Royal Enfield Himalayan 450: ಬೈಕ್ ತಯಾರಕ ಕಂಪನಿಯಾಗಿರುವ ರಾಯಲ್ ಎನ್‌ಫೀಲ್ಡ್ ಮತ್ತೊಂದು ಬೈಕ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಕಂಪನಿಯು ತನ್ನ ಹೊಸ ಬೈಕ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ರ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ತಿಂಗಳು ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಬಿಡುಗಡೆ ಮಾಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದೀಗ ಕಂಪನಿಯು ತನ್ನ ಎರಡನೇ ಬೈಕ್ ಅನ್ನು ಬ್ಯಾಕ್ ಟು ಬ್ಯಾಕ್ ಬಿಡುಗಡೆ ಮಾಡಲು ಹೊರಟಿದೆ. ರಾಯಲ್ ಎನ್‌ಫೀಲ್ಡ್‌ನ ಹೊಸ ಸಾಹಸ ಬೈಕ್ ಹಿಮಾಲಯನ್ 450 ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಮಾರುಕಟ್ಟೆಗೆ ಇಳಿಯುವ ನಿರೀಕ್ಷೆ ಇದೆ. 


COMMERCIAL BREAK
SCROLL TO CONTINUE READING

ಟೀಸರ್ ವಿಡಿಯೋ ಬಿಡುಗಡೆ
ಪ್ರಸ್ತುತ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಸಿದ್ಧಾರ್ಥ್ ಲಾಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ರ ಅಧಿಕೃತ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಚಿಕ್ಕ ವೀಡಿಯೊ ಕ್ಲಿಪ್ ನಲ್ಲಿ  ಬೈಕಿನ ವಾಟರ್ ಕ್ರಾಸಿಂಗ್ ಜೊತೆಗೆ ಆಫ್ ರೋಡ್ ತೆರೆನ್ ಟೆಸ್ಟ್ ನಡೆಯುತ್ತಿರುವುದು ಕಂಡುಬಂದಿದೆ. ಇದಲ್ಲದೆ, ಹಿಮಾಲಯನ್ 450 ರ ಎಲ್ಲಾ-LED ಹೆಡ್‌ಲ್ಯಾಂಪ್‌ಗಳು ಮತ್ತು LED ಇಂಡಿಕೇಟರ್ ಗಳನ್ನೂ ಕೂಡ ನೀವು ವೀಡಿಯೊದಲ್ಲಿ ನೋಡಬಹುದು, ಪ್ರಸ್ತುತ ಯಾವುದೇ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ಈ ವ್ಯವಸ್ಥೆ ಇಲ್ಲ.


ಇದನ್ನೂ ಓದಿ-ಸೆಪ್ಟೆಂಬರ್ ನಲ್ಲಿ 13 ದಿನ ಬ್ಯಾಂಕ್ ರಜೆ, ಏನೇ ಕೆಲಸಗಳಿದ್ದರೂ ಮೊದಲೇ ಪೂರೈಸಿಕೊಳ್ಳಿ


ಈ ವೈಶಿಷ್ಟ್ಯಗಳಿರುವ ಸಾಧ್ಯತೆ
Royal Enfield Himalayan 450ನಲ್ಲಿ ಸಂಪೂರ್ಣ ಹೊಚ್ಚ ಹೊಸ 450 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ದ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಇರಲಿದೆ. ಆದರೆ ಬೈಕ್ ನ ಪವರ್ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಸುಮಾರು 40 Bhp ಶಕ್ತಿ ಮತ್ತು 45 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋದನೆಯಾಗಿರುವುದರ ಜೊತೆಗೆ ಬೈಕ್ ನಲಿ ದೊಡ್ಡ ಇಂಧನ ಟ್ಯಾಂಕ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರುವ ಸಾಧ್ಯತೆ ಇದೆ.



ಬೈಕ್ ತಯಾರಕ ಕಂಪನಿಯಾಗಿರುವ ರಾಯಲ್ ಎನ್‌ಫೀಲ್ಡ್ ಮತ್ತೊಂದು ಬೈಕ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಕಂಪನಿಯು ತನ್ನ ಹೊಸ ಬೈಕ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ರ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ತಿಂಗಳು ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಬಿಡುಗಡೆ ಮಾಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್: ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್ ಅನ್ನು ವಾಟ್ಸಾಪ್‌ನಲ್ಲಿಯೇ ಪಡೆಯಿರಿ


ಹಾರ್ಡ್‌ವೇರ್
ಹಾರ್ಡ್‌ವೇರ್ ಕುರಿತು ಹೇಳುವುದಾದರೆ, ಹಿಮಾಲಯನ್ 450 ಬೈಕ್ ನಲ್ಲಿ ತಲೆಕೆಳಗಾದ ಮುಂಭಾಗದ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಆಫ್‌ಸೆಟ್ ಮೊನೊ-ಶಾಕ್ ಅಬ್ಸಾರ್ಬರ್ ಗಳು ಇರುವ ನಿರೀಕ್ಷೆ ಇದೆ. ಇದು 21-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಟೈರ್‌ಗಳೊಂದಿಗೆ ಸ್ಪೋಕ್ ವೀಲ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಬ್ರೇಕಿಂಗ್ ಡ್ಯೂಟಿಗಳಿಗಾಗಿ , ಬೈಕ್ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಪಡೆಯುತ್ತದೆ. ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450, ಕೆಟಿಎಂ 390 ಅಡ್ವೆಂಚರ್, ಯೆಜ್ಡಿ ಅಡ್ವೆಂಚರ್ ಬೈಕ್ ಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.