ನವದೆಹಲಿ: One Nation One Ombudsman - ಡಿಜಿಟಲ್ ಪೇಮೆಂಟ್ ಸೇವೆಯನ್ನು ಬಲಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ 24x7 ಚಾಲ್ತಿಯಲ್ಲಿರುವ ಒಂದು ಹೆಲ್ಪ್ ಲೈನ್ ನಂಬರ್ ಜಾರಿಗೊಳಿಸುತ್ತಿದೆ. ಸೆಪ್ಟೆಂಬರ್ 2021 ರವರೆಗೆ ಸಂಪೂರ್ಣ ದೇಶದಲ್ಲಿ ಸೆಂಟ್ರಲೈಸಡ್ ಹೆಲ್ಪಲೈನ್ ನಂಬರ್ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ಗ್ರಾಹಕರಿಗೆ ವಿಭಿನ್ನ ಡಿಜಿಟಲ್ ಪೇಮೆಂಟ್ ಪ್ರಾಡಕ್ಟ್ ಗಳ ಕುರಿತು ಮಾಹಿತಿ ಸಿಗಲಿದ್ದು, ಅವರ ದೂರುಗಳನ್ನು ಸಹ ತಮ್ನೂಲಕ ಸ್ವೀಕರಿಸಲಾಗುವುದು ಎಂದು RBI ಹೇಳಿದೆ. ಒನ್ ನೇಶನ್ ಒನ್ ಅಂಬುಡ್ಸ್ ಮ್ಯಾನ್ ಅಡಿ ಈ ಹೆಲ್ಪ್ ಲೈನ್ ನಂಬರ್ ಮೇಲೆ ಡಿಜಿಟಲ್ ಪೇಮೆಂಟ್ ಸೇವೆ ಬಳಸುವ ಗ್ರಾಹಕರು ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಬಹುದು ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಹೀಗಾಗಿ ಡಿಜಿಟಲ್ ಪೇಮೆಂಟ್, ಬ್ಯಾಂಕಿಂಗ್ ಹಾಗೂ ಫೈನಾನ್ಸ್ ಕಂಪನಿಗಳಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಈ ನಂಬರ್ ಮೂಲಕ ದಾಖಲಿಸಬಹುದು. ಶುಕ್ರವಾರ ಜಾರಿಗೊಳಿಸಲಾದ ಮುದ್ರಾ ನೀತಿಯ ವೇಳೆ RBI ಈ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ನೀವೂ ಹಣ ಪಾವತಿಗೆ Paytm, Phonepe ಬಳಸುತ್ತೀರಾ? ಹಾಗಿದ್ದರೆ ಈ ಸುದ್ದಿ ತಪ್ಪದೆ ಓದಿ


One Nation, One Ombdusman
ಆರ್‌ಬಿಐ ಪ್ರಕಾರ, ದೂರುಗಳ ಪರಿಹಾರಕ್ಕಾಗಿ ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಡಿಜಿಟಲ್ ವಹಿವಾಟಿನಲ್ಲಿ ಮೂರು ಪ್ರತ್ಯೇಕ  ಓಂಬುಡ್ಸ್‌ಮನ್‌ಗಳನ್ನು ರಚಿಸುವ ಯೋಜನೆ ಇದೆ. ಬಳಿಕ ಈ ಮೂರು ನಂಬರ್ ಗಳನ್ನು ಒಂದುಗೂಡಿಸಿ , ಒನ್ ನೇಷನ್, ಒನ್ ಒಂಬುಡ್ಸ್ಮನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.ಗ್ರಾಹಕರಿಗೆ ಒಂದೇ ವ್ಯವಸ್ಥೆಯನ್ನು ನಿರ್ಮಿಸಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಅಡಿಯಲ್ಲಿ ಆರ್‌ಬಿಐ ಜೂನ್ 2021 ರವರೆಗೆ ಸಮಗ್ರ ಯೋಜನೆಯನ್ನು ತರಬಹುದು. ಇದರೊಂದಿಗೆ, ಗ್ರಾಹಕರಿಗೆ ಮೂರು ವಿಭಿನ್ನ ನಂಬರ್ ಗಳ ಬದಲಾಗಿ ಒಂದೇ ಸಿಂಗಲ್ ಸಿಸ್ಟಂ (Digital Payment Helpline Number) ಸಿಗಲಿದೆ.


ಇದನ್ನು ಓದಿ- UPI ಪೇಮೆಂಟ್ ವೇಳೆ ವಹಿವಾಟು ವಿಫಲವಾದರೂ ಹಣ ಕಡಿತಗೊಂಡರೆ ತಕ್ಷಣವೇ ಮಾಡಿ ಈ ಕೆಲಸ


ಡಿಜಿಟಲ್ ಪೇಮೆಂಟ್ (Digital Payment) ವ್ಯವಹಾರವನ್ನು ಬಲಪಡಿಸಲು ಇಟ್ಟ ಹೆಜ್ಜೆ
ಆರ್‌ಬಿಐ ಪ್ರಕಾರ, ನಿರ್ವಾಹಕರು ಮತ್ತು ವಿವಿಧ ಅಧಿಕೃತ ಪಾವತಿ ವ್ಯವಸ್ಥೆಗಳಲ್ಲಿ ಭಾಗವಹಿಸುವವರು ಒದಗಿಸುವ ಉತ್ಪನ್ನಗಳು ವಿವಿಧ ಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಆಗಾಗ್ಗೆ ಈ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಲಾಗುತ್ತದೆ. ದಕ್ಷತೆಯನ್ನು ಹೆಚ್ಚಿಸುವುದು ಮತ್ತು ವೆಚ್ಚವನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶ. ಆದರೆ, ಇಂತಹ ಹೊರಗುತ್ತಿಗೆ ಸೇವೆಗಳನ್ನು ಒದಗಿಸುವವರಿಗೆ ವ್ಯವಸ್ಥೆಯ ಅಪಾಯವೂ ಹೆಚ್ಚಾಗುತ್ತದೆ. ಇವು ಸೈಬರ್ ಸುರಕ್ಷತೆಯ ಅಪಾಯವನ್ನು ಹೆಚ್ಚಿಸುತ್ತವೆ. ಈ ಅಪಾಯದ ದೃಷ್ಟಿಯಿಂದ, ಆರ್‌ಬಿಐ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತದೆ. ಡಿಜಿಟಲ್ ಪಾವತಿ ಸೇವೆಗಳನ್ನು ಬಲಪಡಿಸಲು ಈಗಾಗಲೇ ಕೈಗೊಂಡಿರುವ ಕ್ರಮಗಳ ಭಾಗವಾಗಿ ಆರ್‌ಬಿಐನ ಈ ಹೆಜ್ಜೆ ಎಂದು ಭಾವಿಸಲಾಗುತ್ತಿದೆ.


ಇದನ್ನು ಓದಿ-QR Code Scan ಮೂಲಕ ಭಾರಿ ವಂಚನೆ, ಹಣ ಪಾವತಿಸುವಾಗ ಎಚ್ಚರ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.