Jio 5G India Launch Date: ಭಾರತದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ 5G ಸೇವೆಗಳ ಆರಂಭಕ್ಕಾಗಿ ಗ್ರಾಹಕರು ಕುತೂಹಲದಿಂದ ಕಾಯುತ್ತಿದ್ದಾರೆ ಮತ್ತು ಅದರ ಪ್ರಾರಂಭದ ದಿನಾಂಕದ ಬಗ್ಗೆ ಅನೇಕ ಸುದ್ದಿಗಳು ಹೊರಬರುತ್ತಿವೆ. ಜಿಯೋ ಮತ್ತು ಏರ್‌ಟೆಲ್ ಎರಡು ಟೆಲಿಕಾಂ ಕಂಪನಿಗಳು ತಮ್ಮ ತಮ್ಮ 5G ಸೇವೆಗಳನ್ನು ಆಗಸ್ಟ್, 2022 ಅಥವಾ ಸೆಪ್ಟೆಂಬರ್, 2022 ರೊಳಗೆ ಬಿಡುಗಡೆ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ . ರಿಲಯನ್ಸ್ AGM 2022 ರ ಸಭೆಯಲ್ಲಿ 5ಜಿ ಸೇವೆಯ ಕುರಿತು ಮಾತನಾಡಿರುವ, ಮುಖೇಶ್ ಅಂಬಾನಿ ಭಾರತದಲ್ಲಿ Jio 5G ಲಾಂಚ್ ದಿನಾಂಕವನ್ನು ಘೋಷಿಸಿದ್ದಾರೆ ಮತ್ತು ಈ ಸೇವೆಯ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ,


COMMERCIAL BREAK
SCROLL TO CONTINUE READING

ಜಿಯೋ ವಾರ್ಷಿಕ ಸಾಮಾನ್ಯ ಸಭೆ
ಈ ವರ್ಷ ಆಗಸ್ಟ್ 29, 2022 ರಂದು Jio ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ಆಯೋಜಿಸಿದೆ. ಈ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗುತ್ತಿದೆ, ಇದರಲ್ಲಿ ಜಿಯೋದ 5G ಫೋನ್ ಆಗಿರುವ JioPhone 5G ಮತ್ತು 5G ಸೇವೆಗಳ ರೋಲ್‌ಔಟ್‌ನ ಬಿಡುಗಡೆಯಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಈ ಸಭೆ ಆರಂಭಗೊಂಡಿದ್ದು. ಕೆಳಗೆ ನೀಡಿರುವ ಲೈವ್ ಸ್ಟ್ರೀಮ್ ಲಿಂಕ್‌ನಿಂದ ನೀವು ಈ ಸಭೆಗೆ ಹಾಜರಾಗಬಹುದು.


ಜನಧನ್ ಖಾತೆದಾರರೇ ಮಹತ್ವದ ಮಾಹಿತಿ


ಜಿಯೋ 5ಜಿ ಸೇವೆಯ ದಿನಾಂಕದ ಕುರಿತು ಮಾಹಿತಿ ನೀಡಿದ ಮುಕೇಶ ಅಂಬಾನಿ
ಇದಕ್ಕೂ ಮೊದಲು ಸಂಕೇತ ನೀಡಿದ್ದ ಜಿಯೋ, ಈ ವರ್ಷದ ಆಗಸ್ಟ್ ತಿಂಗಳಾಂತ್ಯಕ್ಕೆ ತನ್ನ 5ಜೀ ಸೇವೆ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಿದೆ ಎಂದಿತ್ತು, ಇದನ್ನೇ ಆಧಾರವಾಗಿಟ್ಟು ಕೊಂಡು ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿ ಈ ಸೇವೆ ಆರಂಭಿಸಬಹುದು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.


ಇದನ್ನೂ ಓದಿ-SBI ನ 45 ಕೋಟಿ ಗ್ರಾಹಕರಿಗೊಂದು ಮಹತ್ವದ ಮಾಹಿತಿ, ತಪ್ಪದೆ ತಿಳಿದುಕೊಳ್ಳಿ

ಆದರೆ, AGM ಈ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿರುವ ಮುಕೇಶ್ ಅಂಬಾನಿ, ಈ ವರ್ಷದ ದೀಪಾವಳಿಯಂದು 5ಜಿ ಸೇವೆ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲ Jio 5G Fixed Broadband ಪ್ಲಾನ್ ನ ವೇಗ ಕೂಡ ಹೆಚ್ಚಿಸಲಾಗುವುದು ಮತ್ತು ಅಗ್ಗದ ದರದಲ್ಲಿ ಆದಷ್ಟು ಹೆಚ್ಚು ಮನೆಗಳಿಗೆ ನೆಟ್  ಕನೆಕ್ಟಿವಿಟಿ ಒದಗಿಸಲಾಗುವುದು. ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.