Reserve Bank Of India New Rule: ನೋಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮಾನ್ಯವಾಗಿ ಜನರು ಹಳೆ ಮುದುಡಿಯಾದ ಮತ್ತು ಹರಿದ ನೋಟುಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ, ಇದೀಗ ಆರ್‌ಬಿಐನ ಈ ಈ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ನಂತರ, ನೋಟುಗಳ ಫಿಟ್‌ನೆಸ್ ಅನ್ನು ಪರಿಶೀಲಿಸಲಾಗುವುದು ಎನ್ನಲಾಗಿದೆ. ನೋಟುಗಳನ್ನು ಎಣಿಸುವ ಯಂತ್ರಗಳ ಬದಲಾಗಿ, ನೋಟುಗಳ ಫಿಟ್‌ನೆಸ್ ಪರಿಶೀಲಿಸಲು ಯಂತ್ರಗಳನ್ನು ಬಳಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ಇರುವ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಆರ್‌ಬಿಐನ ಈ ಸೂಚನೆಯ ಪ್ರಕಾರ, ಇದೀಗ ಪ್ರತಿ ಮೂರು ತಿಂಗಳಿಗೊಮ್ಮೆ ನೋಟುಗಳ ಫಿಟ್‌ನೆಸ್ ಅನ್ನು ಪರಿಶೀಲಿಸಲಾಗುವುದು ಎನ್ನಲಾಗಿದೆ. ಹೀಗಿರುವಾಗ, ನಿಮ್ಮ ಜೇಬಿನಲ್ಲಿ ಇಟ್ಟಿರುವ ನೋಟು ಯೋಗ್ಯವಾಗಿದೆಯೇ ಅಥವಾ ಅನರ್ಹವಾಗಿದೆಯೇ ಎಂಬುದನ್ನು ಪರಿಶೀಲಿಸಲು ಆರ್‌ಬಿಐ 11 ಮಾನದಂಡಗಳನ್ನು ನಿಗದಿಪಡಿಸಿದೆ.


COMMERCIAL BREAK
SCROLL TO CONTINUE READING

ಆರ್ಬಿಐ ನೀಡಿರುವ ಈ ನಿರ್ದೇಶನಗಳ ಬಳಿಕ ಸ್ವಚ್ಛ ನೋಟುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ ಮತ್ತು ಇದರಿಂದ ಹರಿದ ನೋಟುಗಳ ರೀಸೈಕಲ್ ನಲ್ಲಿ ಎದುರಾಗುವ ತೊಂದರೆ ತಪ್ಪಲಿದೆ. ರೀಸೈಕಲ್ ದೃಷ್ಟಿಯಿಂದ ಸರಿಯಾಗಿಲ್ಲದ ನೋಟುಗಳನ್ನು ಅನ್ಫಿಟ್ ನೋಟುಗಳು ಎಂದು ಹೇಳಲಾಗುತ್ತದೆ. ಹಾಗಾದರೆ, ಅನ್ಫಿಟ್ ನೋಟುಗಳಿಗೆ ಸಂಬಂಧಿಸಿದಂತೆ ಆರ್ಬಿಐ ಹೊರಡಿಸಿರುವ ಆ 11 ಮಾನದಂಡಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


>> ಅತಿ ಕೊಳೆಯಾದ ಹಾಗೂ ಧೂಳಿನಿಂದ ಲಿಪ್ತವಾದ ನೋಟುಗಳನ್ನು ಅನ್ಫಿಟ್ ಎಂದು ಭಾವಿಸಲಾಗುವುದು.
>> ದೀರ್ಘಕಾಲದಿಂದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಮತ್ತು ಹಲವು ಬಾರಿ ಒಂದು ಜೇಬಿನಿಂದ ಮತ್ತೊಂದು ಜೇಬಿಗೆ ವರ್ಗಾವಣೆಯಾಗುವುದರಿಂದ ತೆಳುವಾಗುತ್ತವೆ. ಇಂತಹ ತೆಳುವಾಗಿರುವ ನೋಟುಗಳನ್ನು ಅನ್ಫಿಟ್ ಎಂದು ಭಾವಿಸಲಾಗುವುದು. ಕಡಕ್ ನೋಟುಗಳನ್ನು ಈ ಶ್ರೇಣಿಯಲ್ಲಿ ಶಾಮೀಲುಗೊಳಿಸಲಾಗುವುದಿಲ್ಲ. 
>> ಅಂಚು ಅಥವಾ ಮಧ್ಯಭಾಗದಲ್ಲಿ ಹರಿದ ನೋಟುಗಳನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
>> ನೋಟುಗಳಲ್ಲಿ ಇರುವ ಡಾಗ್ ಇಯರ್ಸ್ ಗಾತ್ರ 100 ಚದರ ಮಿಲಿಮೀಟರ್‌ಗಿಂತ ಹೆಚ್ಚಾಗಿದ್ದರೆ , ಅದನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
>> 8 ಚದರ ಮಿಲಿಮೀಟರ್‌ಗಳಿಗಿಂತ ದೊಡ್ಡ ರಂಧ್ರಗಳನ್ನು ಹೊಂದಿರುವ ನೋಟುಗಳನ್ನು ಅನರ್ಹ ನೋಟುಗಳು ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?

