ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಅನೇಕ ಉತ್ತಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಮೋಟೋವೋಲ್ಟ್ ಮಂಗಳವಾರ ತನ್ನ ಹೊಸ ಇ-ಬೈಕ್ ಬಿಡುಗಡೆ ಮಾಡಿದೆ. ಇದಕ್ಕೆ URBN ಇ-ಬೈಕ್ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ ನೀವು ಈ ಇ-ಬೈಕ್ ಅನ್ನು ಕೇವಲ 999 ರೂ.ಗಳಲ್ಲಿ ಬುಕ್ ಮಾಡಬಹುದು. ಇದನ್ನು ಪೂರ್ಣ ಚಾರ್ಜ್ ಮಾಡಿದ್ರೆ 120KM ಮೈಲೇಜ್ ನೀಡಲಿದೆ. ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
URBN ಇ-ಬೈಕ್ನ ವಿಶೇಷತೆ ಏನು..?
ಕಂಪನಿಯು ಈ ಇ-ಬೈಕ್ನ ಬೆಲೆಯನ್ನು ಕೇವಲ 49,999 ರೂ.ಗೆ ನಿಗದಿಪಡಿಸಿದೆ. ಇದನ್ನು Motovolt ಕಂಪನಿಯ ವೆಬ್ಸೈಟ್ನಲ್ಲಿ ಮತ್ತು 100+ Physical Retail ಪಾಯಿಂಟ್ಗಳಲ್ಲಿ 999 ರೂ.ಗೆ ಬುಕ್ ಮಾಡಬಹುದು. ನೀವು ಇದನ್ನು ಸುಲಭ EMI ಕಂತುಗಳಲ್ಲಿ ಖರೀದಿಸಬಹುದು. ವಿಶೇಷವೆಂದರೆ ಇದನ್ನು ಚಲಾಯಿಸಲು ನಿಮಗೆ ಯಾವುದೇ ಪರವಾನಗಿ ಅಥವಾ ನೋಂದಣಿಯ ಅಗತ್ಯವಿಲ್ಲ.
ಇದನ್ನೂ ಓದಿ: Indian Railway: ದೀಪಾವಳಿಗೆ ಬಂಪರ್ ಘೋಷಣೆ: 11 ಲಕ್ಷ ಉದ್ಯೋಗಿಗಳ ಖಾತೆಗೆ ಬೀಳಲಿದೆ ರೂ.18000 ಬೋನಸ್!
Motovolt URBN ಈ-ಬೈಕ್ Removable BIS-ಅನುಮೋದಿತ ಬ್ಯಾಟರಿ ಹೊಂದಿದೆ. ಇದು ಪೆಡಲ್ ಅಸಿಸ್ಟ್ ಸೆನ್ಸಾರ್ನೊಂದಿಗೆ ಬರುತ್ತದೆ. ಪೆಡಲ್ ಅಥವಾ ಸ್ವಯಂಚಾಲಿತ ಮೋಡ್ ಸೇರಿದಂತೆ ಹಲವು ಮೋಡ್ಗಳನ್ನು ಇದರಲ್ಲಿ ನೀಡಲಾಗಿದೆ. ಇದರ ಬ್ಯಾಟರಿಯು ನಿಮಗೆ ಸಂಪೂರ್ಣ ಚಾರ್ಜ್ನಲ್ಲಿ 120KM ವರೆಗಿನ ವ್ಯಾಪ್ತಿಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೇ ಇದು ಇಗ್ನಿಷನ್ ಕೀ ಸ್ವಿಚ್, ಹ್ಯಾಂಡಲ್ ಲಾಕ್, ಹಿಂಬದಿ ಮತ್ತು ಮುಂಭಾಗದ ಡಿಸ್ಕ್ ಬ್ರೇಕ್ಗಳು ಮತ್ತು ಹೈಡ್ರಾಲಿಕ್ ರಿಯರ್ ಶಾಕರ್ಗಳನ್ನು ಹೊಂದಿರುತ್ತದೆ.
URBN ಇ-ಬೈಕ್ ಒಂದು ಸ್ಮಾರ್ಟ್ ಇ-ಸೈಕಲ್ ಆಗಿದ್ದು, ಇದು ಸಮಗ್ರ ಸ್ಮಾರ್ಟ್ಫೋನ್ ಅಪ್ಲಿಕೇಶನ್ನೊಂದಿಗೆ ಬರುತ್ತದೆ. ಸ್ಥಳೀಯ ಸಂಚಾರಕ್ಕೆ ಇದು ಸೂಕ್ತ ರೈಡ್ ಎಂದು ಕಂಪನಿ ಹೇಳುತ್ತದೆ. ಇದು ಕೇವಲ 40kg ತೂಕವಿದ್ದು, 25kmph ಗರಿಷ್ಠ ವೇಗವನ್ನು ಹೊಂದಿದೆ. ಇದರ ಬ್ಯಾಟರಿಯನ್ನು ಚಾರ್ಜ್ ಮಾಡಲು 4 ಗಂಟೆ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: RBI Repo Rate Hike: ಮತ್ತಷ್ಟು ಹೆಚ್ಚಾಗಲಿದೆಯಾ EMI ಹೊರೆ? ಬುಧವಾರ ಆರಂಭಗೊಳ್ಳಲಿದೆ RBI MPC ಸಭೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.