Royal Enflied Super Meteor 650: ಮೈ ನವಿರೇಳಿಸುವ Royal Enfield ಕಂಪನಿಯ ಹೊಸ ಬೈಕ್ ಝಲಕ್ ಇಲ್ಲಿದೆ
Super Meteor 650: ವರ್ಷ 2022 ರ ಮೊದಲ ತ್ರೈಮಾಸಿಕದಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಹೊಚ್ಚ ಹೊಸ ಮತ್ತು ಅತ್ಯಂತ ದುಬಾರಿ ಕ್ರೂಸರ್ ಮೋಟಾರ್‌ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದಕ್ಕೆ ಸೂಪರ್ ಮೀಟಿಯರ್ 650 ಹೆಸರಿಡಲಾಗಿದ್ದು, ಬೈಕ್ ನ ಮಾಹಿತಿ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ.
ನವದೆಹಲಿ: Royal Enfiled Meteor - ರಾಯಲ್ ಎನ್‌ಫೀಲ್ಡ್‌ನ ಹೊಸ ಸೂಪರ್ ಮೀಟಿಯರ್ 650 ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದು ಕಂಪನಿಯ ಅತ್ಯಂತ ದುಬಾರಿ ಕ್ರೂಸರ್ ಮೋಟಾರ್‌ಸೈಕಲ್ ಆಗಲಿದ್ದು, ಅದರ ಉತ್ಪಾದನೆಯ ನೋಟವನ್ನು ಕಂಪನಿಯು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಗಮನಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಯೂಟ್ಯೂಬ್‌ನಲ್ಲಿ 90 ಸೌತ್ ಎಂಬ ಹೆಸರಿನ ವೀಡಿಯೊವನ್ನು ಹಾಕಿದೆ, ಅದರಲ್ಲಿ ಈ ಹೊಸ ಮೋಟಾರ್‌ಸೈಕಲ್ ಅನ್ನು ನೋಡಲಾಗಿದೆ. ಕಂಪನಿಯು ಇದನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಅಥವಾ ಇದು ಯಾವುದೇ ಟೀಸರ್ ವೀಡಿಯೊ ಕೂಡ ಅಲ್ಲ, ಆದರೆ ಈ ಬೈಕ್‌ನ ವಿಡಿಯೋ ನೋಟ ಶೀಘ್ರದಲ್ಲೇ ಅದರ ಬಿಡುಗಡೆಯನ್ನು ಖಚಿತಪಡಿಸಿದೆ. ಈ ಶಕ್ತಿಶಾಲಿ ಮೋಟಾರ್‌ಸೈಕಲ್ 2022 ರ ಮೊದಲ ತ್ರೈಮಾಸಿಕದಲ್ಲಿ ಪೈಪೋಟಿಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ-ಭಾರತೀಯ ಮಾರುಕಟ್ಟೆಗೆ ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್!: ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
ಐಷಾರಾಮಿ ಕ್ರೂಸರ್ ಶೈಲಿ
ರಾಯಲ್ ಎನ್‌ಫೀಲ್ಡ್ (Royal Enfield) ಸೂಪರ್ ಮೀಟಿಯರ್ 650 (Meteor 650) ಅನ್ನು ಐಷಾರಾಮಿ ಕ್ರೂಸರ್ ಶೈಲಿಯೊಂದಿಗೆ ಬಲವಾದ ವಿನ್ಯಾಸದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎನ್ನಲಾಗಿದೆ. ಮೋಟಾರ್‌ಸೈಕಲ್ ದೊಡ್ಡದಾದ ವಿಂಡ್‌ಸ್ಕ್ರೀನ್, ಸಾಮಾನ್ಯಕ್ಕಿಂತ ಅಗಲವಾದ ಫುಟ್‌ಪ್ಯಾಗ್‌ಗಳು, ನೆರವಾದ ಹ್ಯಾಂಡಲ್‌ಬಾರ್ ಸ್ಥಾನ ಮತ್ತು ವಿಶಾಲವಾದ ಆರಾಮದಾಯಕ ಸೀಟ್‌ಗಳೊಂದಿಗೆ ಬರುತ್ತದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನ್ಯಾವಿಗೇಷನ್ ಸಿಸ್ಟಮ್ ಇದರಲ್ಲಿ ಸುಲಭವಾಗಿ ಲಭ್ಯವಿರಲಿದೆ. ಸ್ಪರ್ಧೆಯ ಪ್ರಕಾರ, ಕಂಪನಿಯು ಈ ಮೋಟಾರ್‌ಸೈಕಲ್‌ನ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಇರುವ ನಿರೀಕ್ಷೆ ಇದೆ. ಕಂಪನಿಯು 648 cc ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಹೊಸ ಮೋಟಾರ್‌ಸೈಕಲ್‌ನೊಂದಿಗೆ ನೀಡಬಹುದು ಮತ್ತು ಅದು 47 PS ಪವರ್ ಮತ್ತು 52 Nm ಪೀಕ್ ಟಾರ್ಕ್ ಉತ್ಪತ್ತಿ ಮಾಡಲಿದೆ. , ಆದರೆ ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ
ಸೂಪರ್ ಮೀಟಿಯರ್ 650 ಅಂದಾಜು ಬೆಲೆ 3.60 ಲಕ್ಷ ರೂ.ಗಳಾಗಿದ್ದು, ಈ ಬೆಲೆ ಕಂಪನಿಯ ಕಾಂಟಿನೆಂಟಲ್ ಜಿಟಿಗಿಂತ 30,000 ರೂ. ಅಧಿಕವಾಗಿದೆ. ರಾಯಲ್ ಎನ್‌ಫೀಲ್ಡ್ ದೀರ್ಘಕಾಲದವರೆಗೆ ಭಾರತದಲ್ಲಿ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ ಮತ್ತು ಕಂಪನಿಯು 2022 ರಲ್ಲಿ ಈ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಕಂಪನಿಯು ಮುಂದಿನ ವರ್ಷ ಭಾರತಕ್ಕೆ 4 ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಸ್ಕ್ರೀಮ್ 411 ಶಾಮೀಲಾಗಿವೆ. ಕಂಪನಿಯು ಕಳೆದ ಕೆಲವು ದಿನಗಳಲ್ಲಿ ಅನೇಕ ಹೊಸ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ ಮತ್ತು ರಾಯಲ್ ಎನ್‌ಫೀಲ್ಡ್ ತನ್ನ ಮುಂಬರುವ ಬೈಕ್‌ಗಳಿಗೆ ಈ ಹೆಸರುಗಳನ್ನು ಬಳಸಲಿದೆ.
ಇದನ್ನೂ ಓದಿ-Yezdi Bike: ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಶಕ್ತಿಶಾಲಿ ಬೈಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.