ಶೀಘ್ರದಲ್ಲೇ ಬದಲಾಗಲಿದೆ ಆನ್ಲೈನ್ ಪೇಮೆಂಟ್ ನಿಯಮಗಳು.! ತಿಳಿದುಕೊಳ್ಳದಿದ್ದಲ್ಲಿ ಆಗುವುದು ನಷ್ಟ
ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ, RBI ಅಕ್ಟೋಬರ್ 1 ರಿಂದ ಕಾರ್ಡ್-ಆನ್-ಫೈಲ್ ಟೋಕನೈಸೇಶನ್ ನಿಯಮಗಳನ್ನು ತರುತ್ತಿದೆ.
ಬೆಂಗಳೂರು : ಅಕ್ಟೋಬರ್ 1 ರಿಂದ, ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ನಿಯಮ ಬದಲಾವಣೆಯಾಗಲಿದೆ. ಆರ್‌ಬಿಐ ಕೂಡ ಈ ಕುರಿತು ಆದೇಶ ಹೊರಡಿಸಿದೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ, RBI ಅಕ್ಟೋಬರ್ 1 ರಿಂದ ಕಾರ್ಡ್-ಆನ್-ಫೈಲ್ ಟೋಕನೈಸೇಶನ್ ನಿಯಮಗಳನ್ನು ತರುತ್ತಿದೆ. ಟೋಕನೈಸೇಶನ್ ವ್ಯವಸ್ಥೆಯಲ್ಲಿ ಬದಲಾವಣೆ ಬಂದ ನಂತರ, ಕಾರ್ಡುದಾರರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಭದ್ರತೆ ಸಿಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಆರ್‌ಬಿಐ ನೀಡಿರುವ ಮಾಹಿತಿ :
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಯನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಿಸಬಹುದು ಎಂಬ ಕಾರಣದಿಂದ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳಿಂದ ವಂಚನೆಯ ಅನೇಕ ವರದಿಗಳು ಮುನ್ನೆಲೆಗೆ ಬರುತ್ತಿವೆ. ಹೊಸ ನಿಯಮದ ಅನುಷ್ಠಾನದ ನಂತರ, ಗ್ರಾಹಕರು ಆನ್‌ಲೈನ್‌ನಲ್ಲಿ, ಪಾಯಿಂಟ್ ಆಫ್ ಸೇಲ್ ಅಥವಾ ಆ್ಯಪ್‌ನಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನೊಂದಿಗೆ ವಹಿವಾಟು ನಡೆಸಿದರೆ ಎಲ್ಲಾ ವಿವರಗಳನ್ನು ಎನ್‌ಕ್ರಿಪ್ಟ್ ಮಾಡಿದ ಕೋಡ್‌ನಲ್ಲಿ ಉಳಿಸಲಾಗುತ್ತದೆ.
ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಫ್ರೀ ರೇಷನ್ ಕುರಿತು ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ
ಟೋಕನೈಸೇಶನ್ ಸಿಸ್ಟಮ್ ಎಂದರೇನು?
ಟೋಕನ್ ವ್ಯವಸ್ಥೆಯು ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಡೇಟಾವನ್ನು 'ಟೋಕನ್'ಗಳಾಗಿ ಪರಿವರ್ತಿಸುತ್ತದೆ. ಅದರ ಮೂಲಕ ನಿಮ್ಮ ಕಾರ್ಡ್‌ನ ಮಾಹಿತಿಯನ್ನು ಡಿವೈಸ್ ನಲ್ಲಿಯೇ ಉಳಿಸಲಾಗುವುದು. ಟೋಕನ್ ಬ್ಯಾಂಕ್‌ಗೆ ವಿನಂತಿಸುವ ಮೂಲಕ ಗ್ರಾಹಕರು ಕಾರ್ಡ್ ಅನ್ನು ಟೋಕನ್ ಆಗಿ ಪರಿವರ್ತಿಸಬಹುದು ಎಂದು ಆರ್‌ಬಿಐ ಹೇಳಿದೆ. ಕಾರ್ಡ್ ಅನ್ನು ಟೋಕನೈಸ್ ಮಾಡಲು, ಕಾರ್ಡ್ ಹೋಲ್ಡರ್ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ವಂಚನೆಗೆ ಬೀಳುವುದು ಕಡಿವಾಣ :
ರಿಸರ್ವ್ ಬ್ಯಾಂಕ್ ಪ್ರಕಾರ, ಹೊಸ ನಿಯಮದ ಅನುಷ್ಠಾನದ ನಂತರ, ಹೊಸ ಪಾವತಿ ವ್ಯವಸ್ಥೆಯು ವಂಚನೆ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ. ಗ್ರಾಹಕರ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆಯಾಗುವುದರಿಂದ, ವಂಚನೆಯ ಅಪಾಯ ಹೆಚ್ಚಾಗಿರುತ್ತದೆ. ಪ್ರಸ್ತುತ, ಇ-ಕಾಮರ್ಸ್ ವೆಬ್‌ಸೈಟ್‌ಗಳು, ವ್ಯಾಪಾರಿ ಮಳಿಗೆಗಳು ಮತ್ತು ಅಪ್ಲಿಕೇಶನ್‌ಗಳು ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿ ಮಾಡಿದ ನಂತರ ಕಾರ್ಡ್ ವಿವರಗಳನ್ನು ಸಂಗ್ರಹಿಸುತ್ತವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ವಿವರಗಳು ಸೋರಿಕೆಯಾದರೆ ಗ್ರಾಹಕರಿಗೆ ನಷ್ಟವಾಗುವ ಸಾಧ್ಯತೆ ಇದೆ. ಆದರೆ ಹೊಸ ನಿಯಮ ಜಾರಿಯಾದ ನಂತರ ಇಂಥಹ ಘಟನೆಗಳಿಗೆ ಕಡಿವಾಣ ಬೀಳಲಿದೆ.
ಇದನ್ನೂ ಓದಿ : ಈ ಟ್ರಿಕ್ ಬಳಸಿದರೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಕಡಿತವಾಗುವ 24 ರೂಪಾಯಿ ಉಳಿಸಬಹುದು.!
ಆರ್‌ಬಿಐನ ಹೊಸ ನಿಯಮಗಳಲ್ಲಿ ಪ್ರಮುಖ ಅಂಶವೆಂದರೆ ಕಾರ್ಡ್ ಮೂಲಕ ನಡೆಯುವ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಕೋ ಬ್ರಾಂಡಿಂಗ್ ಪಾರ್ಟನರ್ ಗೆ ನೀಡಲಾಗುವುದಿಲ್ಲ. ಈ ನಿಬಂಧನೆಗಳು ಕೋ -ಬ್ರಾಂಡ್ ಕಾರ್ಡ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ವ್ಯವಹಾರ ಮಾದರಿಯ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ ಈ ಕಂಪನಿಗಳು ಈ ವಹಿವಾಟುಗಳ ಆಧಾರದ ಮೇಲೆ ವಿವಿಧ ಕೊಡುಗೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.