CPI Inflation: ಜನಸಾಮಾನ್ಯರಿಗೊಂದು ಸಂತಸದ ಸುದ್ದಿ

Inflation Rate in India: ಜನ ಸಾಮಾನ್ಯರ ಪಾಲಿಗೆ ಸಮಾಧಾನದ ಸುದ್ದಿಯೊಂದು ಪ್ರಕಟವಾಗಿದೆ. ಕಳೆದ ತಿಂಗಳು, ಹಣದುಬ್ಬರದ ವಿಷಯದಲ್ಲಿ ಸಾಮಾನ್ಯ ಜನರಿಗೆ ಸ್ವಲ್ಪ ಪರಿಹಾರ ದೊರೆತಿದೆ. ಚಿಲ್ಲರೆ ಹಣದುಬ್ಬರ (ಸಿಪಿಐ ಹಣದುಬ್ಬರ) ಡಿಸೆಂಬರ್ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದೆ.  

Written by - Nitin Tabib | Last Updated : Jan 12, 2023, 09:16 PM IST
  • ಚಿಲ್ಲರೆ ಹಣದುಬ್ಬರವು ಡಿಸೆಂಬರ್ 2022 ರಲ್ಲಿ ಒಂದು ವರ್ಷದ ಕನಿಷ್ಠ ಅಂದರೆ ಶೇ. 5.72 ಕ್ಕೆ ಇಳಿದಿದೆ.
  • ಅಧಿಕೃತ ಅಂಕಿಅಂಶಗಳ ಪ್ರಕಾರ, ಆಹಾರ ಮತ್ತು ಪಾನೀಯಗಳ
  • ಬೆಲೆಯಲ್ಲಿನ ಇಳಿಕೆಯಿಂದಾಗಿ ಇದು ಪ್ರಮುಖವಾಗಿ ಇಳಿಕೆಯನ್ನು ಕಂಡಿದೆ
CPI Inflation: ಜನಸಾಮಾನ್ಯರಿಗೊಂದು ಸಂತಸದ ಸುದ್ದಿ title=
Consumer Price Index December 2022

CPI Inflation Rate in India: ಜನ ಸಾಮಾನ್ಯರಿಗೆ ಸಮಾಧಾನಕರ ಸುದ್ದಿಯೊಂದು ಪ್ರಕಟವಾಗಿದೆ. ಕಳೆದ ತಿಂಗಳು, ಹಣದುಬ್ಬರದ ವಿಷಯದಲಿ ಸಾಮಾನ್ಯ ಜನರಿಗೆ ಸ್ವಲ್ಪ ಪರಿಹಾರ ದೊರೆತಿದೆ. ಚಿಲ್ಲರೆ ಹಣದುಬ್ಬರ (ಸಿಪಿಐ ಹಣದುಬ್ಬರ) ಡಿಸೆಂಬರ್ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಗುರುವಾರ ಸರ್ಕಾರ ಈ ಕುರಿತು ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡಿದೆ. ನವೆಂಬರ್ ತಿಂಗಳಿನಲ್ಲಿ ಈ ಅಂಕಿ ಅಂಶವು ಶೇಕಡಾ 5.88 ರಷ್ಟಿತ್ತು .ಈ ಬಾರಿ ಈ ಅಂಕಿ ಅಂಶ ಶೇ.0.16ರಷ್ಟು ಕುಸಿತ ಕಂಡಿದೆ. ಆಹಾರ ಪದಾರ್ಥಗಳು ಎಷ್ಟು ಅಗ್ಗವಾಗಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ
ಚಿಲ್ಲರೆ ಹಣದುಬ್ಬರವು ಡಿಸೆಂಬರ್ 2022 ರಲ್ಲಿ ಒಂದು ವರ್ಷದ ಕನಿಷ್ಠ ಅಂದರೆ ಶೇ. 5.72 ಕ್ಕೆ ಇಳಿದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಆಹಾರ ಮತ್ತು ಪಾನೀಯಗಳ ಬೆಲೆಯಲ್ಲಿನ ಇಳಿಕೆಯಿಂದಾಗಿ ಇದು ಪ್ರಮುಖವಾಗಿ ಇಳಿಕೆಯನ್ನು ಕಂಡಿದೆ.

