RBIನಿಂದ 500 ರೂಪಾಯಿ ನೋಟುಗಳ ಬಗ್ಗೆ ಹೊಸ ಗೈಡ್ ಲೈನ್: ಇಲ್ಲಿದೆ ಮಹತ್ವದ ಮಾಹಿತಿ
RBI New Guideline: ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಇದ್ದ ಅತಿ ಹೆಚ್ಚು ಮುಖಬೆಲೆಯ ನೋಟು ಎಂದರೆ 500 ರೂಪಾಯಿ ಮೌಲ್ಯದ ಹೊಸ ನೋಟುಗಳು. ಇತ್ತೀಚಿಗೆ ಈ ನೋಟುಗಳನ್ನೇ ಹೋಲುವ ನಕಲಿ ನೋಟುಗಳು ಬರುತ್ತಿರುವುದರಿಂದ ಆರ್‌ಬಿಐ 500 ನೋಟುಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ.
RBI New Guideline: 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮತ್ತು 2,000 ಮುಖಬೆಲೆಯ ಹೊಸ ನೋಟುಗಳ ಸ್ಥಗಿತದ ಬಳಿಕ ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಇದ್ದ ಅತಿ ಹೆಚ್ಚು ಮುಖಬೆಲೆಯ ನೋಟು ಎಂದರೆ 500 ರೂಪಾಯಿ ಮೌಲ್ಯದ ಹೊಸ ನೋಟುಗಳು. ಇತ್ತೀಚಿಗೆ ಈ ನೋಟುಗಳನ್ನೇ ಹೋಲುವ ನಕಲಿ ನೋಟುಗಳು ಬರುತ್ತಿರುವುದರಿಂದ ಆರ್‌ಬಿಐ 500 ನೋಟುಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ.
2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಾಗು ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ಹಾಗು 1,000 ಮುಖಬೆಲೆಯ ಹಳೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ ಬಳಿಕ 10, 20, 50, 100, 500 ಮತ್ತು 2,000 ರೂಪಾಯಿಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು. ಕೆಲದಿನಗಳ ಬಳಿಕ 2,000 ಮುಖಬೆಲೆಯ ಹೊಸ ನೋಟುಗಳನ್ನೂ ಸ್ಥಗಿತಗೊಳಿಸಿತು.
ಇದನ್ನೂ ಓದಿ- ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ!
2016ರಲ್ಲಿ 500 ಹಾಗು 1,000 ಮುಖಬೆಲೆಯ ಹಳೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದು ಮತ್ತು ಅನಂತರ 2,000 ಮುಖಬೆಲೆಯ ನೋಟುಗಳನ್ನು ಸ್ಥಗಿತಗೊಳಿಸಿದ್ದೇ ನಕಲಿ ನೋಟುಗಳನ್ನು ತಡೆಯಬೇಕು. ಕಪ್ಪುಹಣದ ವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು. ಆದರೆ ಲಭ್ಯವಿದ್ದ ಹೊಸ 500 ರೂಪಾಯಿ ನೋಟುಗಳನ್ನು ನಕಲಿ ಮಾಡಿ ಮತ್ತೆ ಅಂಥಹುದೇ ಅವ್ಯವಹಾರ ಮಾಡುತ್ತಿರುವುದು ಪತ್ತೆಯಾಗಿರುವುದರಿಂದ ಈಗ ಹೊಸ 500 ರೂಪಾಯಿ ನೋಟುಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಇತ್ತೀಚಿಗೆ ಎಟಿಎಂಗಳಲ್ಲಿ ನೀವು ಪಡೆಯುವ 500 ರೂಪಾಯಿ ನೋಟುಗಳಲ್ಲೂ ನಿಮಗೆ ನಕಲಿ ನೋಟುಗಳು ಸಿಗಬಹುದು. ನೀವು ತೆಗೆದುಕೊಳ್ಳುವ ಯಾವುದೇ ಹೊಸ 500 ನೋಟುಗಳಲ್ಲಿ ಆರ್‌ಬಿಐ ಗವರ್ನರ್ ಸಹಿ ಇರಬೇಕು. ಹಿಂಬದಿಯಲ್ಲಿ ಕೆಂಪುಕೋಟೆಯ ಚಿತ್ರ ಇರಬೇಕು. ನೋಟಿನ ಸೈಜ್ 63X150 ಹಾಗು ನೋಟಿನ ಬಣ್ಣ ಬೂದು ಬಣ್ಣ ಸರಿಯಾಗಿದೆಯಾ ಎಂಬುದನ್ನು ಖಾತರಿಪಡಿಸಿಕೊಳ್ಳಿ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!
ಹೊಸದಾಗಿ ಬಿಡುಗಡೆಯಾಗುತ್ತಿರುವ 500 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ‘500’ ಎಂಬ ಸಂಖ್ಯೆ ಅರೆಪಾರದರ್ಶಕವಾಗಿರಲಿದೆ. ಹೊಸ 500 ರೂಪಾಯಿ ನೋಟುಗಳಲ್ಲಿ ‘ದೇವನಗಾರಿ’ ಲಿಪಿಯನ್ನು ಬಳಸಲಾಗಿದೆ. ನೋಟುಗಳ ಉದ್ದಕ್ಕೂ ಮಹಾತ್ಮಾ ಗಾಂಧೀಜಿ ಅವರ ಚಿತ್ರವನ್ನು ಮುದ್ರಿಸಲಾಗಿರುತ್ತದೆ. ನೀವು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಡಚಿದರೆ ಹಿಂದಿಯಲ್ಲಿ ಬರೆದಿರುವ ಭಾರತ್ ಮತ್ತು ಆರ್‌ಬಿಐ ಅನ್ನು ಓದಬಹುದಾಗಿರುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.