Bank Holidays In September : ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವಿದ್ದರೂ ಆದ್ಯತೆಯ ಮೇರೆಗೆ ಆ ಕೆಲಸವನ್ನು ಪೂರೈಸಿಕೊಳ್ಳಿ. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬ್ಯಾಂಕ್ ಗೆ ತೆರಳುವುದಕ್ಕೂ ಬ್ಯಾಂಕ್ ರಜಾ ದಿನಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ವಿವಿಧ ರಾಜ್ಯಗಳ ಪ್ರಕಾರ ರಜಾದಿನ :
ಭಾರತೀಯ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಟ್ಟು 8 ರಜಾದಿನಗಳಿವೆ. ಇದಲ್ಲದೇ ಶನಿವಾರ ಮತ್ತು ಭಾನುವಾರ 6 ದಿನ ರಜೆ ಇರುತ್ತದೆ. ಇದರ ಪ್ರಕಾರ, ಇಡೀ ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದರೆ ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಲಿದೆ. ತಿಂಗಳ ಆರಂಭದಲ್ಲಿ, ಸೆಪ್ಟೆಂಬರ್ 1 ರಂದು ಗಣೇಶ ಚತುರ್ಥಿಯ ಎರಡನೇ ದಿನವಾದ ಕಾರಣ ಗೋವಾದ ಪಣಜಿಯಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
ಇದನ್ನೂ ಓದಿ : ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್: ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್ ಅನ್ನು ವಾಟ್ಸಾಪ್‌ನಲ್ಲಿಯೇ ಪಡೆಯಿರಿ
ಯಾವ ಕಾರಣಕ್ಕಾಗಿ ಬ್ಯಾಂಕ್ ರಜೆ :
ಸೆಪ್ಟೆಂಬರ್ 6 ರಂದು, ಕರ್ಮ ಪೂಜೆಯ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಬ್ಯಾಂಕ್ ರಜೆ ಇರುತ್ತದೆ. ಓಣಂ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7 ಮತ್ತು 8 ರಂದು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಸೆಪ್ಟೆಂಬರ್ 9 ರಂದು, ಇಂದ್ರಜಾತದಿಂದಾಗಿ ಸಿಕ್ಕಿಂನ ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ ಇರುತ್ತದೆ. ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ನಾರಾಯಣ ಗುರು ಜಯಂತಿ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂ ಮತ್ತು ಕೊಚ್ಚಿಯ ಬ್ಯಾಂಕುಗಳು ಸೆಪ್ಟೆಂಬರ್ 10 ರಂದು ಮುಚ್ಚಲ್ಪಡುತ್ತವೆ.
ಇನ್ನು ಶ್ರೀ ನಾರಾಯಣ ಗುರು ಸಮಾಧಿ ದಿನದ ಪ್ರಯುಕ್ತ, ಸೆಪ್ಟೆಂಬರ್ 21 ರಂದು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಬ್ಯಾಂಕ್ ರಜೆ ಇರುತ್ತದೆ. ಸೆಪ್ಟೆಂಬರ್ 26 ರಂದು, ನವರಾತ್ರಿ ಸ್ಥಾಪನೆಯ ಕಾರಣ, ಮಣಿಪುರದ ಜೈಪುರ ಮತ್ತು ಇಂಫಾಲ್ ನಲ್ಲಿ ಬ್ಯಾಂಕ್ ರಜೆ ಇರುತ್ತದೆ. ಇದಲ್ಲದೇ ಸೆಪ್ಟೆಂಬರ್ 24 ರಂದು ನಾಲ್ಕನೇ ಶನಿವಾರದಂದು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ DA ಹೆಚ್ಚಳಕ್ಕೆ ಬಿತ್ತು ಮುದ್ರೆ.! ಈ ದಿನ ಆಗಲಿದೆ ಅಧಿಕೃತ ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.