IT RETURN: ಇನ್ನು ಐಟಿ ರಿಟರ್ನ್ ಸಲ್ಲಿಸಿ ಮರುಪಾವತಿಗಾಗಿ ಬಹಳ ದಿನ ಕಾಯಬೇಕಿಲ್ಲ..!

ಐಟಿಆರ್ ಸಲ್ಲಿಸಿ ಮರುಪಾವತಿಗಾಗಿ ದೀರ್ಘಕಾಲದವರೆಗೆ ಕಾಯಬೇಕಾಗಿಲ್ಲ.  90 ದಿನಗಳಲ್ಲಿ ನಿಮ್ಮ ಮರುಪಾವತಿಯನ್ನು ಪಡೆಯಬಹುದು

Written by - Ranjitha R K | Last Updated : Feb 4, 2021, 03:28 PM IST
  • ಐಟಿಆರ್ ಸಲ್ಲಿಸಿ ಮರುಪಾವತಿಗಾಗಿ ದೀರ್ಘಕಾಲದವರೆಗೆ ಕಾಯಬೇಕಾಗಿಲ್ಲ
  • ಇನ್ನು 90 ದಿನಗಳಲ್ಲೇ ಪರುಪಾವತಿ ಸಿಗಲಿದೆ
  • ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ರಿಟರ್ನ್ ಬರುವುದು ವಿಳಂಬವಾಗುವುದಿಲ್ಲ
 IT RETURN: ಇನ್ನು ಐಟಿ ರಿಟರ್ನ್ ಸಲ್ಲಿಸಿ ಮರುಪಾವತಿಗಾಗಿ ಬಹಳ ದಿನ ಕಾಯಬೇಕಿಲ್ಲ..! title=
ಇನ್ನು 90 ದಿನಗಳಲ್ಲೇ ಪರುಪಾವತಿ ಸಿಗಲಿದೆ (file photo)

ದೆಹಲಿ: ನೀವು ಆದಾಯ ತೆರಿಗೆ (Income tax) ಪಾವತಿಸುತ್ತಿದ್ದರೆ ನಿಮಗೆ ಅಗತ್ಯವಿರುವ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಐಟಿ ರಿಟರ್ನ್ (It return) ಸಲ್ಲಿಸಿದ ನಂತರ ರಿಟರ್ನ್ ಪಡೆಯಲು ದೀರ್ಘ ಸಮಯದವರೆಗೆ ಕಾಯಬೇಕಾಗುತ್ತದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. 90 ದಿನಗಳಲ್ಲಿ ನಿಮ್ಮ ಮರುಪಾವತಿಯನ್ನು ಪಡೆಯಬಹುದು. ಅದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಟಿಆರ್ ನಲ್ಲಿ (ITR) ಯಾವುದೇ ತೊಂದರೆ ಇಲ್ಲದಿದ್ದರೆ ಶೀಘ್ರವೇ ರಿಟರ್ನ್ ಪಡೆಯಬಹುದು : 
ಇನ್ನು ಆದಾಯ ತೆರಿಗೆ (Income tax) ರಿಟರ್ನ್ಸ್ ಸಲ್ಲಿಸುವವರು ಮರುಪಾವತಿಗಾಗಿ 90 ಕ್ಕಿಂತ ಹೆಚ್ಚು ಕಾಯಬೇಕಾಗಿಲ್ಲ. ನೀವು ಆದಾಯ ತೆರಿಗೆಯನ್ನು ಸರಿಯಾಗಿ ಸಲ್ಲಿಸಿದ್ದರೆ ಮತ್ತು ನಿಮ್ಮ ಆದಾಯಕ್ಕೆ ಸಂಬಂಧಿಸಿದ ಎಲ್ಲಾ ಅಂಕಿಅಂಶಗಳು ಸರಿಯಾಗಿದ್ದರೆ, ರಿಟರ್ನ್ (Return) ಸಲ್ಲಿಸಿದ 90 ದಿನಗಳಲ್ಲಿ ಮರುಪಾವತಿ ನಿಮ್ಮ ಖಾತೆಗೆ ಬಂದು ಸೇರುತ್ತದೆ. ನೀವು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೆ ಮತ್ತು ಅವು ಸರಿಯಾಗಿದ್ದರೆ, ಮರುಪಾವತಿಯನ್ನು 90 ದಿನಗಳಲ್ಲಿ ಪಡೆಯಬಹುದು. ಆದಾಯ ತೆರಿಗೆ ಇಲಾಖೆ ಈ ವರ್ಷ ಐಟಿಆರ್ ವ್ಯವಸ್ಥೆಗೆ ತಾಂತ್ರಿಕ ಅಪ್‌ಗ್ರೇಡ್ ಮಾಡುವುದಾಗಿ ಹೇಳಿದೆ. ಹಾಗಾಗಿ ಪ್ರತಿ ವರ್ಷ 90 ದಿನಗಳಲ್ಲಿ ಮರುಪಾವತಿ ಪಡೆಯುವುದು ಸಾಧ್ಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಇದನ್ನೂ ಓದಿ : Aadhar Card: ಬರೀ ಒಂದು ಕರೆ ಮೂಲಕ ನಿಮ್ಮ 'ಆಧಾರ್' ಸಮಸ್ಯೆಗೆಗಳಿಗೆ ಪರಿಹಾರ..!