ಅಂಕಿಅಂಶಗಳನ್ನು ಬಿಡುಗಡೆ ಮಾಡಿದ NSO 
ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್ 2022 ರಲ್ಲಿ ಶೇ.5.88 ರಷ್ಟು ಮತ್ತು ಡಿಸೆಂಬರ್ 2021 ರಲ್ಲಿ ಶೇ. 5.66 ರಷ್ಟಿತ್ತು.  ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಆಹಾರ ಪದಾರ್ಥಗಳ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇಕಡಾ 4.19 ರಷ್ಟಿತ್ತು, ಇದು ಹಿಂದಿನ ತಿಂಗಳಲ್ಲಿ ಶೇಕಡಾ 4.67 ರಷ್ಟಿತ್ತು.

ಇದನ್ನೂ ಓದಿ-BHIM UPI ಹಾಗೂ Rupay Card ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

ನವೆಂಬರ್‌ನಿಂದ ಹಣದುಬ್ಬರವು ಶೇಕಡಾ 6 ಕ್ಕಿಂತ ಕಡಿಮೆಯಾಗಿದೆ
ಚಿಲ್ಲರೆ ಹಣದುಬ್ಬರವು ಜನವರಿ 2022 ರಿಂದ ನಿರಂತರವಾಗಿ ರಿಸರ್ವ್ ಬ್ಯಾಂಕಿನ ತೃಪ್ತಿದಾಯಕ ಮಟ್ಟವಾದ ಶೇ.6 ಕ್ಕಿಂತ ಹೆಚ್ಚಿಗೆ ಉಳಿದ ನಂತರ, ನವೆಂಬರ್‌ನಲ್ಲಿ ಶೇ..5.88 ಮತ್ತು ಡಿಸೆಂಬರ್‌ನಲ್ಲಿ ಶೇ.5.72 ಕ್ಕೆ ಇಳಿದಿದೆ.

ಇದನ್ನೂ ಓದಿ-Big News: ತಿಂಗಳಿಗೆ 87,500 ಗಳಿಸುತ್ತಿದ್ದರೂ ಕೂಡ ನೀವು ಶೂನ್ಯ ಆದಾಯ ತೆರಿಗೆ ಪಾವತಿಸಬಹುದು !

ಆಹಾರ ಪದಾರ್ಥಗಳು ಎಷ್ಟು ಅಗ್ಗವಾಗಲಿವೆ?
ನಾವು ನಗರಗಳಲ್ಲಿ ಆಹಾರ ಹಣದುಬ್ಬರದ ಬಗ್ಗೆ ಹೇಳುವುದಾದರೆ, ಈ ದರವು ಶೇಕಡಾ 2.80 ರಷ್ಟಿದೆ. ಇದೇ ವೇಳೆ , ನವೆಂಬರ್ನಲ್ಲಿ ಈ ಅಂಕಿ ಅಂಶವು ಶೇ. 3.69 ರಷ್ಟಿತ್ತು. ಹಸಿರು ಮತ್ತು ತರಕಾರಿಗಳ ಹಣದುಬ್ಬರ ದರ ಶೇ.15.08ಕ್ಕೆ ಇಳಿದಿದೆ. ಇದಲ್ಲದೆ, ನಾವು ಹಣ್ಣುಗಳ ಬಗ್ಗೆ ಹೇಳುವುದಾದರೆ, ಅದರ ಹಣದುಬ್ಬರ ದರವು ಶೇ 2 ರಷ್ಟಿದೆ. ಹಾಲು ಮತ್ತು ಡೈರಿ ಉತ್ಪನ್ನಗಳ ಹಣದುಬ್ಬರ ದರವು ಶೇ.8.51 ರಷ್ಟಿದೆ, ಮೊಟ್ಟೆಗಳ ಹಣದುಬ್ಬರ ದರ ಶೇ.6.91 ಮತ್ತು ಮಸಾಲೆಗಳ ಹಣದುಬ್ಬರ ದರವು ಶೇ. 20.35 ರಷ್ಟಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News