>> ನೋಟುಗಳಲ್ಲಿನ ಯಾವುದೇ ಗ್ರಾಫಿಕ್ ಬದಲಾವಣೆಯನ್ನು ಅನರ್ಹ ನೋಟುಗಳು ಎಂದು ಪರಿಗಣಿಸಲಾಗುತ್ತದೆ.
>> ನೋಟಿನ ಮೇಲೆ ಸಾಕಷ್ಟು ಕಲೆಗಳು, ಪೆನ್ ಇಂಕ್ ಇತ್ಯಾದಿಗಳಿದ್ದರೆ ಅದು ಅಯೋಗ್ಯ ನೋಟು.
- ನೋಟುಗಳ ಮೇಲೆ ಏನನ್ನಾದರೂ ಬರೆದಿದ್ದರೆ ಅಥವಾ ಯಾವುದೇ ರೀತಿಯ ಬಣ್ಣ ತಗುಲಿದ್ದರೆ, ಅಂತಹ ನೋಟುಗಳು ಅನರ್ಹವಾಗುತ್ತವೆ.
>> ನೋಟಿನ ಬಣ್ಣ ಮಸುಕಾಗಿದ್ದರೆ, ಅದು ಅಯೋಗ್ಯ ನೋಟು.
>> ಹರಿದ ನೋಟಿನ ಮೇಲೆ ಯಾವುದೇ ರೀತಿಯ ಟೇಪ್ ಅಥವಾ ಅಂಟು ಇದ್ದರೆ, ಆ ನೋಟುಗಳನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
>> ನೋಟುಗಳ ಬಣ್ಣ ಹೋಗಿದ್ದರೆ ಅಥವಾ ಹಗುರವಾಗಿದ್ದರೆ, ಅವುಗಳನ್ನು ಸಹ ಅನರ್ಹ ವರ್ಗಕ್ಕೆ ಸೇರಿಸಲಾಗುತ್ತದೆ.


ಇದನ್ನೂ ಓದಿ-Business Idea: ಕೇವಲ 25 ಸಾವಿರ ಹೂಡಿಕೆ ಮಾಡಿ 72 ಲಕ್ಷ ಸಂಪಾದಿಸುವ ಪರ್ಫೆಕ್ಟ್ ಪರಿಕಲ್ಪನೆ ಇದು!


ಅನರ್ಹ ನೋಟುಗಳ ಬೇರ್ಪಡಿಸುವ ಯಂತ್ರ
ಅನರ್ಹ ನೋಟುಗಳ ಗುರುತಿಸಲು ಆರ್ಬಿಐ ತನ್ನ ಯಂತ್ರಗಳನ್ನು ಅಪ್ಗ್ರೇಡ್ ಮಾಡುತ್ತಿದೆ. ಈ ಯಂತ್ರ ಅಂತಹ ನೋಟುಗಳನ್ನು ಗುರುತಿಸಿ ಅವುಗಳನ್ನು ಮಾರ್ಕೆಟ್ ನಿಂದ ಹೊರಹಾಕಲಿವೆ. ಈ ಯಂತ್ರಗಳ ಸರಿಯಾದ ಬಳಕೆ ಮಾಡಲು ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿದೆ. ಇದರ ಜೊತೆಗೆ ಅವುಗಳನ್ನು ಗಂಭೀರವಾಗಿ ಕಾಳಜಿ ವಹಿಸುವಂತೆ ಸೂಚಿಸಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