7th Pay Commission News: ತುಟ್ಟಿಭತ್ಯೆಯ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಂತಾಗಿದೆ. ಶೀಘ್ರದಲ್ಲಿಯೇ ಅದನ್ನು ಜಾರಿಗೊಳಿಸಲಾಗುತ್ತಿದೆ. ತುಟ್ಟಿಭತ್ಯೆಯ ಅಧಿಕೃತ ಘೋಷಣೆ ಸೆಪ್ಟೆಂಬರ್ 28 ರಂದು ಮಾಡಲಾಗುವುದು ಎನ್ನಲಾಗಿದ್ದು, ಅಕ್ಟೋಬರ್ 1 ರಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆಯಾಗಲಿದೆ. ಈ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಎರಡು ತಿಂಗಳ ಡಿಎ ಅರಿಯರ್ ಲಾಭ ಕೂಡ ಸಿಗಲಿದೆ.
ಡಿಎ ಎಷ್ಟು ಸಿಗಲಿದೆ ಎಂಬುದು ಹೇಗೆ ನಿರ್ಧರಿಸಲಾಗುತ್ತದೆ?
All India Consumer Price Index- Industrial Worker (ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ - ಕೈಗಾರಿಕೆಯ ಕೆಲಸಗಾರರು) ಅರ್ಧವಾರ್ಷಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸೂಚ್ಯಂಕ 0.2 ಪಾಯಿಂಟ್ ಏರಿಕೆ ಕಂಡು 129.2ಕ್ಕೆ ತಲುಪಿದೆ. ನೌಕರರ ತುಟ್ಟಿಭತ್ಯೆಯನ್ನು ನಿರ್ಧರಿಸಲು ಸರ್ಕಾರವು AICPI-IW ಸೂಚ್ಯಂಕದ ದತ್ತಾಂಶವನ್ನು ಬಳಸುತ್ತದೆ. ಸೂಚ್ಯಂಕ ಏರಿಕೆಯಿಂದಾಗಿ ಡಿಎಯಲ್ಲಿ ಶೇ.4ರಷ್ಟು ಏರಿಕೆಯಾಗುವುದು ನಿಚ್ಚಳವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
ಇದನ್ನೂ ಓದಿ-ಖಾಸಗಿ ಬ್ಯಾಂಕ್ ಗಳಲ್ಲಿಯೇ NRIಗಳು ಹೂಡಿಕೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ ಉತ್ತರ
38% ಡಿಎ ಹಣ ಯಾವಾಗ ಬರುತ್ತದೆ?
ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳದ ಬಳಿಕ ಕೇಂದ್ರ ನೌಕರರ ಒಟ್ಟು ತುಟ್ಟಿ ಭತ್ಯೆ ಶೇ.38ಕ್ಕೆ ತಲುಪಿದೆ. ಹೊಸ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022 ರ ವೇತನದಲ್ಲಿ ಪಾವತಿಸಲಾಗುತ್ತದೆ. ಇದರಲ್ಲಿ ಜುಲೈ, ಆಗಸ್ಟ್ ಎರಡು ತಿಂಗಳ ಬಾಕಿ ಹಣವೂ ಇರಲಿದೆ. ಹೊಸ ತುಟ್ಟಿಭತ್ಯೆಯನ್ನು ಜುಲೈ 1, 2022 ರಿಂದ ಅನ್ವಯಿಸುವಂತೆ ಪರಿಗಣಿಸಲಾಗುತ್ತದೆ. ಒಟ್ಟಾರೆ ಹೇಳುವುದಾದರೆ ಈ ಹಬ್ಬದ ಋತುವಿನಲ್ಲಿ ಸರ್ಕಾರವೇ ನೌಕರರ ಜೇಬಿಗೆ ಹಣವನ್ನು ಹಾಕಲಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ-ಪಡಿತರ ಚೀಟಿದಾರರಿಗೆ ಶಾಕ್ ..! ಮುಂದಿನ ತಿಂಗಳಿಂದ ಉಚಿತ ಪಡಿತರ ಸೌಲಭ್ಯ ಸ್ಥಗಿತ .!
ವೇತನದಲ್ಲಾಗುವ ವ್ಯತ್ಯಾಸವೇನು?
7ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನ ರೂ 18,000 ಆಗಿದೆ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದಲ್ಲಿ ರೂ 56900 ಆಗಿದೆ. ಶೇ. 38 ರಷ್ಟು ತುಟ್ಟಿಭತ್ಯೆಯ ಪ್ರಕಾರ, ರೂ 18000 ರ ಮೂಲ ವೇತನದಲ್ಲಿ, ವಾರ್ಷಿಕ ಡಿಎ ಒಟ್ಟು ಹೆಚ್ಚಳವು ರೂ 6840 ರಷ್ಟು ಇರಲಿದೆ. ಅಂದರೆ, ತಿಂಗಳಿಗೆ 720 ರೂ.ಗಳಷ್ಟು ಹೆಚ್ಚಾಗುತ್ತದೆ. ರೂ 56,900 ರ ಗರಿಷ್ಠ ಮೂಲ ವೇತನ ಶ್ರೇಣಿಯಲ್ಲಿ, ವಾರ್ಷಿಕ ತುಟ್ಟಿ ಭತ್ಯೆಯ ಒಟ್ಟು ಹೆಚ್ಚಳವು ರೂ 27,312 ಆಗಿರುತ್ತದೆ. ಈ ವೇತನ ಶ್ರೇಣಿಯಲ್ಲಿರುವವರು 34% ಕ್ಕೆ ಹೋಲಿಸಿದರೆ ರೂ 2276 ಹೆಚ್ಚು ವೇತನವನ್ನು ಅವರು ಪಡೆಯುತ್ತಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.