ನವದೆಹಲಿ - Rupee Slumps Record Low: ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು (Russia-Ukraine War) ಸರ್ವಾಂಗೀಣ ವಿನಾಶಕ್ಕೆ ಕಾರಣವಾಗಿದೆ. ಕಚ್ಚಾ ತೈಲದ ದಾಖಲೆಯ ಏರಿಕೆಯಿಂದಾಗಿ, ಡಾಲರ್ (Dollar) ಎದುರು ರೂಪಾಯಿ (Rupee) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ (Rupee Slumps Record Low) ಕುಸಿದಿದೆ. ಇಂದು ಅಂದರೆ ಸೋಮವಾರದ ಆರಂಭಿಕ ವಹಿವಾಟಿನಲ್ಲಿ, ಯುಎಸ್ ಕರೆನ್ಸಿ ಡಾಲರ್ ಎದುರು ರೂಪಾಯಿ 76.92 ಕ್ಕೆ ಕುಸಿದಿದೆ. ಇದಾದ ನಂತರ ಕಡಿಮೆ ಮಟ್ಟವಾದ 76.96 ತಲುಪಿದೆ.  ಆದರೆ, ಶುಕ್ರವಾರದ ಮಾರುಕಟ್ಟೆಯ ಮುಕ್ತಾಯಕ್ಕೂ ಮುನ್ನ ಭಾರತೀಯ ಕರೆನ್ಸಿ ಡಾಲರ್ ಎದುರು 76.16 ಇತ್ತು.


COMMERCIAL BREAK
SCROLL TO CONTINUE READING

ರೂಪಾಯಿ ದಾಖಲೆಯ ಕುಸಿತ
ರಷ್ಯಾ-ಉಕ್ರೇನ್ ವಿವಾದದ ಮಧ್ಯೆ, ರೂಪಾಯಿಯ ಈ ದೊಡ್ಡ ಕುಸಿತವು ಭಾರತದ ಮೇಲೆ ಸರ್ವತೋಮುಖ ಪರಿಣಾಮ ಬೀರಲಿದೆ. ಇದು ಹಣದುಬ್ಬರವನ್ನು (Inflation) ಹೆಚ್ಚಿಸುತ್ತದೆ, ಜೊತೆಗೆ ದೇಶದ ವ್ಯಾಪಾರ (Trade Deficit) ಮತ್ತು ಚಾಲ್ತಿ ಖಾತೆ (Currend Deficit) ಕೊರತೆಯನ್ನು ಹೆಚ್ಚಿಸುತ್ತದೆ. ಇದು ಆರ್ಥಿಕ ಬೆಳವಣಿಗೆಯ ವೇಗದ ಮೇಲೂ ಪರಿಣಾಮ ಬೀರಲಿದೆ. ಈ ಕುಸಿತದ ಪರಿಣಾಮ ಭಾರತದ ಆರ್ಥಿಕತೆಯ ಮೇಲೆ ಬಲವಾದ ಪ್ರಭಾವ ಬೀರಲಿದೆ.


ಇದನ್ನೂ ಓದಿ-Russia-Ukraine War:ಯುದ್ಧದ ನಡುವೆಯೇ 11 ವರ್ಷದ ಬಾಲಕನ 1000 ಕೀ.ಮೀ ಪಯಣ, 'ಹೀರೋ' ಎಂದ ಸರ್ಕಾರ


ಇನ್ನೂ ಕುಸಿಯಲಿದೆ
ಸಿಆರ್ ಫಾರೆಕ್ಸ್ ಅಡ್ವೈಸರಿಯ ಪ್ರಕಾರ, ವಿಶ್ವಾದ್ಯಂತದ ಬಿಕವಾಲಿ ಕಾರಣ  ಭಾರತೀಯ ಷೇರು ಮಾರುಕಟ್ಟೆಯು ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದೆ. ಜೊತೆಗೆ ಮಾರ್ಚ್ ನಿಂದ ಇದುವರೆಗೆ  ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ 16,800 ಕೋಟಿ ರೂ.ಗೂ ಹೆಚ್ಚು ಹಣವನ್ನು ಹಿಂಪಡೆದಿದ್ದಾರೆ. ಮುಂದೆಯೂ ಮಾರುಕಟ್ಟೆಯ ಸ್ಥಿತಿ ಹೀಗೆಯೇ ಮುಂದುವರೆಯುವ ನಿರೀಕ್ಷೆಯಿದೆ. ಇನ್ನೊಂದೆಡೆ ಏರುತ್ತಿರುವ ಕಚ್ಚಾತೈಲ ಬೆಲೆ ಹೀಗೆಯೇ ಮುಂದುವರಿದರೆ ಡಾಲರ್ ಎದುರು ರೂಪಾಯಿ ಮತ್ತಷ್ಟು ಕುಸಿಯಲಿದೆ.


ಇದನ್ನೂ ಓದಿ-ಕೈವ್ ನತ್ತ ಧಾವಿಸುತ್ತಿರುವ ಶತ್ರು ಪಡೆ, ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ


ಕಚ್ಚಾತೈಲದ ಬೆಲೆ ರಾಕೆಟ್‌ ವೇಗದಲ್ಲಿ ಏರಿಕೆಯಾಗಿದೆ
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಸರಕುಗಳ ಬೆಲೆಗಳು ಗಗನಕ್ಕೇರಿವೆ. ಕಚ್ಚಾ ತೈಲದ ಬೆಲೆ ಪ್ರಸ್ತುತ ರಾಕೆಟ್‌ಗಿಂತ ವೇಗವಾಗಿ ಏರಿಕೆಯಾಗುತ್ತಿವೆ. ಕಚ್ಚಾ ತೈಲವು $ 128 ತಲುಪಿದೆ, ಇದು ವಿಶ್ವಾದ್ಯಂತದ ಆರ್ಥಿಕತೆಗಳು ಮತ್ತು ಷೇರು ಮಾರುಕಟ್ಟೆಗಳಿಗೆ ದೊಡ್ಡ ಹೊಡೆತ ಎಂದೇ ಹೇಳಬಹುದು. ಈ ಕಾರಣದಿಂದಾಗಿ, ಜಗತ್ತಿನಲ್ಲಿ ಹಣದುಬ್ಬರ ಹೆಚ್ಚಾಗುವುದು ಮಾತ್ರವಲ್ಲದೆ, ಜಾಗತಿಕ ಬೆಳವಣಿಗೆಯ ದರ ಕುಸಿತಕ್ಕೂ ಕೂಡ ಕಾರಣವಾಗಲಿದೆ.


ಇದನ್ನೂ ಓದಿ-Russia-Ukraine War: ರಷ್ಯಾನಲ್ಲಿ Marshal Law ಜಾರಿಗೆ Vladimir Putin ನಕಾರ, ಉಕ್ರೇನ್ ಬೆಂಬಲಿಸುವ ದೇಶಗಳಿಗೆ ಹೊಸ ಧಮ್ಕಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.