ಬದಲಾದ ನಿಯಮ : 
ಸರಿಯಾದ ಸಮಯದಲ್ಲಿ ಮರುಪಾವತಿಯ ಕೊರತೆಯಿಂದಾಗಿ, ಇಡೀ ವರ್ಷದ ತೆರಿಗೆ ವ್ಯವಸ್ಥೆಯು ಬುಡಮೇಲಾಗುತ್ತದೆ. ಆದ್ದರಿಂದ ಈಗ ಇಡೀ ಪ್ರಕ್ರಿಯೆಯನ್ನು 9 ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿದೆ ಎಂದು ಬಜೆಟ್ (Budget) ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, ಹೇಳಿದ್ದರು. ಇದರಿಂದ  ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ತ್ವರಿತವಾಗಿ ಪರಿಹಾರವಾಗುತ್ತದೆ ಮತ್ತು ತೆರಿಗೆ ಸಂಗ್ರಹ ಕೂಡಾ ಹೆಚ್ಚಲಿದೆ ಎನ್ನಲಾಗಿದೆ. 

ಮರುಪಾವತಿಯಲ್ಲಿ ವಿಳಂಬ ಯಾಕಾಗುತ್ತದೆ ? :
ಆದಾಯ ತೆರಿಗೆ ರಿಟರ್ನ್ (IT return) ಸಲ್ಲಿಸುವಾಗ ಸಂಪೂರ್ಣ ಮಾಹಿತಿಯನ್ನು ನೀಡದಿದ್ದರೆ, ಮರುಪಾವತಿ ಪಡೆಯುವುದು ಕೂಡಾ  ತಡವಾಗುತ್ತದೆ. ನೀವು ಬ್ಯಾಂಕಿನ ಐಎಫ್‌ಎಸ್‌ಸಿ (IFSC) ಕೋಡ್ ಅನ್ನು ತಪ್ಪಾಗಿ ನೀಡಿದ್ದರೂ ರಿಟರ್ನ್ ಬರುವುದು ವಿಳಂಬವಾಗುವುದರಲ್ಲಿ ಸಂದೇಹವಿಲ್ಲ. ಬ್ಯಾಂಕ್ (Bank) ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದರೂ ಮರುಪಾವತಿ ಪಡೆಯುವುದು ವಿಳಂಬವಾಗಬಹುದು. ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸದ ಕಾರಣ ಅನೇಕ ಬಾರಿ ತೆರಿಗೆ ಮರುಪಾವತಿ ವಿಳಂಬವಾಗುತ್ತದೆ.

ಇದನ್ನೂ ಓದಿ : SBIನ ಈ ನಿರ್ಧಾರದಿಂದ ಕೋಟ್ಯಾಂತರ ಗ್ರಾಹಕರಿಗೆ ಸಿಗಲಿದೆ ಪ್ರಯೋಜನ

ಮರುಪಾವತಿ ವಿಳಂಬವಾದರೆ ಬಡ್ಡಿಯೂ ಸಿಗಲಿದೆ :
ಒಂದು ವೇಳೆ ಆದಾಯ ತೆರಿಗೆದಾರರು , ಆದಾಯ ತೆರಿಗೆ ಇಲಾಖೆಗೆ ಸಂಪೂರ್ಣ ಮತ್ತು ಸರಿಯಾದ ಮಾಹಿತಿಯನ್ನು ನೀಡಿದ್ದರೆ, ಭಯಪಡುವ ಅಗತ್ಯವಿಲ್ಲ. ಮರುಪಾವತಿ ವಿಳಂಬವಾದರೆ ತೆರಿಗೆ ಇಲಾಖೆಯು ಶೇಕಡಾ 6 ದರದಲ್ಲಿ ಬಡ್ಡಿಯನ್ನು ನೀಡುತ್ತದೆ. ಆದ್ದರಿಂದ ರಿಟರ್ನ್ ಸಲ್ಲಿಸುವ ವೇಳೆ, ನಿಮ್ಮ ಕಡೆಯಿಂದ ಯಾವುದೇ ತಪ್ಪು ಆಗದಂತೆ ಎಚ್ಚರ ವಹಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News