Reserve Bank of India : ದೇಶದಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿವೆ. ಆದರೆ ದಿವಾಳಿಯಾಗಿರುವಂಥ ಅನೇಕ ಬ್ಯಾಂಕ್ ಗಳ ಬಗ್ಗೆ ನಾವು ಕೇಳಿರುತ್ತೇವೆ. ನಷ್ಟದಲ್ಲೇ ನಡೆಯುತ್ತಿರುವ ಬ್ಯಾಂಕ್ ಗಳು ಕೂಡಾ ಇವೆ. ಹೀಗಾಗಿ ಯಾವ ಬ್ಯಾಂಕ್ ಸುರಕ್ಷಿತವಾಗಿದೆ ಎನ್ನುವ ಮಾಹಿತಿ ಜನ ಸಾಮಾನ್ಯರ ಬಳಿ ಇರುವುದಿಲ್ಲ. ಇದೀಗ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಈ ಮೂಲಕ ನಿಮ್ಮ ಖಾತೆ ಯಾವ ಬ್ಯಾಂಕ್‌ನಲ್ಲಿದೆ ಮತ್ತು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೀವು ಪರಿಶೀಲಿಸಬಹುದು.  


COMMERCIAL BREAK
SCROLL TO CONTINUE READING

ದೇಶೀಯ ಮಟ್ಟದಲ್ಲಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ  ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಪ್ರಮುಖ ಬ್ಯಾಂಕ್‌ಗಳಾಗಿ ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ದೇಶದ ಹಣಕಾಸು ವ್ಯವಸ್ಥೆಯ ಮಟ್ಟದಲ್ಲಿ, ಈ ಬ್ಯಾಂಕುಗಳು  ದೊಡ್ಡ ಪಾತ್ರ ವಹಿಸುತ್ತದೆ ಎಂದು ಆರ್ ಬಿಐ ಹೇಳಿದೆ. ಆಗಸ್ಟ್ 2015 ರಿಂದ, ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹಣಕಾಸು ವ್ಯವಸ್ಥೆಗೆ ಮುಖ್ಯವಾದ ಬ್ಯಾಂಕ್‌ಗಳ ಹೆಸರುಗಳ ಮಾಹಿತಿಯನ್ನು ಅದೇ ತಿಂಗಳಲ್ಲಿ ಒದಗಿಸುತ್ತಿದೆ. 


ಇದನ್ನೂ ಓದಿ : Ayodhya Trains: ಅಯೋಧ್ಯೆ ರಾಮಮಂದಿರ ಭೇಟಿಗಾಗಿ ಯೋಜಿಸುತ್ತಿರುವವರಿಗೆ ಗುಡ್ ನ್ಯೂಸ್


ನಿಯಮಗಳ ಪ್ರಕಾರ, ಸಿಸ್ಟಮ್ ಮಟ್ಟದಲ್ಲಿ (SIS) ಪ್ರಾಮುಖ್ಯತೆಯ ಆಧಾರದ ಮೇಲೆ ಬ್ಯಾಂಕ್ ಗಳನ್ನು ನಾಲ್ಕು ವಿಭಾಗಗಳಲ್ಲಿ ಇರಿಸಬಹುದು. ಅಂದರೆ ಬಕೆಟ್ ಒಂದರಿಂದ ನಾಲ್ಕುಹೀಗೆ ನಾಲ್ಕು ವಿಭಾಗಗಲ್ಲಿ ವಿಂಗಡಿಸಬಹುದು. ಈ ಪೈಕಿ ಬಕೆಟ್ ಒಂದು ಎಂದರೆ ಕಡಿಮೆ ಪ್ರಾಮುಖ್ಯತೆಯ ಬ್ಯಾಂಕ್. ಪ್ರಸ್ತುತ ಎಸ್‌ಬಿಐ ಬಕೆಟ್ ಮೂರರಂದ ನಾಲ್ಕಕ್ಕೆ ಏರಿದರೆ ಎಚ್‌ಡಿಎಫ್‌ಸಿ ಒಂದರಿಂದ ಎರಡನೇ ವರ್ಗಕ್ಕೆ ಸ್ಥಳಾಂತರಗೊಂಡಿದೆ. ಐಸಿಐಸಿಐ ಬ್ಯಾಂಕ್ ಕಳೆದ ವರ್ಷದಂತೆ ಅದೇ ವರ್ಗ ಆಧಾರಿತ ರಚನೆಯಲ್ಲಿ ಉಳಿದಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.   ಇದರರ್ಥ ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಉನ್ನತ ವರ್ಗಕ್ಕೆ ಏರಿವೆ. 


ಇತ್ತೀಚಿನ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ,  ಮಾರ್ಚ್ 31, 2025 ರವರೆಗೆ, ಎಸ್‌ಬಿಐ ತನ್ನ ರಿಸ್ಕ್ ವೆಯ್ಟೆಡ್ ಸ್ವತ್ತುಗಳ (ಆರ್‌ಡಬ್ಲ್ಯೂಎ) 0.60 ಪ್ರತಿಶತವನ್ನು ಸಿಇಟಿ1 ಬಂಡವಾಳವಾಗಿ ನಿರ್ವಹಿಸಬೇಕಾಗುತ್ತದೆ, ಆದರೆ ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ತಮ್ಮ ರಿಸ್ಕ್ ವೆಯ್ಟೆಡ್ ಸ್ವತ್ತುಗಳ (ಆರ್‌ಡಬ್ಲ್ಯೂಎ) 0.20 ರಷ್ಟು ಹೆಚ್ಚುವರಿ ಸಿಇಟಿ1 ಆಗಿ ನಿರ್ವಹಿಸಬೇಕಾಗುತ್ತದೆ. 


ಇದನ್ನೂ ಓದಿ : ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ ಬಂಗಾರದ ಬೆಲೆ ! 3 ವಾರಗಳ ಗರಿಷ್ಠ ಮಟ್ಟದಲ್ಲಿ ಚಿನ್ನ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.