಮ UPI ಪಾವತಿ ಫೇಲ್ ಆಗಿದೆಯಾ? ಅದಕ್ಕೆ  ಬ್ಯಾಂಕ್ ನೀಡಲಿದೆ ಪ್ರತಿದಿನ ₹ 100 ಪರಿಹಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News