ಸಾಲ ಪಡೆದವರಿಗೂ, ಪಡೆಯುವವರಿಗೂ RBI ಗುಡ್ ನ್ಯೂಸ್..? ಕಾರಣ ತಿಳಿಯಿರಿ.
ಸಾಲ ಪಡೆದವರಿಗೆ ಹಾಗೂ ಸಾಲ ಪಡೆಯುವವರಿಗೆ ಖುಷಿಯ ಸುದ್ದಿಯನ್ನು ಕೊಟ್ಟಿದೆ ಭಾರತೀಯ ರಿಸರ್ವ್ ಬ್ಯಾಂಕ್ (RBI). ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ನವದೆಹಲಿ : ಸಾಲ ಪಡೆದವರಿಗೆ ಹಾಗೂ ಸಾಲ ಪಡೆಯುವವರಿಗೆ ಖುಷಿಯ ಸುದ್ದಿಯನ್ನು ಕೊಟ್ಟಿದೆ ಭಾರತೀಯ ರಿಸರ್ವ್ ಬ್ಯಾಂಕ್ (RBI). ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ರೆಪೋ ದರ (repo rate) ಶೇ. 4ರಷ್ಟೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ರೆಪೋ ದರದ ಜೊತೆಗೆ ರಿವರ್ಸ್ ರೆಪೊ ದ ಕೂಡಾ ಶೇ. 3.35 ರಷ್ಟುಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ರೆಪೋ ದರಕ್ಕೂ ಸಾಲಕ್ಕೂ ಏನು ಲಿಂಕ್..?
ನಮಗೆಲ್ಲಾ ಸಾಲಕೊಡುವ ಬ್ಯಾಂಕುಗಳು ಕೂಡಾ ಆರ್ ಬಿಐನಿಂದ (RBI) ಸಾಲ ಪಡೆಯುತ್ತವೆ. ಆರ್ ಬಿಐನಿಂದ ಸಾಲ ಪಡೆದ ದುಡ್ಡಿನಿಂದ ಬ್ಯಾಂಕುಗಳು (Bank) ನಮಗೆ ಸಾಲ ನೀಡುತ್ತವೆ. ಆರ್ ಬಿಐ ತಾನು ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ಸ್ವಲ್ಪ ಬಡ್ಡಿ ಹಾಕುತ್ತದೆ. ಈ ಬಡ್ಡಿದರವೇ ರೆಪೊ ದರ. ಅಥವಾ ರಿಪರ್ಚೇಸ್ ದರ. ರಿಪೊ ದರ ಹೆಚ್ಚಾದರೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ಹಾಕುತ್ತವೆ. ರೆಪೊ ದರ ಕಡಿಮೆಯಾದರೆ ನಮ್ಮ ಸಾಲದ ಮೇಲಿನ ಬಡ್ಡಿ ಕಡಿಮೆಯಾಗುತ್ತದೆ. ರೆಪೊ ದರ ಯಥಾಸ್ಥಿತಿ ಇದ್ದರೆ ನಮ್ಮ ಸಾಲದ ಮೇಲಿನ ಬಡ್ಡಿಯೂ ಯಥಾರೀತಿ ಮುಂದುವರಿಯುತ್ತದೆ. ಇದು ಸಿಂಪಲ್ ರೆಪೊ ದರದ ಲೆಕ್ಕಾಚಾರ. ಕೊರೊನಾ ವೈರಸ್ (Coronavirus) ಸೋಂಕಿನಿಂದಾಗಿ ಆರ್ಥಿಕತೆ ಅಧಃಪತನ ತಪ್ಪಿಸಲು ರೆಪೋ ದರವನ್ನು ಮತ್ತಷ್ಟು ಇಳಿಸಬಹುದು ಎಂಬ ನಿರೀಕ್ಷೆ ವಿತ್ತವಲಯದಲ್ಲಿ ಇತ್ತು. ಆದರೆ, ಆ ನಿರೀಕ್ಷೆ ಸುಳ್ಳಾಗಿದೆ.
ಇದನ್ನೂ ಓದಿ : IT RETURN: ಇನ್ನು ಐಟಿ ರಿಟರ್ನ್ ಸಲ್ಲಿಸಿ ಮರುಪಾವತಿಗಾಗಿ ಬಹಳ ದಿನ ಕಾಯಬೇಕಿಲ್ಲ..!
ಅರ್ಥವ್ಯವಸ್ಥೆಯ ಪುನರುಜ್ಜೀವನ :
ಕರೋನಾ ಮಹಾಮಾರಿಯ (Coronavirus pandemic) ಹೊಡೆತದಿಂದ ಹಳಿ ತಪ್ಪಿದ್ದ ದೇಶದ ಅರ್ಥವ್ಯವಸ್ಥೆ ನಿಧಾನವಾಗಿ ಪುನರುಜ್ಜೀವನಗೊಳ್ಳುತ್ತಿದೆ ಎಂದು ಶಕ್ತಿಕಾಂತ್ ದಾಸ್ (Shaktikanta Das) ಹೇಳಿದ್ದಾರೆ. ಮುಂದಿನ ವರ್ಷಕ್ಕೆ ಅಗತ್ಯವಿರುವಂತೆ ವಿತ್ತೀಯ ನೀತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಹಣದುಬ್ಬರ ದರ ಶೇ. 5.2 ರಷ್ಟಕ್ಕೆ ಊಹಿಸಲಾಗಿದೆ. 2021-22 ರ ಹಣಕಾಸು ವರ್ಷದಲ್ಲಿ ಶೇ. 10.5 ರಷ್ಟು ಜಿಡಿಪಿ ಬೆಳವಣಿಗೆ (GDP)ಅಂದಾಜಿಸಲಾಗಿದೆ.2020 ಕ್ಕೆ ಹೋಲಿಸಿದರೆ 2021 ಐತಿಹಾಸಿಕವಾಗಿ ಹೊಸ ಆರ್ಥಿಕ ಯುಗಕ್ಕೆ ವೇದಿಕೆ ಕಲ್ಪಿಸುತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : SBIನ ಈ ನಿರ್ಧಾರದಿಂದ ಕೋಟ್ಯಾಂತರ ಗ್ರಾಹಕರಿಗೆ ಸಿಗಲಿದೆ ಪ್ರಯೋಜನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.