ಮುಂಬೈ: ಎರಡು ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಕಳುಹಿಸಲು ಬಳಸುವ ಆರ್‌ಟಿಜಿಎಸ್ (RTGS) ಸೇವೆ ಶನಿವಾರ ಮಧ್ಯರಾತ್ರಿಯಿಂದ  ಭಾನುವಾರ ಮಧ್ಯಾಹ್ನದವರೆಗೆ ಲಭ್ಯವಿರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ. ಡಿಸಾಸ್ಟರ್ ರಿಕವರಿ ಸಮಯವನ್ನು ಇನ್ನಷ್ಟು ಸುಧಾರಿಸಲು ತಾಂತ್ರಿಕವಾಗಿ ಅಪ್ ಡೇಟ್ ಮಾಡುವ ಅಗತ್ಯವಿರುವುದರಿಂದ  ಸೇವೆ ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಲಭ್ಯವಿರುವುದಿಲ್ಲ ಎಂದು ಆರ್ ಬಿಐ ತಿಳಿಸಿದೆ. ಆದರೆ,  2 ಲಕ್ಷ ರೂಪಾಯಿಗಳವರೆಗಿನ ವಹಿವಾಟಿಗೆ ಬಳಸುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (NEFT) ದಿನಂತೆ ಕಾರ್ಯನಿರ್ವಹಿಸಲಿದೆ. 


COMMERCIAL BREAK
SCROLL TO CONTINUE READING

ಡಿಸಾಸ್ಟರ್ ರಿಕವರಿ ಸಮಯವನ್ನು ಉನ್ನತೀಕರಣಗೊಳಿಸಲು ಕ್ರಮ :
2021 ರ ಏಪ್ರಿಲ್ 17 ರಂದು ವ್ಯವಹಾರ ಅವಧಿ ಮುಕ್ತಾಯದ ನಂತರ, ಆರ್‌ಟಿಜಿಎಸ್ (RTGS) ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಡಿಸಾಸ್ಟರ್ ರಿಕವರಿ ಸಮಯವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಸುಧಾರಿಸಲು ಆರ್‌ಟಿಜಿಎಸ್ ಅನ್ನು ತಾಂತ್ರಿಕವಾಗಿ ಅಪ್ ಡೇಟ್ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ. ಆದ್ದರಿಂದ ಆರ್‌ಟಿಜಿಎಸ್ ಸೇವೆ 2021 ಏಪ್ರಿಲ್ 18 ಅಂದರೆ ಶನಿವಾರ ರಾತ್ರಿ 00:00 ಯಿಂದ ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ  ಲಭ್ಯವಿರುವುದಿಲ್ಲ. 


ಇದನ್ನೂ ಓದಿ : Mutual Fund ಗಳಲ್ಲಿ ಮೊಟ್ಟಮೊದಲ ಬಾರಿಗೆ ಹೂಡಿಕೆ ಮಾಡಬೇಕೆ? ಉತ್ತಮ ರಿಟರ್ನ್ ಪಡೆಯಲು ಈ ಅಂಶಗಳನ್ನು ನೆನಪಿನಲ್ಲಿಡಿ


24x7 RTGS ಸೇವೆ ಲಭ್ಯ: 
ಬ್ಯಾಂಕುಗಳು (Bank) ತಮ್ಮ ಗ್ರಾಹಕರಿಗೆ ತಮ್ಮ ಪಾವತಿ ಕಾರ್ಯಗಳನ್ನು ಇದಕ್ಕೆ ಅನುಗುಣವಾಗಿ ಯೋಜಿಸುವಂತೆ ಸೂಚನೆ ನೀಡುವಂತೆ ಆರ್‌ಬಿಐ ತಿಳಿಸಿದೆ. ಕಳೆದ ವರ್ಷ ಡಿಸೆಂಬರ್ 14 ರಿಂದ 24 ಗಂಟೆಗಳ ಕಾಲ RTGS ಸೌಲಭ್ಯ ಲಭ್ಯವಿದೆ. ಇದರೊಂದಿಗೆ, 24 ಗಂಟೆಗಳ ಕಾಲ ಈ ಸೌಲಭ್ಯವನ್ನು ಒದಗಿಸುವ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ.


ಇದನ್ನೂ ಓದಿ: SBI Online FD Fraud : ಪತ್ತೆಯಾಗಿದೆ ಸೈಬರ್ ಕಳ್ಳರ ಹೊಸ ವಂಚನೆ, ಒಂದೇ ಒಂದು ತಪ್ಪಿನಿಂದ ಆಗಲಿದೆ ಎಫ್‌ಡಿ ಖಾತೆ ಖಾಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.