ಈ ಟ್ರಿಕ್ ಬಳಸಿದರೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಕಡಿತವಾಗುವ 24 ರೂಪಾಯಿ ಉಳಿಸಬಹುದು.!

Cash Withdrawal Charge:ದೇಶಾದ್ಯಂತ ಎಲ್ಲಾ  ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಎಟಿಎಂಗಳಿಂದ ನಗದು  ಡ್ರಾ ಮಾಡುವ ನಿಯಮಗಳನ್ನು ಬದಲಾಯಿಸಿವೆ.  ಹಣ ಡ್ರಾ ಮಾಡುವ ಹೆಸರಿನಲ್ಲಿ 15 ರಿಂದ 25 ರೂ.ವರೆಗೆ  ಶುಲ್ಕವನ್ನು ಬ್ಯಾಂಕ್ ಗಳು ವಿಧಿಸುತ್ತಿವೆ. 

Written by - Ranjitha R K | Last Updated : Sep 28, 2022, 10:49 AM IST
  • ಬದಲಾಗಿದೆ ಬ್ಯಾಂಕ್ ನಿಯಮಗಳು
  • ಎಟಿಎಂನಿಂದ ಹಣ ಡ್ರಾ ಮಾಡಿದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • 15 ರಿಂದ 25 ರೂ.ವರೆಗೆ ಶುಲ್ಕವನ್ನು ಬ್ಯಾಂಕ್ ಗಳು ವಿಧಿಸುತ್ತಿವೆ.
ಈ ಟ್ರಿಕ್ ಬಳಸಿದರೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಕಡಿತವಾಗುವ 24 ರೂಪಾಯಿ   ಉಳಿಸಬಹುದು.! title=
Cash Withdrawal Charge (file photo)

Cash Withdrawal Charge : ಆನ್‌ಲೈನ್  ಪೇಮೆಂಟ್ ಉಚಿತವಾಗಿದೆಯಾದರೂ ಎಟಿಎಂನಿಂದ ಹಣವನ್ನು ಪಡೆಯಬೇಕಾದರೆ,  ಮೊದಲಿಗಿಂತ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.  ಎಟಿಎಂನಿಂದ ಹಣ ವಿಡ್ರಾ  ಮಾಡಳು ನಿಗದಿಪಡಿಸಿರುವ ಮಿತಿ ದಾಟಿದ ಪ್ರತಿ ವಹಿವಾಟಿಗೆ, ಮೊದಲಿಗಿಂತ ಹೆಚ್ಚು ಶುಲ್ಕವನ್ನು ಬ್ಯಾಂಕ್ ವಿಧಿಸುತ್ತದೆ. ದೇಶಾದ್ಯಂತ ಎಲ್ಲಾ  ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಎಟಿಎಂಗಳಿಂದ ನಗದು  ಡ್ರಾ ಮಾಡುವ ನಿಯಮಗಳನ್ನು ಬದಲಾಯಿಸಿವೆ. ಹಣ ಡ್ರಾ ಮಾಡಿದರೆ 15 ರಿಂದ 25 ರೂ.ವರೆಗೆ  ಶುಲ್ಕವನ್ನು ಬ್ಯಾಂಕ್ ಗಳು ವಿಧಿಸುತ್ತಿವೆ. 

ಬ್ಯಾಂಕಿನ ಹೊಸ ನಿಯಮಗಳು ಏನು ಹೇಳುತ್ತವೆ ? 
SBI ATM ಶುಲ್ಕ :
ಮೆಟ್ರೋ ನಗರಗಳಲ್ಲಿ ಕಾರ್ಡ್ ಅನ್ನು ಬಳಸಿದರೆ, ಇಲ್ಲಿ ಉಚಿತ ವಹಿವಾಟುಗಳ ಸಂಖ್ಯೆ 3 ಕ್ಕೆ ಸೀಮಿತವಾಗಿರುತ್ತದೆ.  ಮೂರು ವಹಿವಾಟಿನ ನಂತರದ ಬಳಕೆಗೆ,  ಬ್ಯಾಂಕ್ 10 ರೂ. ನಶುಲ್ಕ ವಿಧಿಸುತ್ತದೆ. ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ವಹಿವಾಟು ನಡೆಸಿದರೆ ಪ್ರತಿ ವಹಿವಾಟಿಗೆ 20 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಇದಲ್ಲದೇ ಗ್ರಾಹಕರು ಜಿಎಸ್‌ಟಿಯನ್ನೂ  ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್ ಧಾರಣೆ

