Jio unlimited data plan: ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕಂಪನಿ ರಿಲಯನ್ಸ್ ಜಿಯೋ ಇನ್ಫೊಕಾಮ್ ಲಿಮಿಟೆಡ್, ಜುಲೈ 3ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ (Unlimited Plan) ಪ್ರಕಟಿಸಿದೆ. ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ತನ್ನ 5G ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು, ಶೇ.85ರವೆರೆಗೆ ತಲುಪಿದೆ ಎಂದು ತಿಳಿಸಿದೆ. 


COMMERCIAL BREAK
SCROLL TO CONTINUE READING

ತಿಂಗಳ ಯೋಜನೆ ₹189ರಲ್ಲಿ ದಿನಕ್ಕೆ 2GBಯಿಂದ ವಾರ್ಷಿಕ ₹3,599ರಲ್ಲಿ ದಿನಕ್ಕೆ 2.5GB ಸಿಗಲಿದೆ. ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ 5G ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ. ಅನಿಯಮಿತ 5G ಡೇಟಾ ಸೇವೆಯು ದಿನಕ್ಕೆ 2GB ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ.


ಇದನ್ನೂ ಓದಿ: ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಈ 5 ಬ್ಯಾಂಕ್‌ಗಳ FDಯಲ್ಲಿ 9.60% ಸೂಪರ್-ಡ್ಯೂಪರ್ ಬಡ್ಡಿ!


Important: HSRP ನಂಬರ್‌ ಪ್ಲೇಟ್‌ ಬಗ್ಗೆ ಇಲ್ಲಿದೆ ನೋಡಿ ಬಿಗ್‌ ಅಪ್‌ಡೇಟ್!


ಎರಡು ಹೊಸ ಆ್ಯಪ್: ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ (Jio Safe) ಮತ್ತು ಜಿಯೋ ಟ್ರಾನ್ಸ್‌ಲೇಟ್ (Jio Translate) ಎಂಬ ಎರಡು ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ ₹199 ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸುತ್ತದೆ. ‌ಜಿಯೋ ಟ್ರಾನ್ಸ್‌ಲೇಟ್ ಆ್ಯಪ್‌ನಲ್ಲಿ ತಿಂಗಳಿಗೆ ₹99 ನೀಡಿದರೆ, ಕೃತಕ ಬಿದ್ದಿಮತ್ತೆಯಿಂದ ಚಾಲಿತ ಆ್ಯಪ್, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಟ್ರಾನ್ಸ್‌ಲೇಟ್ ಮಾಡಬಲ್ಲದು. ಜಿಯೋ ಬಳಕೆದಾರರಿಗೆ ಒಂದು ವರ್ಷದವೆರೆಗೆ ಈ ಎರಡೂ ಆ್ಯಪ್‌ಗಳು ಉಚಿತವಾಗಿರಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.