RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಹೂಡಿಕೆ ಮಾಡಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಿರ ಹೂಡಿಕೆಯ ಬಡ್ಡಿದರಕ್ಕೆ ಸಂಬಂಧಿಸಿದಂತೆ ಇರುವ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಆರ್‌ಬಿಐನ  ಈ ಬದಲಾವಣೆಯು ಬ್ಯಾಂಕುಗಳಲ್ಲಿನ ಸ್ಥಿರ ಠೇವಣಿ / ಅವಧಿಯ ಠೇವಣಿಯ ಮ್ಯಾಚುರಿಟಿ ಹೊಂದಿರುವ ಅನ್ಕ್ಲೆಮ್ಡ್  ಮೊತ್ತದ ಬಡ್ಡಿ ನಿಯಮಗಳಿಗೆ ಸಂಬಂಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-  Kisan Bonus: ಆಗಸ್ಟ್ ನಲ್ಲಿ ಈ ರೈತರ ಖಾತೆ ಸೇರಲಿದೆ 2 ಲಕ್ಷ 25 ಸಾವಿರ ರೂಪಾಯಿ...! ತಿಳಿಯಿರಿ ಸಂಪೂರ್ಣ ಮಾಹಿತಿ


ಈ ಕುರಿತು ಆರ್.ಬಿ. ಐ ನೀಡಿರುವ ಮಾಹಿತಿ ಪ್ರಕಾರ, FD ಮ್ಯಾಚ್ಯೂರಿಟಿ ಬಳಿಕ ಕ್ಲೇಮ್ ಮಾಡಲಾಗದೆ ಮೊತ್ತದ ಮೇಲೆ ಸಿಗುವ ಬಡ್ಡಿಯನ್ನು ಸಮೀಕ್ಷೆ ನಡೆಸಲಾಗಿದೆ. ಸ್ಥಿರ ಹೂಡಿಕೆಯ ನಿಗದಿತ ಅವಧಿ ಮುಕ್ತಾಯದ ನಂತರ ಮೊತ್ತ ಕ್ಲೇಮ್ ಮಾಡದೆ ಹಾಗೆಯೇ ಬ್ಯಾಂಕ್ ಬಳಿ ಉಳಿದಿದ್ದರೆ, ಅದರ ಮೇಲೆ ಬಡ್ಡಿ ದರ ಉಳಿತಾಯ ಖಾತೆಯ ಪ್ರಕಾರ ಅಥವಾ ಮ್ಯಾಚ್ಯುರ್ FD ಮೇಲಿನ ಬಡ್ಡಿ ದರ ಯಾವುದು ಕನಿಷ್ಠ ಅದನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕಹಾಕಲಾಗುವುದು ಎಂದು RBI ಜಾರಿಗೊಳಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.


ಇದನ್ನೂ ಓದಿ-Missed Call ಮತ್ತು WhatsApp Message ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಸುಲಭ ವಿಧಾನ ತಿಳಿಯಿರಿ


ಪ್ರಸ್ತುತ ಇರುವ ನಿಯಮದ ಪ್ರಕಾರ ಒಂದೊಮ್ಮೆ  FD ಅವಧಿ ಪೂರ್ಣಗೊಂಡಬಳಿಕ ಮತ್ತು ಆ ಮೊತ್ತವನ್ನು ಕ್ಲೇಮ್ ಮಾಡದೆ ಹೋದರೆ, ಆ ಮೊತ್ತ ಬ್ಯಾಂಕ್ ಗಳ ಬಳಿ ಅನ್ ಕ್ಲೆಮ್ಡ್ ಪಟ್ಟಿಯಲ್ಲಿ ಹಾಗೆಯೇ ಉಳಿಯುತ್ತಿತ್ತು. ಈ ಅನ್ಕ್ಲೆಮ್ಡ್ ಮೊತ್ತಕ್ಕೆ ಬ್ಯಾಂಕುಗಳು ಉಳಿತಾಯ ಖಾತೆಗೆ ಕೊಡುವ ಬಡ್ಡಿಯನ್ನು ಪಾವತಿಸುತ್ತಿದ್ದವು. ಒಂದು ನಿಗದಿತ ಅವಧಿಗೆ, ನಿಗದಿತ ಬಡ್ಡಿದರದ ಮೇಲೆ ಬ್ಯಾಂಕ್ ಗಳಲ್ಲಿ ಮಾಡಲಾಗುವ ಹೂಡಿಕೆಯನ್ನು ಸ್ಥಿರ ಠೇವಣಿ / ಅವಧಿಯ ಠೇವಣಿ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ರಿಕರಿಂಗ್, ಕಮ್ಯುಲೇಟಿವ್, ಎನ್ಯೂಟಿ, ರೀಇನ್ವೆಸ್ಟ್ಮೆಂಟ್ ಡಿಪಾಸಿಟ್ ಹಾಗೂ ಕ್ಯಾಶ್ ಸರ್ಟಿಫಿಕೆಟ್ ಗಳಂತಹ ಡಿಪಾಸಿಟ್ ಗಳು ಶಾಮೀಲಾಗಿವೆ.


ಇದನ್ನೂ ಓದಿ-LIC New Jeevan Shanti Policy: ಎಲ್ ಐಸಿಯ ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪಿಂಚಣಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.