PNB ATM ಶುಲ್ಕ  : 
ಮೆಟ್ರೋ ನಗರಗಳಲ್ಲಿ ಕಾರ್ಡ್ ಅನ್ನು ಬಳಸಿದರೆ, ಐದು ಬಾರಿ ಉಚಿತ ವಹಿವಾಟು ನಡೆಸಬಹುದು. ಈ ಐದು ಉಚಿತ ಮಿತಿಯನ್ನು  ದಾಟಿದ ಬಳಿಕ  ಪ್ರತಿ  ವಹಿವಾಟಿನ ಮೇಲೆ ಬ್ಯಾಂಕ್ 10 ರೂ. ವಿಧಿಸುತ್ತದೆ. ಬೇರೆ ಬ್ಯಾಂಕ್‌ನ ಎಟಿಎಂನಿಂದ ವಹಿವಾಟು ನಡೆಸಿದರೆ, ಮೆಟ್ರೋ ನಗರಗಳಲ್ಲಿ 3 ಉಚಿತ ವಹಿವಾಟು ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಉಚಿತ ವಹಿವಾಟುಗಳ ನಿಯಮವಿದೆ.

ಪ್ರತಿ ವಹಿವಾಟಿನ ಮೊತ್ತ :
ಆರು ಮೆಟ್ರೋ ನಗರಗಳಲ್ಲಿ ಬ್ಯಾಂಕಿನ ಎಟಿಎಂನಿಂದ ಮೊದಲ 3 ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ.   ಈ ಆರು ಮೆಟ್ರೋ ನಗರಗಳೆಂದರೆ, ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್. ಈ ಮೂರು  ಫ್ರೀ ಟ್ರಾನ್ಸಕ್ಶನ್ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿದೆ. ಆದರೆ, ಮೆಟ್ರೋ ಅಲ್ಲದ ನಗರಗಳಲ್ಲಿ 5 ಬಾರಿ ಎಟಿಎಂಗಳಿಂದ ಹಣವನ್ನು ಯಾವುದೇ ಶುಲ್ಕವಿಲ್ಲದೆ  ಪಡೆಯಬಹುದು. ಈ ಹಿಂದೆ ನಿಗದಿತ ಮಿತಿಯ ನಂತರದ ಮೆಟ್ರೋ ನಗರಗಳಲ್ಲಿ ಪ್ರತಿ ಹಣಕಾಸಿನ   ವಹಿವಾಟಿಗೆ 20 ರೂ.  ಮತ್ತು ಹಣಕಾಸೇತರ ವಹಿವಾಟಿಗೆ 8.50 ರೂ. ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಈಗ ಅದನ್ನು 21 ರೂ.ಗೆ ಹೆಚ್ಚಿಸಲಾಗಿದೆ. ಎಟಿಎಂ ಯಂತ್ರಗಳ ಅಳವಡಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ವೆಚ್ಚಗಳಿಂದಾಗಿ ವಹಿವಾಟು ಶುಲ್ಕವನ್ನು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಇದನ್ನೂ ಓದಿ : Electric Bike: ಕೇವಲ 999 ರೂ.ಗೆ ಈ ಇ-ಬೈಕ್ ಬುಕ್ ಮಾಡಿ, 120KM ಮೈಲೇಜ್ ನೀಡುತ್ತದೆ

ಈ ಶುಲ್ಕವನ್ನು ಹೀಗೆ ಉಳಿಸಿ :
ಈ ಶುಲ್ಕದಿಂದ ಅನುಭವಿಸುವ ತೊಂದರೆಯಿಂದ ಹೊರಬರಬೇಕಾದರೆ,  ICICI ಬ್ಯಾಂಕ್ ವೆಲ್ತ್ ಖಾತೆಯನ್ನು ಬಳಸಬಹುದು. ಏಕೆಂದರೆ ಈ ಖಾತೆಯಲ್ಲಿ ಡೆಬಿಟ್ ಕಾರ್ಡ್‌ನ ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ.  ICICI ಬ್ಯಾಂಕ್ ATM ನಿಂದ ಹಣವನ್ನು  ಡ್ರಾ ಮಾಡಿದರೆ,  ಒಂದು ರೂಪಾಯಿ ಶುಲ್ಕ ಕೂಡಾ ವಿಧಿಸಲಾಗುವುದಿಲ್ಲ. ಆದರೆ, ಬೇರೆ ಬ್ಯಾಂಕ್‌ನ ಎಟಿಎಂನಿಂದ ಹಣವನ್ನು  ಡ್ರಾ ಮಾಡಿದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News