ಇನ್ನು ರೇಷನ್ ಕಾರ್ಡ್ ದಾರರಿಗೆ ಸಿಗಲಿದೆ ಪ್ರತಿ ತಿಂಗಳು 35 ಕೆಜಿ ಉಚಿತ ಪಡಿತರ

Free Ration Scheme:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಿದೆ. ಈ ಕುರಿತು ಎಲ್ಲಾ  ರಾಜ್ಯಗಳಿಗೂ ಮಾರ್ಗಸೂಚಿಗಳನ್ನು ನೀಡಲಾಗಿದೆ. 

Written by - Ranjitha R K | Last Updated : Jan 12, 2023, 04:40 PM IST
  • ಪಡಿತರ ಚೀಟಿದಾರರಿಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ನಿರ್ಧಾರ
  • ರೇಷನ್ ಕಾರ್ಡ್ ದಾರರಿಗೆ ಉಚಿತ ಪಡಿತರ
  • 2023 ರಲ್ಲಿ ಪ್ರತಿ ತಿಂಗಳು ಉಚಿತ ಪಡಿತರ
ಇನ್ನು ರೇಷನ್ ಕಾರ್ಡ್ ದಾರರಿಗೆ ಸಿಗಲಿದೆ ಪ್ರತಿ ತಿಂಗಳು 35 ಕೆಜಿ ಉಚಿತ ಪಡಿತರ  title=

Free Ration Scheme : ಪಡಿತರ ಚೀಟಿದಾರರಿಗೆ ಸಂಬಂಧಿಸಿದಂತೆ  ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಿದೆ. ಈ ಕುರಿತು ಎಲ್ಲಾ  ರಾಜ್ಯಗಳಿಗೂ ಮಾರ್ಗಸೂಚಿಗಳನ್ನು ನೀಡಲಾಗಿದೆ. ಜನವರಿ 1 ರಿಂದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳ ಸೌಲಭ್ಯ ಸಿಗಲಿದೆ.  ಈ ಯೋಜನೆಯಡಿ ವರ್ಷವಿಡೀ ಉಚಿತ ಆಹಾರ ಧಾನ್ಯಗಳ ವಿತರಣೆಯಾಗಲಿದೆ. 

2023 ರಲ್ಲಿ ಪ್ರತಿ ತಿಂಗಳು ಉಚಿತ ಪಡಿತರ :
ಈ  ಬಗ್ಗೆ  ಮಾಹಿತಿ ನೀಡಿದ ಆಹಾರ ಸಚಿವಾಲಯ, ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಿದೆ. 2023ರಲ್ಲಿ ಪಡಿತರಕ್ಕಾಗಿ ಫಲಾನುಭವಿಗಳು  ಚಿಂತೆ ಪಡಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 2023 ರಲ್ಲಿ ವರ್ಷ ಪೂರ್ತಿ ಉಚಿತ ಪಡಿತರ ವಿತರಣೆಯ ಸೌಲಭ್ಯವನ್ನು ಒದಗಿಸುವ ಬಗ್ಗೆ ಸರ್ಕಾರ ನಿರ್ಧರಿಸಿದೆ. 

ಇದನ್ನೂ ಓದಿ : EPFO ಇ-ಪಾಸ್‌ಬುಕ್ ಸೇವೆ ಸ್ಥಗಿತ!

ಯಾರಿಗೆ ಸಿಗಲಿದೆ 35 ಕೆಜಿ ಉಚಿತ ಪಡಿತರ : 
ಸರ್ಕಾರದ ಮಾಹಿತಿಯ ಪ್ರಕಾರ, NFSA ಅಡಿಯಲ್ಲಿ ಆದ್ಯತೆಯ ಕುಟುಂಬಗಳಿಗೆ ಉಚಿತ ಪಡಿತರ ಸೌಲಭ್ಯವನ್ನು ನೀಡಲಾಗುವುದು. ಕುಟುಂಬದ ಪ್ರತಿ ಫಲಾನುಭವಿಗೆ 5 ಕೆಜಿ ಉಚಿತ ಪಡಿತರ ಸಿಗಲಿದೆ ಎಂದು ಸರ್ಕಾರ ಹೇಳಿದೆ.  ಅಂತ್ಯೋದಯ ಅನ್ನ ಯೋಜನೆಯಡಿ ಕೂಡಾ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆಜಿ ಪಡಿತರ ವಿತರಿಸಲಾಗುವುದು. 

ಈ ಹಿಂದೆಯೇ  ಸಬ್ಸಿಡಿ ನೀಡಲಾಗುತ್ತಿತ್ತು :  
ಡಿಸೆಂಬರ್ 2022 ರವರೆಗೆ ಎನ್‌ಎಫ್‌ಎಸ್‌ಎ ಫಲಾನುಭವಿಗಳಿಗೆ 1 ಮತ್ತು 2 ರೂಪಾಯಿಗೆ ಗೋಧಿ ಮತ್ತು ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇವರಿಗೆ  ಪಡಿತರ ಮೇಲಿನ ಸಬ್ಸಿಡಿಯ ಲಾಭವನ್ನು ನೀಡಲಾಗುತ್ತಿತ್ತು. ಆದರೆ ಈ ವರ್ಷ ಈ ಉಚಿತ ರೇಷನ್  ವಿತರಣೆಯಾಗಲಿದೆ. 

ಇದನ್ನೂ ಓದಿ : ಈ ದಿನಾಂಕದಿಂದ ಆರಂಭವಾಗಲಿದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023- ಏನೆಲ್ಲಾ ಕೊಡುಗೆಗಳು ಲಭ್ಯ ಇಲ್ಲಿದೆ ಮಾಹಿತಿ

ಯೋಜನೆಗಾಗಿ 2 ಸಾವಿರ ಕೋಟಿಗೂ ಹೆಚ್ಚು ವೆಚ್ಚ  : 
ಬಡವರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಸೌಲಭ್ಯವನ್ನು ಆರಂಭಿಸಿದೆ. ಸರ್ಕಾರವು ಈ ಯೋಜನೆಗಾಗಿ ಈ ವರ್ಷ 2 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News