Old Pension News : ಹಳೆ ಪಿಂಚಣಿ ಯೋಜನೆ ಕುರಿತು ದೇಶಾದ್ಯಂತ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ದೇಶದ ಹಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಇನ್ನು ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ದತೆ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಹಳೆ ಪಿಂಚಣಿ ಯೋಜನೆ ಕುರಿತು ಬಹಳ ಮುಖ್ಯವಾದ ಮಾಹಿತಿ ನೀಡಿದೆ. ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ರಾಜ್ಯಗಳು ಮುಂದಿನ ದಿನಗಳಲ್ಲಿ ಹಣಕಾಸು ನಿರ್ವಹಣೆಯ  ಅಪಾಯ ಎದುರಿಸಬೇಕಾಗುತ್ತದೆ ಎಂದು ಆರ್‌ಬಿಐ ಗವರ್ನರ್  ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಆತಂಕಕಾರಿಯಾಗಬಹುದು ಮುಂಬರುವ ಸಮಯ :  
ರಿಸರ್ವ್ ಬ್ಯಾಂಕ್ ರಾಜ್ಯಗಳ ಹಣಕಾಸು ಕುರಿತು ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಾಂಕ್ರಾಮಿಕ ರೋಗದ ನಂತರ ರಾಜ್ಯಗಳ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಸಮಯದಲ್ಲಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಒಪಿಎಸ್ ಜಾರಿ ಮಾಡುತ್ತಿರುವ ರಾಜ್ಯಗಳ ಬಗ್ಗೆ ಆರ್ ಬಿಐ  ಕಳವಳ ವ್ಯಕ್ತಪಡಿಸಿದೆ. 


ಇದನ್ನೂ ಓದಿ : Bank Strike: ದೇಶಾದ್ಯಂತ ಈ 2 ದಿನ ಎಲ್ಲಾ ಬ್ಯಾಂಕ್, ಎಟಿಎಂ ಸೇರಿದಂತೆ ಈ ಎಲ್ಲಾ ಸೇವೆಗಳು ಬಂದ್


ಅನೇಕ ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಪಟ್ಟಿಯಲ್ಲಿ ಹಿಮಾಚಲ ನಾಲ್ಕನೇ ರಾಜ್ಯವಾಗಿದೆ ಎಂದು ಆರ್‌ಬಿಐ ಹೇಳಿದೆ. ಇನ್ನೂ ಅನೇಕ ರಾಜ್ಯಗಳು ಅದನ್ನು ಪುನಃಸ್ಥಾಪಿಸಲು ಯೋಜಿಸುತ್ತಿವೆ. ಜನವರಿ ತಿಂಗಳಲ್ಲಿ ಹಿಮಾಚಲ ಪ್ರದೇಶದ ಸರ್ಕಾರಿ ನೌಕರರನ್ನು ಕೂಡಾ ಒಪಿಎಸ್ ಅಡಿಗೆ ತರಲು ನಿರ್ಧರಿಸಿದೆ. 


ಈ 4 ರಾಜ್ಯಗಳಲ್ಲಿ ಈಗಾಗಲೇ ಜಾರಿ : 
ಛತ್ತೀಸ್‌ಗಢ ಸರ್ಕಾರ, ರಾಜಸ್ಥಾನ ಸರ್ಕಾರ, ಪಂಜಾಬ್ ಸರ್ಕಾರಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತಂದಿವೆ. ಇದೀಗ ಹಿಮಾಚಲ ಪ್ರದೇಶ ಕೂಡಾ ಈ ಸಾಲಿಗೆ ಸೇರಿದೆ.  


ಇದನ್ನೂ ಓದಿ CPI Inflation: ಜನಸಾಮಾನ್ಯರಿಗೊಂದು ಸಂತಸದ ಸುದ್ದಿ


ಹಳೆಯ ಪಿಂಚಣಿ ಯೋಜನೆಯ ಅನುಕೂಲಗಳೇನು? :
ಹಳೆಯ ಪಿಂಚಣಿ ಯೋಜನೆಯ ದೊಡ್ಡ ಪ್ರಯೋಜನವೆಂದರೆ ಇದರಲ್ಲಿ ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ  ಪಿಂಚಣಿ ನಿರ್ಧಾರವಾಗುತ್ತದೆ. ಇದಲ್ಲದೇ ಹಣದುಬ್ಬರ ದರ ಹೆಚ್ಚಾದಂತೆ ಡಿಎ ಕೂಡ ಹೆಚ್ಚಾಗುತ್ತದೆ. ಸರ್ಕಾರ ಹೊಸ ವೇತನ ಆಯೋಗವನ್ನು ಜಾರಿಗೆ ತಂದರೂ ಪಿಂಚಣಿ ಹೆಚ್ಚಾಗುತ್ತದೆ. 



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.