Cylinder Price Today : ವರ್ಷದ ಮೊದಲ ದಿನವೇ ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಚುನಾವಣಾ ವರ್ಷ ಸಮೀಪಿಸುತ್ತಿದ್ದಂತೆ ಸಾಮಾನ್ಯ ಗ್ರಾಹಕರಿಗೆ ಪರಿಹಾರ ಸಿಗುತ್ತದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. 
ನಿರೀಕ್ಷಿಸಲಾಗಿತ್ತು. 


COMMERCIAL BREAK
SCROLL TO CONTINUE READING

19 ಕೆಜಿ ವಾಣಿಜ್ಯ ಎಲ್‌ಪಿಜಿ  ಸಿಲಿಂಡರ್ ಬೆಲೆಯನ್ನು ಭಾಗಶಃ ಕಡಿಮೆ ಮಾಡಲಾಗಿದೆ. ಹೊಸ ವರ್ಷದ ಮೊದಲ ದಿನ ಕಂಪನಿಗಳು ಪ್ರತಿ ಸಿಲಿಂಡರ್‌ ಮೇಲೆ 1.50 ರೂ. ಕಡಿತವನ್ನು ಘೋಷಿಸಿದೆ. ಹೊಸ ಬೆಲೆಗಳು ಇಂದಿನಿಂದ ಅಂದರೆ 2024 ರ ಹೊಸ ವರ್ಷದ ಮೊದಲ ದಿನದಿಂದಲೇ ಅನ್ವಯವಾಗುತ್ತವೆ. ಅಂದಹಾಗೆ, ಅಡುಗೆ ಅನಿಲದ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಡುಗೆ ಅನಿಲದ ಸಿಲಿಂಡರ್ ಹಳೆಯ ದರದಲ್ಲಿಯೇ ದೊರೆಯಲಿದೆ. 


ಇದನ್ನೂ ಓದಿ : ಮರೆತ್ಹೋಗಿ ಅಗ್ಗದ ಚಿನ್ನ... ! ಹೊಸ ವರ್ಷದಲ್ಲಿ ಚಿನ್ನದ ಬೆಲೆ ಹೊಸ ಎತ್ತರಕ್ಕೆ ತಲುಪಲಿದೆ, ಇಲ್ಲಿದೆ ಅದರ ಒಂದು ಝಲಕ್!


2019 ರಲ್ಲಿ ಮೊದಲ ದಿನವೇ ಉಡುಗೊರೆ ಸಿಕ್ಕಿತು : 
ಅದು ಚುನಾವಣಾ ವರ್ಷವೂ ಹೌದು. ಜನವರಿ 1, 2019 ರಂದು, 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿತ್ತು.  ಇಂಡಿಯನ್ ಆಯಿಲ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಎಲ್‌ಪಿಜಿ ದರವು ಡಿಸೆಂಬರ್ 1, 2018 ರಂದು ರೂ 809.5 ಆಗಿತ್ತು, ಇದು ಜನವರಿ 1, 2019 ರಂದು  689 ರೂಪಾಯಿಗೆ ಇಳಿದಿತ್ತು. ಅದೇ ರೀತಿ ಎಲ್ಲಾ ಮೆಟ್ರೋ ನಗರಗಳಲ್ಲಿ ಬೆಲೆ ಇಳಿಕೆಯಾಗಿತ್ತು. ಅಂದರೆ ಆ ವರ್ಷ ಪ್ರತಿ ಸಿಲಿಂಡರ್‌ ಬೆಲೆ 120 ರೂ.ಗಳಷ್ಟು ಅಗವಾಗಿತ್ತು. 


ವಿಮಾನ ಪ್ರಯಾಣ ಅಗ್ಗವಾಗಲಿದೆ!
ಒಎಂಸಿ ಅಂದರೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಕೂಡಾ ಇಂದು ಹೊಸ ವರ್ಷದ ಸಂದರ್ಭದಲ್ಲಿ ವಿಮಾನ ಇಂಧನದ ಬೆಲೆಯನ್ನು ಇಳಿಸಿವೆ. ಪ್ರತಿ ಕಿಲೋ ಲೀಟರ್‌ಗೆ ಸುಮಾರು 4162.50 ರೂ.ಗಳಷ್ಟು ಇಳಿಕೆಯಾಗಿದೆ. ಸತತ ಮೂರನೇ ಕಡಿತದೊಂದಿಗೆ ವಿಮಾನ ದರಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.


ಇದನ್ನೂ ಓದಿ : ಜನವರಿ 1 ರಿಂದ ವರ್ಷವಷ್ಟೇ ಅಲ್ಲ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಮಹತ್ವದ ಸಂಗತಿಗಳು ಕೂಡ ಬದಲಾಗಲಿವೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